• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಸ್ರೇಲ್ ಕೃಷಿ ಪದ್ಧತಿ ಬಗ್ಗೆ ರೈತರಿಗೆ ಸಿಎಂ ಎಚ್ಡಿಕೆರಿಂದ ಪಾಠ, ಸಂವಾದ

|

ಬೆಂಗಳೂರು, ನವೆಂಬರ್ 14: ಸುಸ್ಥಿರ ಕೃಷಿಗೆ ಇಸ್ರೇಲ್ ಮಾದರಿ ಪದ್ಧತಿ ಅಳವಡಿಕೆ ಕುರಿತಂತೆ ಕರ್ನಾಟಕ ಸರ್ಕಾರಕ್ಕೆ ವರದಿ ಸಿಕ್ಕಿದೆ.

ಸಹಕಾರ ಇಲಾಖೆಯಿಂದ ಈ ತಯಾರಾದ ಈ ವರದಿ ಬಗ್ಗೆ, ಕೃಷಿ ಪದ್ಧತಿ ಬಗ್ಗೆ, ಗ್ರಾಮೀಣ ಜನತೆಯ ಸಮಸ್ಯೆಯನ್ನು ಸ್ಥಳದಲ್ಲೇ ಆಲಿಸಿ, ರೈತರ ಕಷ್ಟ ಸುಖಗಳಿಗೆ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಉತ್ಸುಕರಾಗಿದ್ದಾರೆ. ಈ ನಿಟ್ಟಿನಲ್ಲಿ ರೈತರೊಟ್ಟಿಗೆ ನೇರ ಸಂವಾದ ನಡೆಸಲಿದ್ದಾರೆ.

ಆಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿ, ಇಸ್ರೇಲ್ ಪದ್ಧತಿಯನ್ನು ಅನುಷ್ಠಾನಗೊಳಿಸಿ, ಅಲ್ಪವೆಚ್ಚದಲ್ಲಿ ಹೆಚ್ಚು ಬೆಳೆ ತೆಗೆಯುವ ಸಂಬಂಧ ಮುಖ್ಯಮಂತ್ರಿಯವರೇ ಖುದ್ದಾಗಿ ರೈತರಿಗೆ ಮನವರಿಕೆ ಮಾಡಿಕೊಡುವುದೇ ಈ ಸಂವಾದದ ಉದ್ದೇಶ.

ಸ್ಥಳೀಯ ಸಮಸ್ಯೆಗಳನ್ನು ಆಲಿಸುವುದರ ಜೊತೆಗೆ ರೈತರ ಕಷ್ಟಗಳಿಗೆ ಸ್ಥಳದಲ್ಲಿಯೇ ಸ್ಪಂದಿಸುವುದು ಒಂದೆಡೆಯಾದರೆ, ಸರ್ಕಾರದ ಯೋಜನೆಗಳನ್ನು ಬಳಕೆ ಮಾಡಿ ಹೆಚ್ಚು ಕೃಷಿ ಉತ್ಪನ್ನ ಮಾಡಿ, ಇದರಿಂದ ನಿಮಗೇ ಲಾಭ. ರೈತರು ಒಂದಾಗಿ 200 ರಿಂದ 300

ಎಕರೆಯಲ್ಲಿ ಗುಂಪು ಕೃಷಿ ಚಟುವಟಿಕೆ ಕೈಗೊಂಡರೆ ರಾಜ್ಯ ಸರ್ಕಾರವೇ ರಿಯಾಯಿತಿ ದರದಲ್ಲಿ ಆಧುನಿಕ ಸಲಕರಣೆಗಳನ್ನು ಒದಗಿಸಲಿದೆ.

ಇಂತಹ ಗುಂಪುಗಳಿಗೆ ಸಹಕಾರ ಇಲಾಖೆ ಮಾನ್ಯತೆ ನೀಡಲಿದ್ದು, ಇದರಿಂದ ನಿಮಗೆ ಶೂನ್ಯ ಬಡ್ಡಿ ಹಾಗೂ ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ ದೊರೆಯಲಿದೆ.

