ಕಲ್ಯಾಣ ಕರ್ನಾಟಕದಲ್ಲಿ "ಸಿರಿಧಾನ್ಯ" ಮಂತ್ರ ಜಪಿಸಿದ ಸಿಎಂ ಬಸವರಾಜ ಬೊಮ್ಮಾಯಿ

ರಾಯಚೂರು, ಆಗಸ್ಟ್ 27: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕಗಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಿರಿಧಾನ್ಯ ಮೇಳ 2022 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಿರಿಧಾನ್ಯ ಬ್ರಾಂಡ್ ಅನ್ನು ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಮಾಡಬಹುದು. ಕೆಪೆಕ್ ಮೂಲಕ ರಫ್ತು ಮಾಡುವವರಿಗೆ ಪ್ರೋತ್ಸಾಹಕಗಳನ್ನು ನೀಡುವ ಉದ್ದೇಶದಿಂದ 50 ಕೋಟಿ ರೂ.ಗಳನ್ನು ಒದಗಿಸಿದೆ. ಅದರ ಉಪಯೋಗ ಪಡೆದು ರಫ್ತು ಮಾಡಲು ಕೆಪೆಕ್ ಮೂಲಕ ಎಲ್ಲಾ ಸಹಾಯ ಮತ್ತು ಸಹಕಾರವನ್ನು ಸರ್ಕಾರ ನೀಡಲಿದೆ ಎಂದು ತಿಳಿಸಿದರು.

ಅಕ್ಕಿ ಬೆಳೆಯುತ್ತಿರುವ ನಾವು ಅದನ್ನೇ ಆಹಾರದ ಮೂಲವಾಗಿ ಮಾಡಿಕೊಂಡಿದ್ದೇವೆ, ಆದರೆ ಕಾಲವೀಗ ಬದಲಾಗಿದೆ. ಆರೋಗ್ಯ ಗಮನಿಸಿದಾಗ ಕನಿಷ್ಠ ಪ್ರಮಾಣದಲ್ಲಿ ಆದರೂ ಸಿರಿಧಾನ್ಯವನ್ನು ಆಹಾರವಾಗಿ ಸೇವಿಸಬೇಕು. ರೈತರು ಸಿರಿಧಾನ್ಯಗಳನ್ನು ಮುಖ್ಯ ಆಹಾರವಾಗಿ ಬಳಸುತ್ತಿದ್ದರು. ಈಗ ಸರ್ಕಾರ ಕಾರ್ಯಕ್ರಮವನ್ನು ಮಾಡಿ ಬೆಳೆಸಲು ಉತ್ತೇಜನ ನೀಡುವ ಸ್ಥಿತಿ ಬಂದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನಾವು ಮಿಲೆಟ್ ಬಗ್ಗೆ ಅತಿದೊಡ್ಡ ರಾಯಭಾರಿ ಆಗಿದ್ದೆವು. ಕಳೆದ 30 ವರ್ಷಗಳಿಂದ ಸಿರಿಧಾನ್ಯಗಳನ್ನು ಬಳಕೆ ಮಾಡುತ್ತಿದ್ದೇವೆ. ಅನ್ನವನ್ನು ಊಟ ಮಾಡುವುದಿಲ್ಲ. ಹೀಗಾಗಿ ಸಿರಿಧಾನ್ಯಗಳನ್ನು ಅತ್ಯಂತ ಯಶಸ್ವಿ ಮಾಡಲು ನಾವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತೇವೆ ಎಂದರು.

https://kannada.oneindia.com/news/karnataka/how-bjp-high-command-given-free-hand-to-basavaraj-bommai-karnataka-cm-explained-in-interview-266504.html

