ಅನ್ನದಾತರ ಪರವಾಗಿ ಹೋರಾಟಕ್ಕೆ ಸಿದ್ದ; ದೇವೇಗೌಡ

H D Deve Gowda
ಬೆಂಗಳೂರು, ನ.5 : ಕೃಷಿಗೆ ಯೋಗ್ಯವಲ್ಲದ ಜಮೀನನ್ನು ಕೈಗಾರಿಕೆಗೆ ನೀಡಲಿ. ಬಳ್ಳಾರಿಯಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಕಬಳಿಸಲಾಗಿದೆ ಮತ್ತು ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ನಾಡಿನ ರೈತರಿಗೆ ತೊಂದರೆಯಾದರೆ ಈ ದೇವೇಗೌಡ ಸುಮ್ಮನೆ ಕೂರುವುದಿಲ್ಲ, ಅವರ ಪರ ಹೋರಾಟಕ್ಕೆ ಸದಾ ಸಿದ್ದ ಎಂದು ಮಾಜಿ ಪ್ರಧಾನಿ ದೇವೇಗೌಡ ಗುಡುಗಿದ್ದಾರೆ.

ಬಳ್ಳಾರಿಯಿಂದ ನಗರಕ್ಕಿಂದು ಆಗಮಿಸಿದ ರೈತರ ಪಾದಯಾತ್ರೆಯನ್ನು ಬೆಂಬಲಿಸಿ ಮಾತನಾಡುತ್ತಾ, ಬಳ್ಳಾರಿ ಬಳಿಯ ಸುಮಾರು 4600 ಎಕರೆ ಜಮೀನನ್ನು ಮಿತ್ತಲ್ ಕಂಪೆನಿಗೆ ನೀಡಲಾಗಿದೆ. ಇದಕ್ಕೆ ಪರಿಹಾರವಾಗಿ ರೈತರಿಗೆ ಎಕರೆಗೆ ಐದು ಲಕ್ಷ ರುಪಾಯಿ ಮಾತ್ರ ನೀಡಲಾಗಿದೆ. ರೈತರಿಗೆ ನೀಡುವ ಪರಿಹಾರ ಹಣವನ್ನು ರು.70 ಲಕ್ಷಕ್ಕೆ ಏರಿಸಲಿ. ಕೈಗಾರಿಕೆಯಿಂದ ಉದ್ಯೋಗ ಸೃಷ್ಟಿ ಯಾಗುತ್ತದೆ ನಿಜ ಆದರೆ, ಇದರಿಂದ ರೈತರಿಗೆ ತೊಂದರೆಯಾದರೆ ನಾನು ಸುಮ್ಮನಿರುವುದಿಲ್ಲ ಎಂದು ದೇವೇಗೌಡ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

12 ದಿನದಿಂದ ಪಾದಯಾತ್ರೆ ನಡೆಸಿದ ರೈತರು ಬಳ್ಳಾರಿಯಿಂದ ಇಂದು ನಗರಕ್ಕೆ ಆಗಮಿಸಿದರು. ಇವರ ಪಾದಯಾತ್ರೆಗೆ ಕಾಂಗ್ರೆಸ್ ಮುಖಂಡರಾದ ಉಗ್ರಪ್ಪ, ಅನಿಲ್ ಲಾಡ್, ಜೆಡಿಎಸ್ ಮುಖಂಡರಾದ ದತ್ತಾ, ಬಂಡೆಪ್ಪ ಕಾಶಂಪುರ ಬೆಂಬಲ ವ್ಯಕ್ತ ಪಡಿಸಿ ಸ್ವಾಗತಿಸಿದರು. ದಲಿತ ಸಂಘರ್ಷ ಸಮಿತಿ ಕೂಡ ರೈತರ ಈ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿದೆ.

----------------------------------------

Former Prime Minister and son of the soil H.D.Deve Gowda reiterates, he is prepared to do any thing and every thing to protect the interests of farmers in Karnataka

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+