ರೈತರಿಗೆ ಸಿಹಿಸುದ್ದಿ; ಖಾರಿಫ್ ಬೆಳೆಗಳ ಎಂಎಸ್‌ಪಿ ಏರಿಕೆಗೆ ಕೇಂದ್ರದ ಒಪ್ಪಿಗೆ

ನವದೆಹಲಿ, ಜೂನ್ 07; ನೈಋತ್ಯ ಮುಂಗಾರು ಋತುವಿನ ಆರಂಭದಲ್ಲೇ ರೈತರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಏರಿಕೆ ಮಾಡಲು ಅನುಮತಿ ನೀಡಲಾಗಿದೆ. ಇನ್ನೂ ಮಳೆಗಾಲ ಆರಂಭವಾಗಬೇಕಿದೆ.

ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಖಾರಿಫ್ ಬೆಳೆಗಳ ಎಂಎಸ್‌ಪಿ ಏರಿಕೆ ಮಾಡಲು ಅನುಮತಿ ನೀಡಲಾಗಿದೆ. ಭಾರತದ ಕೃಷಿ ವಲಯಕ್ಕೆ ಜೂನ್‌ನಿಂದ ಆರಂಭವಾಗುವ ನೈಋತ್ಯ ಮುಂಗಾರು ಬಹಳ ಪ್ರಮುಖವಾಗಿದೆ.

Cabinet Approves To Hike Minimum Support Prices Of Kharif Crops

ದೇಶದಲ್ಲಿ ಖಾರಿಫ್ ಮತ್ತು ರಬಿ ಋತುಗಳಲ್ಲಿ ಭತ್ತ ಸೇರಿದತೆ ಇತರ ಪ್ರಮುಖ ಬೆಳೆಗಳನ್ನು ಬೆಳೆಯಲಾಗುತ್ತದೆ. ಪ್ರತಿ ವರ್ಷ ಮುಂಗಾರು ಋತು ಆರಂಭದಲ್ಲಿಯೇ ಕೇಂದ್ರ ಸರ್ಕಾರ ಈ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಲಾಗುತ್ತದೆ. ಬೆಳೆ ಬೆಳೆದ ರೈತರು ಹೆಸರು ನೋಂದಣಿ ಮಾಡುವ ಮೂಲಕ ಎಂಎಸ್‌ಪಿನಲ್ಲಿ ಬೆಳೆಯನ್ನು ಮಾರಾಟ ಮಾಡಬಹುದಾಗಿದೆ.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಬೆಳೆ ಬೆಳೆಯುವ ರೈತರಿಗೆ ಕನಿಷ್ಠ ಬೆಂಬಲ ಬೆಲೆ ದೊರೆಯುವಂತಾಗಬೇಕು ಎಂದು ಹೇಳಿದೆ. ಒಂದು ವೇಳೆ ಬೆಳೆ ಕೈಗೆ ಬರುವ ಹೊತ್ತಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದರೂ ಸಹ ಎಂಎಸ್‌ಪಿ ಅನ್ವಯ ನಿಗದಿತ ಬೆಲೆ ರೈತರಿಗೆ ಸಿಗುವಂತೆ ಆಗುತ್ತದೆ.

paddy-crop

ಯಾವ ಬೆಳೆಗೆ ಎಷ್ಟು?; ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮಾಹಿತಿಯಂತೆ ಖಾರಿಫ್ ಬೆಳೆಗಳಲ್ಲಿ ಪ್ರಮುಖವಾದ ಭತ್ತಕ್ಕೆ ಕ್ವಿಂಟಾಲ್‌ಗೆ 143 ರೂ. ಎಂಎಸ್‌ಪಿ ಏರಿಕೆ ಮಾಡಲಾಗಿದೆ. ಸಾಮಾನ್ಯ ಭತ್ತಕ್ಕೆ 2,183 ಮತ್ತು 'ಎ' ಗ್ರೇಡ್ ಭತ್ತಕ್ಕೆ 2,203 ರೂ. ದರ ನಿಗದಿ ಮಾಡಲಾಗಿದೆ.

ಕಾಳುಗಳು, ಎಣ್ಣೆ ಬೀಜಗಳು ಮತ್ತು ಸಿರಿಧಾನ್ಯಗಳಿಗೆ ಸಹ ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು ಶೇ 4 ರಿಂದ 12ಕ್ಕೆ ಏರಿಕೆ ಮಾಡಲಾಗಿದೆ. ರೈತರು ಬೆಳೆಗೆ ಬೆಳೆದ ಶೇ 50ರಷ್ಟು ಲಾಭವನ್ನು ನೀಡುವ ಉದ್ದೇಶವನ್ನು ಇಟ್ಟುಕೊಂಡು ಎಂಎಸ್‌ಪಿ ನಿರ್ಧಾರ ಮಾಡಲಾಗಿದೆ ಎಂದು ಸಚಿವಾಲಯ ಹೇಳಿದೆ.

ದೇಶದಲ್ಲಿನ ರೈತರು ಬೆಳೆಯುವ ಬೆಳೆಗಳನ್ನು ಖಾರಿಫ್, ರಬಿ ಎಂದು ನಿರ್ಧರಿಸಲಾಗುತ್ತದೆ. ಜೂನ್-ಜುಲೈ ತಿಂಗಳಿನಲ್ಲಿ ಬಿತ್ತನೆಯಾದ ಬೆಳೆಗಳು ಅಕ್ಟೋಬರ್‌, ನವೆಂಬರ್‌ ತನಕ ಕಟಾವಿಗೆ ಬರುತ್ತವೆ. ಅದರಲ್ಲೂ ಮುಂಗಾರು ಮಳೆಯನ್ನು ಅವಲಂಬಿಸಿ ಬೆಳೆಯುವ ಪ್ರಮುಖ ಬೆಳೆಗಳಲ್ಲಿ ಭತ್ತ ಪ್ರಮುಖವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+