Copra Price: ಕನಿಷ್ಠ ಕೊಬ್ಬರಿ ಖರೀದಿಗೆ ಸೂಚನೆ: ನೋಂದಣಿಗಾಗಿ ಓಡೋಡಿ ಬಂದ ರೈತರಲ್ಲಿ ಆತಂಕ

ಹಾಸನ, ಫೆಬ್ರವರಿ 08: ರಾಜ್ಯದಲ್ಲಿ ಕೈತುಂಬ ಕೊಬ್ಬರಿ ಉತ್ಪನ್ನವಿದ್ದರು ಸಹಿತ ರೈತರು ಆತಂಕಕ್ಕೀಡಾಗಿದ್ದಾರೆ. ಏಕೆಂದರೆ ರಾಜ್ಯ ಸರ್ಕಾರ ಕೇವಲ 62000 ಟನ್ ಕೊಬ್ಬರಿಯನ್ನಷ್ಟೇ ಖರೀದಿಸಬೇಕು ಎಂದು ಕೇಂದ್ರ ಸರ್ಕಾರ ಷರತ್ತು ವಿಧಿಸಿದೆ. ಇದು ರೈತರ ನಿದ್ದೆಗೆಡಿಸಿದ್ದು, ಖರೀದಿ ಕೇಂದ್ರದ ಮುಂದೆ ದಿನವೀಡಿ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ.

ಕೇಂದ್ರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ರೈತರಿಗೆ ಕೊಬ್ಬರಿ ಖರೀದಿಗೆ ನಾಫೆಡ್ ಕೇಂದ್ರ ತೆರೆದಿದ್ದಾರೆ. ಹಾಸನ ಹಿರಿಸಾವೆ ಕೇಂದ್ರದ ಮುಂದೆ ನೋಂದಣಿಗಾಗಿ ತೆಂಗು ಬೆಳೆಗಾರರು ನಾಮುಂದೆ ತಾಮುಂದೆ ಎಂದು ಕ್ಯೂನಲ್ಲಿ ನಿಂತಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.

Copra: Centre instructed to Buy only 62000 copra from growers: Farmers gathers for registration

ಸದ್ಯ ರೈತರು ಒಂದು ಲಕ್ಷಕ್ಕೂ ಅಧಿಕ ಟನ್ ಕೊಬ್ಬರಿ ದಾಸ್ತಾನು ಇಟ್ಟುಕೊಂಡಿದ್ದಾರೆ. ಬೆಲೆ ಸಿಗುವ ಹೊತ್ತಿಗೆ ಸರ್ಕಾರ ಖರೀದಿಗೆ ಷರತ್ತು ವಿಧಿಸಿದೆ. ಹೀಗಾಗಿ ತಮ್ಮ ಕೊಬ್ಬರಿ ಮಾರಾಟ ಮಾಡಬೇಕೆಂದು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಮುಗಿಬಿದ್ದ ದೃಶ್ಯ ಕಂಡು ಬಂತು.

ಅಧಿಕ ದಾಸ್ತಾನು ವರ್ತಕರಿಂದ ಆಮಿಷದ ಆರೋಪ

ಅಧಿಕ ದಾಸ್ತಾನು ಇರುವವರು ಕೊಬ್ಬರಿ ವರ್ತಕರು ಆಮಿಷ ಒಡ್ಡುತ್ತಿದ್ದಾರೆ. ರೈತರನ್ನು ಕ್ಯೂನಲ್ಲಿ ನಿಲ್ಲಿಸಿ ಹೆಸರು ಬರೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಅಂಗವಿಕಲರಿಗೆ ಪ್ರತ್ಯೇಕ ನೋಂದಣಿ ವ್ಯವಸ್ಥೆಗೆ ಅವಕಾಶ ಕಲ್ಪಿಸುವಂತೆ ಮನವಿಗಳು ಕೇಳಿ ಬಂದಿವೆ ಎನ್ನಲಾಗಿದೆ.

Copra: Centre instructed to Buy only 62000 copra from growers: Farmers gathers for registration

ತೆಂಗು ಬೆಳೆಗಾರರು ಒಮ್ಮೆಲೆ ನೋಂದಣಿಗೆ ಮುಗಿಬಿದ್ದ ಪರಿಣಾಮ ಸರ್ವರ್ ಡೌನ್ ಆಗಿದೆ. ಬೆರಳಚ್ಚು ಕೊಡಲು ಸಮಸ್ಯೆ ಆಗುತ್ತಿದೆ. ಹೀಗಾಗಿ ಅಧಿಕಾರಿಗಳು ಆಗಿರುವ ಸಮಸ್ಯೆ ಸರಿಪಡಿಸಿ, ಮುಂದೆ ಯಾವುದೇ ತಾಂತ್ರಿಕ ಸಮಸ್ಯೆ ಆಗದಂತೆ ಮುಂಜಾಗೃತೆಯಿಂದ ನೋಂದಣಿ ಮಾಡಿಕೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಟೋಕನ್ ನೀಡಿ ನೋಂದಣಿಗೆ ಕ್ರಮ

ರೈತರು ಖರೀದಿ ಕೇಂದ್ರದ ಮುಂದೆ ಈ ಕಡು ಬಿಸಲಿನಲ್ಲಿಯೇ ಜಮಾಯಿಸಿದ್ದಾರೆ. ಇದನ್ನು ಕಂಡು ಸ್ಥಳೀಯ ಶಾಸಕ ಸಿ.ಎನ್. ಬಾಲಕೃಷ್ಣ ಅವರು ಸಹಕಾರಿ ಸಂಘದ ಆವರಣದಲ್ಲಿ ಕುರ್ಚಿ, ಕುಡಿಯಲು ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಿದ್ದಾರೆ ಎಂದು ಸಂಘದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೊಬ್ಬರಿ ಖರೀದಿಗೆ ಸರ್ಕಾರದ ಸೂಚನೆ ವಿಚಾರ ತಿಳಿಯುತ್ತಿದ್ದಂತೆ ರೈತರು ಕೇಂದ್ರದತ್ತ ಮುಖ ಮಾಡಿದರು. ನೂಕು ನುಗ್ಗಲು ಕಂಡು ಬಂತು ಹೀಗಾಗಿ ಮೊದಲು ಬಂದ 500 ಜನರಿಗೆ ಟೋಕನ್ ನೀಡಿ ರಿಜಿಸ್ಟ್ರೇಷನ್ ಮಾಡಿಕೊಳ್ಳಲಾಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸ್ಥಳದಲ್ಲಿದ್ದರು ಎಂದು ತಿಳಿದು ಬಂದಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+