ಆಲೂಗಡ್ಡೆ ಬಿತ್ತನೆಗೆ ಪೂರಕ ವಾತಾವರಣ: ಬಗೆ ಬಗೆಯ ತಳಿಗಳು ಮಾರಾಟಕ್ಕೆ ಲಗ್ಗೆ

ಚಿಕ್ಕಬಳ್ಳಾಪುರ ನವೆಂಬರ್ 20: ಹಿಂಗಾರು ಅವಧಿಯಲ್ಲಿ ಉತ್ತಮ ಮಳೆಯ ಜೊತೆಗೆ ಪೂರಕ ವಾತಾವರಣದ ಹಿನ್ನಲೆಯಲ್ಲಿ ಆಲೂಗಡ್ಡೆ ಬಿತ್ತನೆ ಪ್ರಕ್ರಿಯೆ ಚುರುಕುಗೊಂಡಿದೆ. ಆದರೆ ಈ ಬಾರಿ ಬಹುತೇಕ ರೈತರು ಆಲೂಗಡ್ಡೆ ಬಿತ್ತನೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಆಲೂಗಡ್ಡೆ ಬಿತ್ತನೆಗೆ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ಸೂಕ್ತ ಕಾಲ ಇದಕ್ಕೆ ಸಹಜವಾಗಿ ಬೇಡಿಕೆ ಹೆಚ್ಚಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ, ಗುಡಿಬಂಡೆ, ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ ಹಾಗೂ ಗೌರಿಬಿದನೂರು ತಾಲೂಕಿನ ವ್ಯಾಪ್ತಿಯಲ್ಲಿ ಸರಿ ಸುಮಾರು 3200 ರಿಂದ 5000 ಹೇಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಅಂದಾಜು ಇದೆ. ಪ್ರಸ್ತುತ 50 ಕೆಜಿ ಮೂಟೆ ಬೆಲೆ ಕನಿಷ್ಠ 1600 ರಿಂದ 1900 ಹಾಗೂ ಉತ್ತಮ ಗುಣಮಟ್ಟದ ಆಲೂಗಡ್ಡೆ 2500 ರ ತನಕವೂ ಇದೆ.

Chikkaballapur farmers are preparing as the weather is conducive for planting potatoes

ಮಾರುಕಟ್ಟೆಗೆ ಲಗ್ಗೆ ಇಟ್ಟ ಬಿತ್ತನೆ ಬೀಜ -

ರೈತರ ನಿರೀಕ್ಷೆಗೆ ಅನುಗುಣವಾಗಿ ವ್ಯಾಪಾರಸ್ಥರು ಟನ್ ಗಟ್ಟಲೆ ಬೃಹತ್ ಲಾರಿಗಳ ಮೂಲಕ ಲೋಡ್ ಗಳನ್ನು ಅನ್ಲೋಡ್ ಮಾಡಿಸುತ್ತಿದ್ದೂ, ಬೇಕಾದಷ್ಟು ಬಿತ್ತನೆ ಆಲೂಗಡ್ಡೆ ದಾಸ್ತನು ಮಾಡುತ್ತಿದ್ದು ಪಂಜಾಬಿನ ಜಲಂಧರ್ ನ ತಳಿಗಳಾದ ಚಿಪ್ಸೋನ, ಚೇಂಬಲ್, ಪೆಪ್ಸಿ, ಜ್ಯೋತಿ ಸೇರಿ ವಿವಿಧ ಬಗೆಯ ತಳಿಗಳು ಬಂದಿವೆ. ಹಲವು ದಿನಗಳಿಂದ ರೈತರು ಬಿತ್ತನೆ ಆಲೂಗಡ್ಡೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಯು ಮಾಡಿದ್ದಾಗಿದೆ.

ಹಾಸನ ಬಿಟ್ಟರೆ ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಎರಡನೇ ಅತಿದೊಡ್ಡ ಆಲೂಗಡ್ಡೆ ಬಿತ್ತನೆ ಗಡ್ಡೆ ಮಾರುಕಟ್ಟೆ ಹೊಂದಿದೆ. ಜಿಲ್ಲೆಯಲ್ಲಿ ಅಂದಾಜು 5,000 ಎಕರೆಯಲ್ಲಿ ಆಲೂಗಡ್ಡೆ ಬಿತ್ತನೆ ಮಾಡಲಾಗುತ್ತದೆ. ಕುಪ್ರಿ ಜ್ಯೋತಿ ತಳಿ ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಹಿಂಗಾರು ಋತುವಿನಲ್ಲಿ (ಸೆಪ್ಟೆಂಬರ್‌- ಜನವರಿ 15ರ ವರೆಗೆ) ಆಲೂಗಡ್ಡೆ ಬಿತ್ತನೆ ಕಾರ್ಯ ನಡೆಯುತ್ತದೆ.