ಏಳು ಜಿಲ್ಲೆಗಳಲ್ಲಿ ಸಿರಿಧಾನ್ಯ ಬೆಳೆ

ಏಳು ಜಿಲ್ಲೆಗಳಲ್ಲಿ ಸಿರಿಧಾನ್ಯ ಬೆಳೆ

ಕಲ್ಯಾಣ ಕರ್ನಾಟಕ ಅರೆ ಒಣ ಪ್ರದೇಶವಾಗಿದೆ. ಜಾಹೀರಾಬಾದಿನಲ್ಲಿರುವ ಕೃಷಿ ಸಂಸ್ಥೆಯಲ್ಲಿ 108 ವರ್ಷದ ಜೋಳ, ನವಣೆ, ಸಾಮೆಗಳನ್ನು ಸಂರಕ್ಷಣೆ ಮಾಡಿದ್ದು, ರೈತರು ಹೇಗೆ ಬೆಳೆಯಬೇಕೆಂದು ತರಬೇತಿಯನ್ನು ನೀಡುತ್ತಾರೆ. ಇಂಥ 8 ಸಂಸ್ಥೆಗಳು ಜಗತ್ತಿನಲ್ಲಿದ್ದು, ಈ ಪೈಕಿ ಜಾಹೀರಾಬಾದಿನಲ್ಲಿದೆ. ಇಲ್ಲಿನ ಹವಾಮಾನಕ್ಕೆ ತಕ್ಕ ಬೆಳೆಗಳನ್ನು ಬೆಳೆಯಬೇಕು. ಇದಕ್ಕೆ ವಿಶೇಷ ಮಾರುಕಟ್ಟೆ ನಿರ್ಮಾಣ ಮಾಡುವುದು ಸರ್ಕಾರದ ಸಂಘ ಸಂಸ್ಥೆಗಳ ಕರ್ತವ್ಯವಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಈ ವಲಯದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲು ವಿಶೇಷ ಗಮನ ನೀಡಬೇಕು. ಮಾರುಕಟ್ಟೆಗೆ ಸಂಸ್ಕರಣಾ ಘಟಕಗಳು ಅಗತ್ಯವಿದೆ. ರಾಗಿ, ಸಾಮೆ, ನವಣೆ, ಬರಗು, ಉದುಲು, ಹಾರಕ, ಕೊರ್ಲ ಎಂಬ ಏಳು ಸಿರಿಧಾನ್ಯಗಳನ್ನು ಬೆಳೆಯುತ್ತೇವೆ. ಕಲ್ಯಾಣ ಕರ್ನಾಟಕದಲ್ಲಿ7 ಜಿಲ್ಲೆಗಳಿವೆ. ಈ ಏಳು ಜಿಲ್ಲೆಗಳಲ್ಲೂ 7 ಸಿರಿಧಾನ್ಯಗಳನ್ನು ಬೆಳೆಸಬೇಕು. ಅದರ ಉತ್ಪಾದನೆ, ಇಳುವರಿ ಹೆಚ್ಚು ಮಾಡಿ ಗುಣಮಟ್ಟ ವನ್ನು ಸುಧಾರಿಸಬೇಕು ಎಂದರು.
ರಾಯಚೂರು ಕರ್ನಾಟಕದ ಪ್ರಮುಖ ಸ್ಥಳವಾಗಿದೆ. ಇದರ ಸಮಗ್ರ ಅಭಿವೃದ್ಧಿ ಕೃಷಿಗೆ ನೇರವಾದ ಸಂಬಂಧವಿದೆ. ಬರುವ ತಿಂಗಳಲ್ಲಿ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಹಾಕಲಾಗುವುದು. ಅದರೊಂದಿಗೆ ವಿಶೇಷವಾದ ಕೈಗಾರಿಕಾ ಪಾರ್ಕ್ ಇದೇ ವರ್ಷ ನಿರ್ಮಿಸಲಾಗುವುದು ಎಂದರು.

