ಗೌರಿ-ಗಣೇಶ ಹಬ್ಬದೊಳಗೆ ರೈತರಿಗೆ ಶುಭ ಸುದ್ದಿ: ಕುಮಾರಸ್ವಾಮಿ

Recommended Video

      ಸಾಲ ಮನ್ನಾ ಬಳಿಕ ರೈತರಿಗೆ ಮತ್ತೊಂದು ಸಿಹಿ ಸುದ್ದಿ ಕೊಡಲಿದ್ದಾರೆ ಕುಮಾರಣ್ಣ

      ಮಂಡ್ಯ, ಆಗಸ್ಟ್ 11: ಈಗಾಗಲೇ ರೈತರ ಸಾಲಮನ್ನಾ ಮಾಡಿರುವ ಕುಮಾರಸ್ವಾಮಿ, ಗೌರಿ-ಗಣೇಶ ಹಬ್ಬದ ಒಳಗಾಗಿ ರಾಜ್ಯದ ರೈತರಿಗೆ ಮತ್ತೊಂದು ಸಿಹಿ ಸುದ್ದಿ ನೀಡುವುದಾಗಿ ಹೇಳಿದರು.

      ಮಂಡ್ಯದ ಸೀತಾಪುರದಲ್ಲಿ ಭತ್ತ ನಾಟಿ ಮಾಡಿ ಮಾತನಾಡಿದ ಕುಮಾರಸ್ವಾಮಿ, ನೀತಿ ಸಂಹಿತೆ ಇರುವ ಕಾರಣ ಯಾವುದೇ ಘೋಷಣೆಗಳು ಮಾಡಲಾಗುತ್ತಿಲ್ಲ ಎಂದ ಅವರು, ಗೌರಿ-ಗಣೇಶ ಹಬ್ಬದ ಒಳಗಾಗಿ ರೈತ ಪರ ಬೃಹತ್ ಯೋಜನೆ ನೀಡುವುದಾಗಿ ಭರವಸೆ ನೀಡಿದರು.

      Cm Kumaraswamy gives hint to give another big project to farmers

      ರೈತ ಮಹಿಳೆಯರು, ಸ್ಥಳೀಯ ಜೆಡಿಎಸ್ ಶಾಸಕರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿಗಳು ಭತ್ತದ ಗದ್ದೆಗೆ ಇಳಿದು ಭತ್ತದ ಪೈರು ನಾಟಿ ಮಾಡಿದರು. ಮಾಧ್ಯಮದವರು, ಸಾರ್ವಜನಿಕರು, ಜನಪ್ರತಿನಿಧಿಗಳು ಸಾಕಷ್ಟು ಜನ ಸ್ಥಳದಲ್ಲಿ ಇದ್ದಕಾರಣ, ತಳ್ಳಾಟ, ನೂಕಾಟ ಉಂಟಾಯಿತು.

      Cm Kumaraswamy gives hint to give another big project to farmers

      ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದ ಕಾರಣ ಮುಖ್ಯ ವೇದಿಕೆ ಏರುವ ಮುನ್ನವೇ ಅನೌಪಚಾರಿಕವಾಗಿ ಭಾಷಣ ಮಾಡಿದ ಸಿಎಂ, ಇನ್ನು ಮುಂದೆ ಬದುಕಿರುವವರೆಗೆ ಸೀತಾಪುರಕ್ಕೆ ಬಂದು ಭತ್ತ ನಾಟಿ ಮಾಡುವುದಾಗಿ ಘೋಷಿಸಿದರು.

      ರಾಜ್ಯದ ಎಲ್ಲಾ ಜಿಲ್ಲೆಗಳ ಅಭಿವೃದ್ಧಿ ತಾವು ಬದ್ಧ ಎಂದು ಪನರ್‌ ಉಚ್ಚರಿಸಿದ ಸಿಎಂ, ನಾನು ರೈತರ ಮನೆಯಿಂದ ಬಂದವನು ನಿಮ್ಮ ಕಷ್ಟದ ಅರಿವು ನನಗಿದೆ, ನಿಮ್ಮ ಉದ್ಧಾರಕ್ಕಾಗಿ ನಾವು ವಿವಿಧ ಯೋಜನೆಗಳನ್ನು ರೂಪಿಸುತ್ತಿದ್ದೇವೆ, ನಮ್ಮ ಮೇಲೆ ಭರವಸೆ ಇಡಿ ಎಂದು ಅವರು ಮನವಿ ಮಾಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+