ಸಾಲಮನ್ನಾ ಹಿಂದಿನ ಜಾತಿ ಲೆಕ್ಕದ ಬಗ್ಗೆ ಕೇಳಲಾದ ಪ್ರಶ್ನೆಗೆ ದೇವೇಗೌಡರು ಗರಂ
Recommended Video

ಬೆಂಗಳೂರು, ಜುಲೈ 07: ನಗರದ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೇವೇಗೌಡರಿಗೆ ಸಾಲಮನ್ನಾ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಗರಂ ಆಗಿ ಪ್ರತಿಕ್ರಿಯಿಸಿದರು.
ಸಾಲಮನ್ನಾದಿಂದ ಹೆಚ್ಚಿನ ಅನುಕೂಲ ಒಕ್ಕಲಿಗ ಸಮುದಾಯಕ್ಕೇ ಆಗುತ್ತಿದೆಯಂತೆ, 32% ಲಾಭ ಒಕ್ಕಲಿಗೆ ಸಿಗಲಿದೆಯಂತಲ್ಲಾ? ಎಂದು ಪತ್ರಕರ್ತರೊಬ್ಬರು ದೇವೇಗೌಡರನ್ನು ಪ್ರಶ್ನಿಸಿದರು.
ಇದರಿಂದ ಅಲ್ಪ ಸಿಟ್ಟಾದ ದೇವೇಗೌಡರು, ಈ ಲೆಕ್ಕ ಯಾರು ಮಾಡಿದವರು, ಸಾಲಮನ್ನಾ ಮಾಡುವ ಮುಂಚೆ ಜಾತಿ ಲೆಕ್ಕ ಮಾಡಿಲ್ಲ, ಬೀದರ್, ಗುಲ್ಬರ್ಗ, ಬಾಗಲಕೋಟೆಗಳಲ್ಲಿ ಒಕ್ಕಲಿಗರು ಇದ್ದಾರಾ? ಎಂದು ತಿರುಗಿ ಪ್ರಶ್ನೆ ಮಾಡಿದರು.

ಸ್ವಜಾತಿ ಪ್ರೇಮದಿಂದ ಸಾಲಮನ್ನಾ ಮಾಡಲಾಗಿದೆ ಎಂಬರ್ಥದ ಪ್ರಶ್ನೆಯಿಂದ ಸಹಜವಾಗಿಯೇ ಸಿಟ್ಟಾದ ದೇವೇಗೌಡರು, ಇಲ್ಲಿ ಪ್ರಸ್ತುತ ರಾಜಕೀಯ ಮಾತನಾಡಬಾರದು ಎಂದು ನಿಶ್ಚಯಿಸಿದ್ದೇನೆ ಎಂದರು.
ಸಾಲಮನ್ನಾ ದಿಂದ ಯಾರಿಗೆ ಲಾಭವಾಗಲಿದೆ, ಯಾವ ಜಿಲ್ಲೆಯ ರೈತರಿಗೆ ಎಷ್ಟು ಲಾಭ, ಯಾವ ಜಾತಿಯವರಿಗೆ ಎಷ್ಟು ಲಾಭ ಎಂಬಿತ್ಯಾದಿ ಮಾಹಿತಿಗಳನ್ನು ಮುಖ್ಯಮಂತ್ರಿಗಳೇ ಸೋಮವಾರದಿಂದ ನಡೆಯುವ ಚರ್ಚೆಯಲ್ಲಿ ಸದನಕ್ಕೆ ನೀಡಲಿದ್ದಾರೆ. ಆ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ ಎಂದರು.












Click it and Unblock the Notifications