ದಾವಣಗೆರೆ: ಕಂದಾಯ ಇಲಾಖೆ 3ಅಧಿಕಾರಿಗಳು ಎಸಿಬಿ ಬಲೆಗೆ
ದಾವಣಗೆರೆ, ಆಗಸ್ಟ್ 18: ಇಲ್ಲಿನ ಹೊನ್ನಾಳಿ ತಾಲೂಕು ಕುಂದೂರು ಗ್ರಾಮ ಲೆಕ್ಕಿಗರ ಕಚೇರಿಯಲ್ಲಿ ಲಂಚ ಸ್ವೀಕರಿಸುವ ವೇಳೆ ಮೂವರು ಅಧಿಕಾರಿಗಳು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.
ಕಂದಾಯ ಇಲಾಖೆ ಮೂವರು ಅಧಿಕಾರಿಗಳು ರೈತ ರುದ್ರೇಶ್ ಎಂಬವವರಿಂದ ಖಾತೆ ಬದಲಾವಣೆಗಾಗಿ 30 ಸಾವಿರ ರೂಪಾಯಿ ಲಂಚ ಕೇಳಿದ್ದರು.

ಕಂದಾಯ ನಿರೀಕ್ಷಕ ಅಜಯ್ ಕುಮಾರ್, ಗ್ರಾಮ ಲೆಕ್ಕಿಗ ಮಲ್ಲಿಕಾರ್ಜುನ್, ಗ್ರಾಮ ಸೇವಕ ವೀರಪ್ಪ ರೈತರಿಂದ ಲಂಚ ಕೇಳಿದ ಅಧಿಕಾರಿಗಳಾಗಿದ್ದಾರೆ.
ಇಂದು ಇವರು ರುದ್ರೇಶ್ ರಿಂದ 23 ಸಾವಿರ ಹಣವನ್ನು ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಈ ಕುರಿತು ಎಸಿಬಿ ಅಧಿಕಾರಿಗಳು ದಾವಣಗೆರೆ ಜಿಲ್ಲಾ ಎಸಿಬಿ ಠಾಣೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ 1988ರ ಅಡಿಯಲ್ಲಿ ಪ್ರಕರಣ ದಾಖಲಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications