ತರಕಾರಿ ಮಾರುಕಟ್ಟೆ: ಯಶವಂತಪುರದಿಂದ ದಾಸನಪುರಕ್ಕೆ ಸ್ಥಳಾಂತರ
ಬೆಂಗಳೂರು, ಮಾರ್ಚ್ 30: ಮಾರಣಾಂತಿಕ ಕೊರೊನಾ ವೈರಸ್ ನ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕು. ಸಾಮಾಜಿಕ ಅಂತರ ಪಾಲನೆ ಮಾಡುವ ದೃಷ್ಟಿಯಿಂದ ಯಶವಂತಪುರ ಎಪಿಎಂಸಿ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಲಾಗುತ್ತಿದೆ.
ಆಲೂಗೆಡ್ಡೆ, ಈರುಳ್ಳಿ, ಬೆಳ್ಳುಳ್ಳಿಯ 480 ಮಳಿಗೆ ಹಾಗೂ ತರಕಾರಿಯ 278 ಮಳಿಗೆಗಳನ್ನು ಯಶವಂತಪುರ ಎಪಿಎಂಸಿಯಿಂದ ದಾಸನಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ ತಾತ್ಕಾಲಿಕವಾಗಿ ಸ್ಥಳಾಂತರವಾಗಲಿದೆ.
ಯಶವಂತಪುರ ಎಪಿಎಂಸಿಯನ್ನು ಸ್ಥಳಾಂತರ ಮಾಡುವ ಉದ್ದೇಶದಿಂದ ದಾಸನಪುರ ಬಳಿ ಪ್ರಾಂಗಣ ನಿರ್ಮಿಸಲಾಗಿದೆ.
ಈ ಕುರಿತು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಆಹಾರ ಮತ್ತು ನಾಗರೀಕ ಭದ್ರತೆ ಖಾತೆ ಸಚಿವ ಗೋಪಾಲಯ್ಯ ಯಶವಂತಪುರ ಮಾರುಕಟ್ಟೆಗೆ ಭೇಟಿ, ಸಂಬಂಧಿತ ಅಧಿಕಾರಿಗಳ ಜೊತೆಗೆ ಚರ್ಚಿಸಿದರು.
ಸೋಮವಾರದಿಂದ (ಮಾರ್ಚ್ 30) ಯಶವಂತಪುರ ಮಾರುಕಟ್ಟೆಯಲ್ಲಿ ವಹಿವಾಟು ನಿಷೇಧಿಸಲಾಗಿದೆ. ಏಪ್ರಿಲ್ 30 ರವರೆಗೆ ತುಮಕೂರು ರಸ್ತೆಯ ದಾಸನಪುರ ಮಾರುಕಟ್ಟೆಯಲ್ಲೇ ಈರುಳ್ಳಿ, ಬೆಳ್ಳುಳ್ಳಿ, ಆಲೂಗೆಡ್ಡಿ, ತರಕಾರಿ ವ್ಯಾಪಾರ ನಡೆಯಲಿದೆ.
ದಿನನಿತ್ಯ ಬಳಸುವ ಅಗತ್ಯ ಸಾಮಗ್ರಿಗಳ ಖರೀದಿಗೆ ನಾಗರಿಕರಿಗೆ ಯಾವುದೇ ತೊಂದರೆ ಆಗದಂತೆ ದೊರಕುವವಂತೆ ನೋಡಿಕೊಳ್ಳಬೇಕು ಎಂದು ವರ್ತಕರಿಗೆ ಮತ್ತು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.