ಕೋಲಾರ ಜಿಲ್ಲಾಧಿಕಾರಿ ವಿರುದ್ಧ ಕರವೇ ಲಾಠಿ ಚಳವಳಿ
ದಾವಣಗೆರೆ,
ಜು 3: ಸುವರ್ಣ ಭೂಮಿ ಯೋಜನೆಯ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ರೈತರ ಮೇಲೆ ಕೋಲಾರದ ಜಿಲ್ಲಾಧಿಕಾರಿ ಮನೋಜ್ ಕುಮಾರ್ ಮೀನಾ ದೌರ್ಜನ್ಯ ಎಸೆಗಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದೆ. ಜು.4ರಂದು ಕರವೇ ಜಿಲ್ಲಾಘಟಕ ಲಾಠಿ ಚಳವಳಿ ಹಮ್ಮಿಕೊಂಡಿದೆ. id="toptextpromo">ನಗರದ
ಜಯದೇವ ವೃತ್ತದಿಂದ ಲಾಠಿ ಚಳವಳಿ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ. ಮನೋಕ್ ಕುಮಾರ್ ಅವರ ಪ್ರತಿಕೃತಿ ದಹನ ನಂತರ ವಿವಿಧ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಭತ್ತಕ್ಕೆ
ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಮತ್ತು ಈ ಸಂಬಂಧ ಹೋರಾಟ ನಡೆಸುತ್ತಿದ್ದ ರೈತರನ್ನು ಬಂಧಿಸಿರುವುದು ಅನ್ಯಾಯ. ರೈತರನ್ನು ಕೂಡಲೇ ಬಿಡುಗಡೆ ಮಾಡಿ ಅವರ ವಿರುದ್ಧದ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಕರವೇ ಒತ್ತಾಯಿಸುತ್ತಿದೆ. ಕರವೇ ಚಳವಳಿಗೆ ಹಸಿರು ಸೇನೆ, ರಾಜ್ಯ ರೈತ ಸಂಘ ಬೆಂಬಲ ವ್ಯಕ್ತಪಡಿಸಿವೆ. ಹರಿಹರದಲ್ಲಿ ಈಗಾಗಲೇ ರೈತ ಸಂಘ ಒಂದು ಸುತ್ತು ಚಳವಳಿ ನಡೆಸಿದ್ದು, ಮುಂದಿನ ಹಂತದಲ್ಲಿ ಸಾಮೂಹಿಕ ಉಪವಾಸ ಸತ್ಯಾಗ್ರಹ ಕೂರುವ ಎಚ್ಚರಿಕೆಯನ್ನು ನೀಡಿದೆ.











Click it and Unblock the Notifications