ಮೈಸೂರು: ನೀರಿನ ಪಾತ್ರೆಗೆ ಬಿದ್ದು ಮಗು ಸಾವು, ಇತರ ಕ್ರೈಂ ಸುದ್ದಿ
ನಂಜನಗೂಡು, ಜೂನ್ 20: ನೀರು ತುಂಬಿದ ಪಾತ್ರೆಯೊಳಗೆ ಬಿದ್ದು ಒಂದು ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ನಂಜನಗೂಡಿನಲ್ಲಿ ನಡೆದಿದೆ
ಗ್ರಾಮದ ಸಿದ್ದು ಹಾಗೂ ಜ್ಯೋತಿ ದಂಪತಿಯ ಮೂರು ವರ್ಷದ ಹೆಣ್ಣುಮಗು ಅನುಶ್ರೀ ಮೃತಪಟ್ಟಾಕೆ. ಮನೆಯೊಳಗೆ ಆಟವಾಡುತ್ತಿದ್ದ ಮಗು ಅಡುಗೆ ಮನೆಗೆ ತೆರಳಿ ಕಾಲು ಜಾರಿ ನೀರು ತುಂಬಿದ ಪಾತ್ರೆಯಲ್ಲಿ ಬಿದ್ದ ಕಾರಣ ಉಸಿರುಗಟ್ಟಿ ಸಾವನ್ನಪ್ಪಿದೆ.

ತಂದೆ-ತಾಯಿ ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮನೆಗೆ ಬಂದ ಪೋಷಕರು ಮಗುವನ್ನು ಹುಡುಕಾಡಿದ್ದಾರೆ. ಅಡುಗೆ ಮನೆಗೆ ಹೋಗಿ ನೋಡಿದಾಗ ಪಾತ್ರೆಯಲ್ಲಿಯೇ ಇದ್ದ ಮಗುವನ್ನು ಮೇಲೆ ಎತ್ತಿದಾಗ ಆಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು. ಪೋಷಕರ ರೋದನ ಮುಗಿಲುಮುಟ್ಟಿದೆ.












Click it and Unblock the Notifications