ಉತ್ತಮ ಬೆಲೆ -

ಜಿಲ್ಲೆಯಲ್ಲಿ ಇತರ ಅವಧಿಯಲ್ಲಿ ಕಳೆದ ಆಗಸ್ಟ್ ಹಲವಡೆ ಬಿತ್ತನೆ ಮಾಡಿದ ಆಲೂಗಡ್ಡೆ ಒಳ್ಳೆಯದು ಸಿಗುತ್ತದೆ ಬಿತ್ತನೆ ಅವಧಿ ಹಿನ್ನೆಲೆಯಲ್ಲಿ ಪ್ರಸ್ತುತ ಮಾರುಕಟ್ಟೆಗೆ ಸ್ಥಳೀಯವಾಗಿ ಕಡಿಮೆ ಪ್ರಮಾಣದಲ್ಲಿ ಉತ್ಪನ್ನ ಪೂರೈಕೆಯಾಗುತ್ತಿದೆ ಇದರಿಂದ ಬೇಡಿಕೆ ಮತ್ತು ಬೆಲೆ ಹೆಚ್ಚಾಗುತ್ತಿದ್ದು ರೈತರು ಖುಷಿಯಾಗಿದ್ದಾರೆ ಆಲೂಗಡ್ಡೆಗೆ ಮಂಜು ಕವಿದ ವಾತಾವರಣವು ಅನುಕೂಲಕರ ಇದಕ್ಕೆ ಬಹುತೇಕರು ಅಕ್ಟೋಬರ್ ನಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳುತ್ತಾರೆ ಇದರ ನಡುವೆ ಹೊಸ ಬಗೆಯ ತಳಿಗಳನ್ನು ಬೇರೆ ಅವಧಿಯಲ್ಲಿ ಬೆಳೆದು ಈಗ ಕೆಲ ರೈತರು ಲಾಭಗಳಿಸುತ್ತಿದ್ದಾರೆ.

ಒಳ್ಳೆಯ ವಹಿವಾಟು:-

ಜಿಲ್ಲಾ ಕೇಂದ್ರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬಿತ್ತನೆ ಆಲೂಗಡ್ಡೆ ಲೋಡುಗಳನ್ನು ಇಟ್ಟು ಒಳ್ಳೆಯ ವ್ಯಾಪಾರ ನಡೆಸಲಾಗುತ್ತಿದೆ ಪ್ರತಿವರ್ಷ ವೈವಾಟುದಾರರು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಲಾಭವನ್ನು ಗಳಿಸುತ್ತಿದ್ದಾರೆ.

ಚುರುಕು ಪಡೆದ ಬಿತ್ತನೆ ಕಾರ್ಯ :-

ಅಕ್ಟೋಬರ್ ತಿಂಗಳಿನಲ್ಲಿ ಜಮೀನುಗಳಲ್ಲಿ ಆಲೂಗಡ್ಡೆ ಬಿತ್ತನೆ ಪ್ರಕ್ರಿಯೆ ಚುರುಕು ಪಡೆದಿದೇ. ಹಾಗೆಯೇ ತೋಟಗಾರಿಕೆ ಇಲಾಖೆ ಬೆಲೆಗಾರರು ಕೈಗೊಳ್ಳಬೇಕಾದ ಸಂರಕ್ಷಣಾ ಕ್ರಮಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ.

ಮಾರಾಟಕ್ಕೆ ಫೇಮಸ್ ಜಿಲ್ಲೆ!

ಬಿತ್ತನೆ ಆಲೂಗಡ್ಡೆ ಮಾರಾಟದಲ್ಲಿ ಜಿಲ್ಲೆ ಇಡೀ ರಾಜ್ಯದ ಗಮನ ಸೆಳೆದಿದೆ. ಪ್ರತಿ ವರ್ಷ ಆಲೂಗಡ್ಡೆ ಬಿತ್ತನೆ ಸಮಯದಲ್ಲಿ ಇಲ್ಲಿನ ಎಪಿಎಂಸಿ ವರ್ತಕರು ದೂರದ ಪಂಜಾಬ್‍ನ ಜಲಂದರ್‍ನಿಂದ ಸಾವಿರಾರು ಮೆಟ್ರಿಕ್ ಟನ್‍ಗಟ್ಟಲೇ ಬಿತ್ತನೆ ಆಲೂಗಡ್ಡೆ ತರಿಸಿ ಮಾರಾಟ ಮಾಡುತ್ತಾರೆ.

ಇಡೀ ಜಿಲ್ಲೆ ಮಾತ್ರವಲ್ಲದೇ ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಹೊಸಕೋಟೆ, ತುಮಕೂರು, ಕೋಲಾರ, ನೆರೆಯ ಆಂಧ್ರಪ್ರದೇಶದ ಆನಂತಪುರ, ಲೇಪಾಕ್ಷಿ, ಪುಟ್ಟಪರ್ತಿ, ಹಿಂದೂಪುರ, ಮದನಪಲ್ಲಿ, ಪೆನಗೊಂಡ ಭಾಗದ ರೈತರು, ತಮಿಳುನಾಡಿನ ಹೊಸೂರು, ಕೃಷ್ಣಗಿರಿ ರೈತರು ಸಹ ಇಲ್ಲಿಗೆ ಬಂದು ಬಿತ್ತನೆ ಆಲೂಗಗಡ್ಡೆ ಖರೀದಿ ಮಾಡಿಕೊಂಡು ಹೋಗುತ್ತಾರೆ. ಆಲೂಗಡ್ಡೆ ಸೀಸನ್ ಬಂದರೆ ವರ್ತಕರಿಗೆ ಕೈ ತುಂಬ ಕಾಸದರೆ, ಕೂಲಿ ಕಾರ್ಮಿಕರಿಗೂ ಹೊಟ್ಟೆ ತುಂಬುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+