ರಾಹುಲ್ ಭೇಟಿ: ಫ್ಲೆಕ್ಸ್, ಬ್ಯಾನರ್ ಹಾಕದಂತೆ ಪರಮೇಶ್ವರ್ ಮನವಿ

ಹುಬ್ಬಳ್ಳಿ, ಅಕ್ಟೋಬರ್, 09 : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾವೇರಿಗೆ ರೈತರ ಸಮಸ್ಯೆ ಆಲಿಸಲು ಬರುತ್ತಿದ್ದಾರೆ. ಆದ್ದರಿಂದ ಕಾರ್ಯಕರ್ತರು ಅಭಿನಂದನೆ, ಸ್ವಾಗತದ ಫ್ಲೆಕ್ಸ್, ಬ್ಯಾನರ್, ಕಟೌಟ್ ಗಳನ್ನು ಹಾಕಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯ ಪ್ರವಾಸ ಕೈಗೊಂಡ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಕ್ಟೋಬರ್ 10 ರ ಶನಿವಾರದಂದು ಹಾವೇರಿಗೆ ತೆರಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಿದ್ಧತೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಸ್ವಚ್ಛತಾ ಅಭಿಯಾನ ಶುರುವಾಗಿದೆ. ಸರ್ಕಾರಿ ಕಟ್ಟಡಗಳು ಬಣ್ಣದಿಂದ ಕಳೆಗಟ್ಟುತ್ತಿದೆ. ಶಾಲಾ ಮಕ್ಕಳು, ಮಹಿಳೆಯರು ರಾಹುಲ್ ರೊಂದಿಗೆ ಮಾತುಕತೆ ನಡೆಸಲು ನಾನಾ ಪ್ರಶ್ನೆಗಳೊಂದಿಗೆ ಅಣಿಯಾಗಿದ್ದಾರೆ.[ಅಕ್ಟೋಬರ್ 9, 10 ರಾಹುಲ್ ರಾಜ್ಯ ಪ್ರವಾಸ, ಕಾರ್ಯಕ್ರಮಗಳು]

Congress vice president Rahul Gandhi visits Haveri, avoid flex, banners

ಫ್ಲೆಕ್ಸ್, ಬ್ಯಾನರ್ ತೆರವು :

ಜಿಲ್ಲೆಯ ಪ್ರತಿಯೊಂದು ಬೀದಿಗಳಲ್ಲಿ ರಾಹುಲ್ ಗಾಂಧಿ ಬರುವಿಕೆಯ ನಿಮಿತ್ತ ಮೇಲೇರಲು ತಯಾರಾಗಿದ್ದ ಅಭಿನಂದನಾ, ಸ್ವಾಗತ ಬ್ಯಾನರ್ ಗಳನ್ನು ಹಾಕಬಾರದೆಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಮನವಿ ಮಾಡಿದ್ದಾರೆ. ಅವರು ರೈತರಿಗೆ ಸಾಂತ್ವನ ಹೇಳಲು ಬರುತ್ತಿದ್ದಾರೆ. ಹಾಗಾಗಿ ಕಟೌಟ್, ಬ್ಯಾನರ್ ಗಳ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.

ಸ್ವಚ್ಛತಾ ಅಭಿಯಾನ :

ರಾಹುಲ್ ಗಾಂಧಿ ಸುಮಾರು ಆರು ಕಿ.ಮೀ ಪಾದಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದಾರೆ. ಹಾಗಾಗಿ ಗುಡಗೂರು, ಚೆನ್ನಾಪುರ ಮತ್ತು ಮೈದೂರು ಗ್ರಾಮಗಳಲ್ಲಿ ಡಂಗೂರ ಸಾರಿ ಸ್ವಚ್ಛತೆ ಕಾಯ್ದುಕೊಳ್ಳಲು ಮನವಿ ಮಾಡಲಾಗಿದೆ. ಗ್ರಾಮದ ಮುಖಂಡರು ಬೀದಿಯ ಬದಿಯಲ್ಲಿ ಮಲ-ಮೂತ್ರ ವಿಸರ್ಜನೆ ಮಾಡಿದವರಿಗೆ ದಂಡ ವಿಧಿಸುವ ನಿರ್ಣಯ ತೆಗೆದುಕೊಂಡಿದ್ದಾರೆ.

ಸರ್ಕಾರಿ ಗೋಡೆಗಳಿಗೆ ನಾನಾ ಬಣ್ಣಗಳು :

ಬಣ್ಣ ಕಳೆದುಕೊಂಡು ಕಳೆಗುಂದಿದ್ದ ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು, ಬಸ್ ನಿಲ್ದಾಣ, ಗ್ರಾಮ ಪಂಚಾಯತಿ ಕಟ್ಟಡಗಳು ಬಣ್ಣದಿಂದ ಸಿಂಗಾರಗೊಳ್ಳುತ್ತಿದೆ. ರಸ್ತೆಗಳು ಡಾಂಬರ್ ಕಾಣುತ್ತಿವೆ. ತಿಪ್ಪೆಗಳನ್ನು ತೆರವುಗೊಳಿಸಲಾಗಿದೆ. ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ.[ಮೋದಿಗೆ ಬರೀ ಬಟ್ಟೆ ಬದಲಾಯಿಸುವ ಶೋಕಿ: ರಾಹುಲ್ ವಾಗ್ದಾಳಿ]

Congress vice president Rahul Gandhi visits Haveri, avoid flex, banners

ರಾಹುಲ್ ಗೆ ಮಕ್ಕಳ ಪ್ರಶ್ನೆಗಳೇನು?

ಮೈದೂರಿನ ಶಾಲಾ ಮಕ್ಕಳು ರಾಹುಲ್ ಗಾಂಧಿಗೆ ನಾನಾ ಪ್ರಶ್ನೆಗಳನ್ನು ಸಿದ್ಧಮಾಡಿ ಇಟ್ಟುಕೊಂಡಿದ್ದಾರೆ. ಈ ಸಮಯದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ನಿಮ್ಮ ಸಲಹೆಗಳೇನು? ನೀವು ಪ್ರಧಾನ ಮಂತ್ರಿಯಾದರೆ ದೇಶಕ್ಕೆ ಏನು ಕೊಡುಗೆ ಕೊಡುವಿರಿ? ನಮ್ಮ ಶಾಲೆ, ಊರಿನ ವಾತಾವರಣದ ಬಗ್ಗೆ ಏನು ಹೇಳುವಿರಿ? ಹೀಗೆ ನಾನಾ ಪ್ರಶ್ನೆಗಳನ್ನು ಕೇಳಲಿದ್ದಾರೆ.

ಸಾವಿರಾರು ಮಹಿಳೆಯರ ಆಗಮನ :

ಹಾವೇರಿಯ ಮೈದೂರು ಗ್ರಾಮದ ರೈತ ಸಮಾವೇಶದಲ್ಲಿ ಸುಮಾರು 10,000ಕ್ಕೂ ಹೆಚ್ಚು ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನಿಂದ 10, ಗದಗ 15, ಹಾವೇರಿ 20, ಧಾರವಾಡ 25 ಬಸ್ಸ್ ಗಳಲ್ಲಿ ಮಹಿಳಾ ಕಾರ್ಯಕರ್ತರು ಆಗಮಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+