ರಾಯಚೂರು ನೆಲದಲ್ಲಿ ಜವಳಿ ಪಾರ್ಕ್ ನಿರ್ಮಾಣ

ರಾಯಚೂರು ನೆಲದಲ್ಲಿ ಜವಳಿ ಪಾರ್ಕ್ ನಿರ್ಮಾಣ

ಕರ್ನಾಟಕದ ಜವಳಿ ನೀತಿಯಿಂದ ಪ್ರೋತ್ಸಾಹಕಗಳಿರುವ ಜವಳಿ ಪಾರ್ಕ್ ನಿರ್ಮಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು. ರಾಜ್ಯ ಸರ್ಕಾರದ ನೆರವಿನಿಂದ ರಾಯಚೂರಿನಲ್ಲಿ ಜವಳಿ ಪಾರ್ಕ್ ಸ್ಥಾಪಿಸಲಾಗುವುದು. ಬಳ್ಳಾರಿಯಲ್ಲಿ ಜೀನ್ಸ್ ತಯಾರಿಸುವ ಕಾರ್ಖಾನೆ ಇದೆ. ಉತ್ತಮ ಹತ್ತಿ ಬೆಳೆಯುವ ಕಾಲವಿತ್ತು. ರಫ್ತು ಮಾಡುವಂಥ ಹತ್ತಿ ಬೆಳೆಯಲಾಗುತ್ತಿತ್ತು. ಇದಕ್ಕೆ ಮಾರುಕಟ್ಟೆ ನಿರ್ಮಾಣ ಮಾಡುವ ಅವಶ್ಯಕತೆ ಇದೆ. ಆ ಕೆಲಸವನ್ನು ಮಾಡುತ್ತೇವೆ ಎಂದರು.

ಸಂಶೋಧನಾ ಕೇಂದ್ರಗಳಾಗಿ ರೈತರ ಹೊಲಗಳು ಬದಲಾಗಬೇಕು

ಸಂಶೋಧನಾ ಕೇಂದ್ರಗಳಾಗಿ ರೈತರ ಹೊಲಗಳು ಬದಲಾಗಬೇಕು

ರಾಯಚೂರು ಕೃಷಿ ವಿಶ್ವವಿದ್ಯಾಲಯ ಕೃಷಿ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳ ಕೇಂದ್ರವಾಗಿರಬೇಕು. ಪ್ರಯೋಗಾಲಯದಿಂದ ಭೂಮಿಯವರೆಗೆ ಸಂಶೋಧನೆಗಳು ತಲುಪಬೇಕು. ರೈತರಿಗೆ ನಿಮ್ಮ ಸಂಶೋಧನೆ ಉಪಯುಕ್ತವಾಗಬೇಕು. ಕೃಷಿ ಆವರಣದಲ್ಲಿ ಆಗುವ ಸಂಶೋಧನೆಗಳಿಗೆ ನಿಮ್ಮನ್ನು ಸೀಮಿತಗೊಳಿಸಬೇಡಿ. ರೈತರ ಹೊಲಗಳು ನಿಮ್ಮ ಸಂಶೋಧನಾ ಕೇಂದ್ರಗಳಾಗಬೇಕು. ನೈಜ ಪರಿಸ್ಥಿತಿಯಲ್ಲಿ ಬೆಳವಣಿಗೆಯಾಗಬೇಕು. ಮನಸ್ಥಿತಿ ಬದಲಾಗಬೇಕು. ಜನಸಂಖ್ಯೆ ದೊಡ್ಡದಿದ್ದು, ಅವಶ್ಯಕತೆಗಳು ದೊಡ್ಡದಿದೆ ಎಂದರು.
ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಪಾತ್ರ ನಿರ್ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಂಶೋಧನೆಗಳು ಆಗಬೇಕು. ಅದಕ್ಕೆ ಆರ್.ಅಂಡ್ ಡಿ ನೀತಿ ತರಲಾಗಿದೆ. ನಿಮ್ಮ ಪ್ರಯೋಗಾಲಯಕ್ಕೆ 15 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿದೆ. ರೈತರಿಗೆ ಉಪಯೋಗವಾಗುವ ಸಂಶೋಧನೆ ಮಾಡಬೇಕು. ಸಿರಿಧಾನ್ಯ ವರ್ಷ ಸಿರಿಧಾನ್ಯ ಮಿಲೇನಿಯಂ ಆಗಬೇಕು. ರೈತರು ಇವುಗಳನ್ನು ಉತ್ಪಾದಿಸಿ ಲಾಭ ಪಡೆಯಬೇಕು. ಸುರಕ್ಷಾ ಚಕ್ರವನ್ನು ಸರ್ಕಾರ ನೀಡುತ್ತದೆ. ಜನವರಿಯಲ್ಲಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ರಾಯಚೂರು ಸಿರಿಧಾನ್ಯ ಘೋಷಣೆ

