ಬೆಂ-ಮುಂ ಕಾರಿಡಾರ್: ಕರ್ನಾಟಕಕ್ಕೆ ಬಂದಿದ್ದೇನು?

ಬೆಂಗಳೂರು, ಫೆ.19: ಬ್ರಿಟನ್ ಕೃಪೆಯಿಂದಾಗಿ ಬೆಂಗಳೂರು ಮತ್ತು ಮುಂಬೈ ನಡುವೆ ಮಾಯದಂತಹ ಕಾರಿಡಾರ್ ಯೋಜನೆ ಮೈದಾಳುವುದು ಖಚಿತವಾಗಿದೆ. ಇದು ನಿಜಕ್ಕೂ ಬೆಂಗಳೂರು ಅಥವಾ ಮುಂಬೈ ಪಾಲಿಗಷ್ಟೇ ವರದಾನವಲ್ಲ. ಉಭಯ ರಾಜ್ಯಗಳ ನಡುವೆ ಕಾರಿಡಾರ್ ಉದ್ದಕ್ಕೂ ಹಾದುಹೋಗುವ ಜಿಲ್ಲೆಗಳಿಗೂ ಶುಭ ಸುದ್ದಿಯೇ.

950 ಕಿಮೀ ಉದ್ದದ ಕಾರಿಡಾರ್ ಯೋಜನೆ ಅಂದರೆ ಏನು ಸುಮ್ಮನೆಯ ಮಾತೇ? ಈ ಯೋಜನೆ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಕರ್ನಾಟಕದ ಶೇ. 30ರಷ್ಟು ಭಾಗದಲ್ಲಿ ಉದ್ಯೋಗ ಪರ್ವ ಸೃಷ್ಟಿಯಾಗುವುದು ಖಂಡಿತ.
ಯಾವೆಲ್ಲಾ ಜಿಲ್ಲೆಗಳಲ್ಲಿ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ?

Britain PM Cameron- Bangalore-Mumbai Corridor Project districts to get benefited
ಪ್ರಸ್ತಾವಿತ ಕಾರಿಡಾರ್ ಯೋಜನೆ ಅನುಷ್ಠಾಣಗೊಂಡರೆ ರಾಜ್ಯದ ಬೆಂಗಳೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಢ, ಬೆಳಗಾವಿ ಮತ್ತು ಚಿಕ್ಕೋಡಿ ಭಾಗಗಳಲ್ಲಿ ಕೈಗಾರಿಕಾ ಬೆಳವಣಿಗೆ, ಉದ್ಯೋಗ ಸೃಷ್ಟಿ, ಆರ್ಥಿಕಾಭಿವೃದ್ಧಿಗೆ ಸುವರ್ಣಾವಕಾಶ ಒದಗಿಬರಲಿದೆ. ಈ ಮೇಲಿನ ಭಾಗಗಳ ಜತೆಗೆ ಇನ್ನೂ ಕೆಲ ಪ್ರದೇಶಗಳೂ ಸೇರ್ಪೆಡೆಯಾಗುವ ಲಕ್ಷಣಗಳಿವೆ.

ಇನ್ನು ಕರ್ನಾಟಕದ ಗಡಿ ದಾಟುತ್ತಿದ್ದಂತೆ ಮಹಾರಾಷ್ಟ್ರದ ಮುಂಬೈ, ಸತಾರ, ಪುಣೆ, ಕೊಲ್ಲಾಪುರ ಮೂಲಕ ಕಾರಿಡಾರ್ ಹಾದುಗೋಗಲಿದ್ದು, ಆ ನಗರಗಳು ಪುರೋಭಿವೃದ್ಧಿಗಾಣಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+