ಕಳೆನಾಶಕ ಸಿಂಪಡಣೆ: 12 ಎಕರೆ ಕಾಫಿತೋಟ ನಾಶ

ಚಿಕ್ಕಮಗಳೂರು, ನವೆಂಬರ್ 19: ಚಿಕ್ಕಮಗಳೂರು ತಾಲ್ಲೂಕಿನ ಮಾಕೋಡು ಗ್ರಾಮದಲ್ಲಿ ಕಾಫಿ ಬೆಳೆಗೆ ಕಾಂಟಾಪ್ ಸಿಂಪಡಿಸುವ ಬದಲಾಗಿ ಅಸ್ಸಾಂ ಮೂಲದ ಕಾರ್ಮಿಕ ಕಳೆನಾಶಕ ರೌಂಡಾಫ್ ಸಿಂಪಡಿಸಿದ ಪರಿಣಾಮ ಇನ್ನೇನು ಫಸಲಿಗೆ ಸಿದ್ದವಾಗಿದ್ದ 12 ಎಕರೆ ಕಾಫಿ ತೋಟ ನಾಶವಾಗಿದೆ.

ಮೆಣಸಿನ ಬಳ್ಳಿಗಳು ಒಣಗಿ ಹೋಗಿದ್ದು, ಘಟನೆಯಿಂದ ಮನನೊಂದ ತೋಟದ ಮೇಲ್ವಿಚಾರಕ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕಲ್ಲೇಗೌಡ ಎಂಬುವರಿಗೆ ಸೇರಿದ 12 ಎಕರೆ ಕಾಫಿತೋಟ ಫಸಲು ಬಂದಿದ್ದು, ಕಾಫಿತೋಟಕ್ಕೆ ಕಳೆನಾಶಕ ಸಿಂಪಡಣೆಯಿಂದ ಸಂಪೂರ್ಣ ಒಣಗಿ ಹೋಗಿದೆ.

 Chikkamagaluru: Pesticide Spray; Destroyed 12 Acres Of Coffee Plantation

ಬುಧವಾರ ಮಾಕೋಡು ಗ್ರಾಮದಲ್ಲಿರುವ ಕಾಫಿ ತೋಟದ ಮೇಲ್ವೀಚಾರಕ ಅಸ್ಸಾಂ ಮೂಲದ ಕಾರ್ಮಿಕರಿಗೆ ಕಾಫಿ ಗಿಡಗಳ ಎಲೆ ಹಸಿರಾಗಲು ಸಿಂಪಡಿಸುವ ಕಾಂಟಾಫ್ ಎಂಬ ಪೋಷಕಾಂಶಯುಕ್ತ ದ್ರವ ನೀಡುವ ಬದಲು ರೌಂಡಾಫ್ ಎಂಬ ಕಳೆನಾಶಕವನ್ನು ನೀಡಿದ್ದರು.

ಇದನ್ನು ಕಾರ್ಮಿಕರು 12 ಎಕರೆ ತೋಟಕ್ಕೆ ಸಿಂಪಡಿಸಿದ್ದಾರೆ ಎನ್ನಲಾಗಿದೆ. ಕಳೆನಾಶಕ ಸಂಪಡಿಸಿದ ಎರಡು ದಿನಗಳಲ್ಲಿ ಇಡೀ ತೋಟ ಸಂಪೂರ್ಣವಾಗಿ ನಾಶವಾಗಿದ್ದು, ಬೆಂಕಿಯಿಂದ ಸುಟ್ಟಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+