ರೈತ ಸ್ಪಂದನ ಹೆಸರಿನಲ್ಲಿ ಸಂವಾದ

ರೈತ ಸ್ಪಂದನ ಹೆಸರಿನಲ್ಲಿ ಸಂವಾದ

ಇದನ್ನು ಬಳಕೆ ಮಾಡಿಕೊಂಡು ಕಡಿಮೆ ವೆಚ್ಚದಲ್ಲಿ ಹೆಚ್ಚು ಬೆಳೆ ತೆಗೆಯಿರಿ ಇದರ ಲಾಭ ನಿಮಗೂ ಮತ್ತು ಗ್ರಾಹಕರಿಗೂ ಸಿಗಲಿ ಎಂದು ರೈತರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ಒಂದು ವೇಳೆ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿಯ ಬೆಲೆ ದೊರೆಯದಿದ್ದರೆ ಸರ್ಕಾರವೇ ಮಧ್ಯಪ್ರವೇಶ ಮಾಡಿ, ಖರೀದಿ ಮಾಡಲಿದೆ ಎಂಬುದನ್ನು ರೈತರಿಗೆ ತಿಳಿಸಲಿದ್ದಾರೆ. ರೈತ ಸ್ಪಂದನ ಹೆಸರಿನಲ್ಲಿ ಮುಖ್ಯಮಂತ್ರಿಯವರು ಸಂವಾದ ನಡೆಸುವ ಕಾರ್ಯಕ್ರಮವನ್ನು ಬೀದರ್ ಜಿಲ್ಲೆಯಿಂದಲೇ ಆರಂಭಿಸಲಿದ್ದಾರೆ.

ರೈತರೊಂದಿಗೆ ಸಂವಾದ ನಡೆಸುವ ಮುನ್ನ ಚಿಟ್ಟ ಗ್ರಾಮದ ಪ್ರಗತಿಪರ ರೈತರ ಕ್ಷೇತ್ರಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಪರಿಶೀಲನೆ ನಡೆಸಲಿದ್ದಾರೆ.

ಕರ್ನಾಟಕದಲ್ಲಿ ಕೃಷಿ ಪದ್ಧತಿ ಬೆಳವಣಿಗೆ

ಕರ್ನಾಟಕದಲ್ಲಿ ಕೃಷಿ ಪದ್ಧತಿ ಬೆಳವಣಿಗೆ

ಕೃಷಿ ಸಚಿವರು, ತೋಟಗಾರಿಕೆ ಸಚಿವರು ಹಾಗೂ ಅಧಿಕಾರಿಗಳನ್ನೊಳಗೊಂಡ ನಿಯೋಗವು ಸೆಪ್ಟೆಂಬರ್ ತಿಂಗಳಿನಲ್ಲಿ ಇಸ್ರೇಲ್ ಭೇಟಿ ನೀಡಿ ಅಧ್ಯಯನ ನಡೆಸಿದೆ. ಅಲ್ಲಿನ ಕೃಷಿ ತಂತ್ರಜ್ಞಾನ, ನೀರಾವರಿ ವ್ಯವಸ್ಥೆ, ತೋಟಗಾರಿಕೆ, ಪಶು ಸಂಗೋಪನೆ, ಅಂತರ್ಜಲ ನಿರ್ವಹಣೆ ಮುಂತಾದ ಅನೇಕ ವಿಚಾರಗಳನ್ನು ಅಧ್ಯಯನ ನಡೆಸಿದೆ.

ಕೃಷಿ ಹಾಗೂ ಪಶುಸಂಗೋಪನೆಯಲ್ಲಿ ಸುಧಾರಿತ ತಂತ್ರಜ್ಞಾನಗಳನ್ನು ಅನುಸರಿಸುವ ಮೂಲಕ ಅತಿ ಕಡಿಮೆ ಸಂಪನ್ಮೂಲಗಳಲ್ಲಿ ವಿಪುಲವಾದ ಪ್ರತಿಫಲ ಪಡೆಯುತ್ತಿರುವ ಇಸ್ರೇಲ್ ದೇಶದ ಮಾದರಿಯಲ್ಲಿ ಕರ್ನಾಟಕದಲ್ಲಿ ಕೃಷಿ ಪದ್ಧತಿ ಬೆಳವಣಿಗೆಗೆ ಸರ್ಕಾರ ಮುಂದಾಗಿದೆ.

