ಜುಲೈ 5ಕ್ಕೆ ಕುಮಾರಸ್ವಾಮಿ ಮೊದಲ ಬಜೆಟ್‌ ಮಂಡನೆ

Recommended Video

      ಜುಲೈ 5ಕ್ಕೆ ಕುಮಾರಸ್ವಾಮಿ ಮೊದಲ ಬಜೆಟ್‌ ಮಂಡನೆ | Oneindia kannada

      ಬೆಂಗಳೂರು, ಜೂನ್ 13: ಸರ್ಕಾರದ ಹಲವು ಯೋಜನೆಗಳಿಗೆ ಹಣಕಾಸಿನ ಕ್ರೋಢೀಕರಣ ಸಲುವಾಗಿ ಜುಲೈ 5ರಂದು ಎಚ್‌ಡಿ ಕುಮಾರಸ್ವಾಮಿ ಬಜೆಟ್ ಮಂಡಿಸಲಿದ್ದಾರೆ.

      ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ರಾಜ್ಯದ ರೈತರ ಸಾಲ ಮನ್ನಾ ಮಾಡಿದ ಮೊದಲ ಬಾರಿಗೆ ರೈತರ ಸಾಲ ಮನ್ನಾ ಘೋಷಿಸಿದ್ದರು ಇದೀಗ ಎರಡನೇ ಬಾರಿಗೆ ಹಣಕಾಸು ಸಚಿವರಾಗಿ ಬಜೆಟ್ ಮಂಡಿಸಲಿದ್ದು ಸಾಲಮನ್ನಾ ಘೋಷಿಸುವ ಸಾಧ್ಯತೆ ಇದೆ.

      ಸರ್ಕಾರದ ಉನ್ನತ ಮೂಲಗಳು ಹೇಳುವ ಪ್ರಕಾರ ಸಂಪನ್ಮೂಲ ಕ್ರೋಢೀಕರಣ, ದುಂದು ವೆಚ್ಚಕ್ಕೆ ಕಡಿವಾಣ, ಆದಾಯ ಹೆಚ್ಚಳ ಮಾಡಬಹುದಾದ ವಲಯಗಳನ್ನು ಗುರುತಿಸಿದ್ದು, ಹಣಕಾಸು ಹೊಂದಾಣಿಕೆಗೆ ಕಸರತ್ತು ನಡೆಸಲಿದ್ದಾರೆ.

      CM Kumaraswamy will present his first budget on July 5

      ಈ ಹಿನ್ನೆಲೆಯಲ್ಲಿ ಜೂನ್ 14ರಂದು ಬೆಳಗ್ಗೆ 11 ಗಂಟೆಗೆ ಪ್ರಮುಖ ಆದಾಯ ಸಂಗ್ರಹಿಸುವ ಇಲಾಖೆಗಳ ಮುಖ್ಯಸ್ಥರುಗಳ ಸಭೆ ಕರೆದಿರುವ ಸಿಂಎ ಕುಮಾರಸ್ವಾಮಿ, ಅಂದಿನಿಂದ ಅಧಿಕೃತವಾಗಿ ಬಜೆಟ್ ಪೂರ್ವ ಸಭೆಗಳಿಗೆ ಚಾಲನೆ ನೀಡಲಿದ್ದಾರೆ. ಇಲಾಖಾವಾರು ಅಧಿಕೃತ ಸಭೆಗಳು ಗುರುವಾರದಿಂದ ಆರಂಭಗೊಳ್ಳುತ್ತಿದೆ.

      ಬಜೆಟ್ ಸಿದ್ಧತೆ ಕುರಿತಂತೆ ಈಗಾಗಲೇ ಸಿಎಂ ತಮ್ಮ ಆರ್ಥಿಕ ಸಲಹೆಗಾರ ಸುಬ್ರಹ್ಮಣ್ಯ ಜತೆ ಹಲವು ಸುತ್ತಿನ ಸಭೆಗಳನ್ನು ನಡೆಸಿ ಚರ್ಚಿಸಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ಆರ್ಥಿಕ ಶಿಸ್ತು ಕಾಯ್ದುಕೊಂಡು ಹೋಗಲು ತಾವೇ ನೇಮಕ ಮಾಡಿರುವ ನಿವೃತ್ತ ಐಎಎಸ್ ಅಧಿಕಾರಿ ಸುಬ್ರಹ್ಮಣ್ಯ, ಪ್ರಮುಖ ಇಲಾಖೆಗಳ ಅಧಿಕಾರಿಗಳ ಸಲಹೆಯನ್ನೂ ಕೂಡ ಪಡೆಯಬೇಕಾಗುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+