ರಾಯಚೂರು ಸಿರಿಧಾನ್ಯ ಘೋಷಣೆ

ರಾಜ್ಯ ಸರ್ಕಾರ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಸಮಾವೇಶದಲ್ಲಿನ ಚರ್ಚೆ ನಿರ್ಧಾರಗಳನ್ನು ಬರುವ ದಿನಗಳಲ್ಲಿ ಅನುಷ್ಠಾನ ಮಾಡಲು ಸಮಾವೇಶದಲ್ಲಿ ರೂಪುರೇಷೆ ಹೊರಬರುತ್ತವೆ ಎಂದು ಆಶಿಸುತ್ತೇನೆ. ಇಲ್ಲಿನ ಚರ್ಚೆ ಮತ್ತು ನಿರ್ಧಾರಗಳನ್ನು ಮುದ್ರಿಸಿ 'ರಾಯಚೂರು ಮಿಲೆಟ್ ಡಿಕ್ಲರೇಶನ್' ಎಂದು ಹೆಸರಿಸಿ ಒದಗಿಸಬೇಕು. ಸಿರಿಧಾನ್ಯಗಳನ್ನು ಬೆಳೆಯುವುದು, ಬಳಸುವುದು ಹಾಗೂ ಸಂಸ್ಕರಿಸುವುದು, ಮಾರುಕಟ್ಟೆ, ರಫ್ತು ಮಾಡುವ ದಾರಿಯಲ್ಲಿ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ಅನುದಾನ ನೀಡಿ ರೈತರಿಗೆ ಸಲಹೆ ಸಹಕಾರವನ್ನು ನೀಡುತ್ತದೆ. ಕೇಂದ್ರದ ಸಹಯೋಗದೊಂದಿಗೆ ಅದನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡುತ್ತೇವೆ. ಹೀಗಾಗಿ ರಾಯಚೂರು ಮಿಲೆಟ್ ಡಿಕ್ಲರೇಶನ್' ನ್ನು ಅತ್ಯಂತ ಕುತೂಹಲದಿಂದ ನಿರೀಕ್ಷೆ ಮಾಡುತ್ತೇವೆ ಎಂದರು.

ಸಿರಿಧಾನ್ಯಗಳಲ್ಲಿ ರಾಗಿ ಶ್ರೇಷ್ಠ

ಸಿರಿಧಾನ್ಯಗಳಲ್ಲಿ ರಾಗಿ ಶ್ರೇಷ್ಠ

ಸಿರಿಧಾನ್ಯಗಳು ಅತ್ಯಂತ ಕಡಿಮೆ ಮಳೆ ಆಶ್ರಿತ ಪ್ರದೇಶಗಳಲ್ಲಿ ಬೆಳೆಯುತ್ತವೆ. ಇದರಲ್ಲಿಅತಿ ಹೆಚ್ಚು ಪೌಷ್ಟಿಕಾಂಶವಿರುವಂತದ್ಧು, ಶಕ್ತಿ ನೀಡುವುದು. 4500 ವರ್ಷಗಳಿಂದ ಬೆಳೆಯುತ್ತಿರುವ, ನಿಸರ್ಗಕ್ಕೆ ಹೊಂದಿಕೊಂಡು ಬೆಳೆಯುವ ಸಿರಿಧಾನ್ಯಗಳು. ಶ್ರೀರಾಮಧ್ಯಾನದಲ್ಲಿ ರಾಗಿ ಮತ್ತು ಅಕ್ಕಿಯನ್ನು ಹೋಲಿಸುತ್ತಾರೆ. ರಾಗಿಯೇ ಹೆಚ್ಚು ಶ್ರೇಷ್ಠ ಎಂದು ತೀರ್ಮಾನಿಸಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+