ನೀರು ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿರುವ ಇಸ್ರೇಲ್

ನೀರು ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿರುವ ಇಸ್ರೇಲ್

ಸಮಿತಿಯು 7 ಸಭೆಗಳನ್ನು ನಡೆಸಿದೆಯಲ್ಲದೆ 7 ಬಾರಿ ಕ್ಷೇತ್ರ ಭೇಟಿ ಮಾಡಿದ್ದು, ಕೃಷಿ ಮತ್ತು ತೋಟಗಾರಿಕಾ ಸಚಿವರೊಂದಿಗೆ ಶಿಫಾರಸಿನ ಕುರಿತು ಚರ್ಚೆ ನಡೆಸಿದೆ. ನವೆಂಬರ್ 1 ರಂದು ವರದಿ ಸಲ್ಲಿಸಲಿದ್ದು, ನವೆಂಬರ್ ತಿಂಗಳಲ್ಲಿಯೇ ಸಚಿವ ಸಂಪುಟ ಸಭೆಯಲ್ಲಿಯೂ ಈ ಕುರಿತು ಚರ್ಚಿಸಿ, ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು.

ನೀರು ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿರುವ ಇಸ್ರೇಲ್, ತನ್ನ ನೀರು ಪುನರ್ಬಳಕೆ ಮತ್ತು ಸಂಸ್ಕರಣೆಯ ತಂತ್ರಜ್ಞಾನಗಳಿಂದ ನೀರಾವರಿಗೆ ಘನನೀರನ್ನು ಬಳಸಿಕೊಳ್ಳುವ ಮಾದರಿಯನ್ನು ಹಾಕಿಕೊಟ್ಟಿದೆ. ತನ್ನ ಆಂತರಿಕವಾಗಿ ಬಳಕೆಯಾದ ಶೇ 80ರಷ್ಟು ನೀರನ್ನು ಮರುಬಳಕೆ ಮಾಡುತ್ತದೆ. ಇದನ್ನು ಸಂಸ್ಕರಿಸಿ ಸುಮಾರು ಶೇ 50ರಷ್ಟು ನೀರನ್ನು ಕೃಷಿಗೆ ಬಳಸುತ್ತದೆ.

ಭಾರತ-ಇಸ್ರೇಲ್ ಕೃಷಿ ಯೋಜನೆ

ಭಾರತ-ಇಸ್ರೇಲ್ ಕೃಷಿ ಯೋಜನೆ

ಸಾಮಾನ್ಯ ಕೃಷಿ ಪದ್ಧತಿಯಲ್ಲಿ ನೀರು ಪೈಪ್ ಹಾಗೂ ಇತರೆ ಸಾಧನಗಳ ಮೂಲಕ ಮಣ್ಣು ಅಥವಾ ಬೇರಿಗೆ ನೇರವಾಗಿ ತಲುಪುತ್ತದೆ. ಇಸ್ರೇಲ್‌ ನೀರಾವರಿ ಪದ್ಧತಿಯಲ್ಲಿ ಕೃಷಿ ಸಸ್ಯಗಳ ಬೇರಿಗೆ ನಿಧಾನವಾಗಿ ತಲುಪುತ್ತದೆ.

ಭಾರತ-ಇಸ್ರೇಲ್ ಕೃಷಿ ಯೋಜನೆಯಡಿ ವಿವಿಧ ರಾಜ್ಯಗಳಲ್ಲಿ ಉತ್ಕೃಷ್ಟತೆಯ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಭಾರತದ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಅಗತ್ಯವಾದ ಕಿರು ನೀರಾವರಿ ಪದ್ಧತಿಯಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲು ಮುಂದಾಗಿದೆ. ಭಾರತದಲ್ಲಿ ಈ ಪದ್ಧತಿ ಅಳವಡಿಸಿಕೊಳ್ಳಲು ಕರ್ನಾಟಕ ಈಗ ಮುಂದಾಗಿದೆ.

English summary
Congress-JD(S) alliance government led by HD Kumaraswamy in Karnataka has started have conversation cum debate with farmers in regard to implement Israel technology in Agriculture sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X