ರೈತರು ಕೇಳಿದಷ್ಟು ಪರಿಹಾರ ಕೊಡಲು ಆಗದು: ಡಿಸಿಎಂ ಲಕ್ಷ್ಮಣ ಸವದಿ
Recommended Video
ಬೆಳಗಾವಿ, ಅಕ್ಟೋಬರ್ 04: ರೈತರು ಕೇಳಿದಷ್ಟು ನೆರೆ ಪರಿಹಾರ ನೀಡಲು ಸಾಧ್ಯವಿಲ್ಲವೆಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ.
ಬೆಳಗಾವಿಯಲ್ಲಿ ನೆರೆ ಪರಿಹಾರಕ್ಕೆ ಮನವಿ ಮಾಡಿದ ರೈತರನ್ನು ಭೇಟಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ ಅವರು ಹೀಗೆ ಹೇಳಿದ್ದಾರೆ.
'ರೈತರು ಕೇಳಿದಷ್ಟು ಪರಿಹಾರ ನೀಡಿದರೆ ನಾನೇ 1 ಕೋಟಿ ರೂಪಾಯಿ ಪರಿಹಾರ ತೆಗೆದುಕೊಳ್ಳಬೇಕಾಗುತ್ತದೆ' ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.

'ಎಕರೆಗೆ 50 ಸಾವಿರ, 1 ಲಕ್ಷ ಪರಿಹಾರ ಕೊಡಿ ಎಂದು ರೈತರು ಕೇಳುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರ ಪರಿಹಾರ ವಿತರಣೆ ಮಾರ್ಗಸೂಚಿ ತೆಗೆದುಬಿಡಿ ಎಂದು ಕೇಳುತ್ತಿದ್ದಾರೆ. ಎಲ್ಲರಿಗೂ ಗರಿಷ್ಠ ಪರಿಹಾರ ಕೊಟ್ಟುಬಿಡಿ ಎನ್ನುತ್ತಿದ್ದಾರೆ ಇದು ಸಾಧ್ಯವಿಲ್ಲ' ಎಂದು ಸವದಿ ಹೇಳಿದರು.
ರೈತರು ಹೇಳಿದಂತೆ ಮಾಡಲಾಗುವುದಿಲ್ಲ ಎಂದ ಸವದಿ, ಕೇಂದ್ರವು ಕೊಡುವ ಬೆಳೆ ಪರಿಹಾರದೊಂದಿಗೆ ನಾವೂ ಒಂದಷ್ಟು ಸೇರಿಸಿ ಕೊಡಬೇಕು ಎಂಬ ಚಿಂತನೆ ನಡೆಸಿದ್ದೇವೆ. ರೈತ ಮುಖಂಡರಿಗೆ ಸಮಾಧಾನ ಆಗದೇ ಇದ್ದರೆ ನಾನೇನೂ ಮಾಡಲು ಆಗುವುದಿಲ್ಲ' ಎಂದು ಸವದಿ ಕೈಚೆಲ್ಲಿದರು.
ಜಿಲ್ಲಾ ವಿಭಜನೆ ಬಗ್ಗೆಯೂ ಇದೇ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, 'ಬಳ್ಳಾರಿ, ಬೆಳಗಾವಿ ಸೇರಿದಂತೆ ಯಾವುದೇ ಜಿಲ್ಲೆಗಳ ವಿಭಜನೆ ಸದ್ಯಕ್ಕೆ ಸರ್ಕಾರದ ಮುಂದೆ ಇಲ್ಲ'' ಎಂದು ಹೇಳಿದರು.












Click it and Unblock the Notifications