ಜೀವ ಬಿಟ್ಟೆವು, ಜಮೀನು ಬಿಡುವುದಿಲ್ಲ: ಕೈಗಾರಿಕಾ ಕಾರಿಡಾರ್‌ಗೆ ಬ್ಯಾಡಗಿ ರೈತರ ವಿರೋಧ

ಹಾವೇರಿ, ನವೆಂಬರ್‌, 21: ರೈತರು ತಮ್ಮ ಜಮೀನು ಉಳಿಸಿಕೊಳ್ಳಲು ಬ್ಯಾಡಗಿ ತಹಶೀಲ್ದಾರರ ಕಚೇರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ನಾವೂ ಉಳಿಮೆ ಮಾಡಿ ಬದುಕು ಕಟ್ಟಿಕೊಳ್ಳುತ್ತಿರುವ ಜಮೀನನ್ನು ಕಿತ್ತುಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ಕೈಯಲ್ಲಿ ತಮ್ಮ ಬೇಡಿಕೆಯ ಬಿತ್ತಿ ಪತ್ರ ಹಿಡಿದು ತಹಶೀಲ್ದಾರರ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದ್ದಾರೆ. ತಮ್ಮ ಜಮೀನು ಉಳಿಸಿಕೊಳ್ಳಲು ಹೀಗೆ ಬ್ಯಾಡಗಿ ತಹಶೀಲ್ದಾರರ ಕಚೇರಿ ಮುಂದೆ ಕುಳಿತು ಪ್ರತಿಭಟಿಸಿದರು. ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಭೂಸ್ವಾಧೀನ ಮಾಡುತ್ತಿರುವುದನ್ನು ಖಂಡಿಸಿ ರೈತರು ಆಕ್ರೋಶ ಹೊರಹಾಕಿದರು. ಅಲ್ಲದೆ ಕಷ್ಟಪಟ್ಟು ಬೆಳೆ ಬೆಳೆಯುವ ಭೂಮಿಯನ್ನು ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ಬಳಕೆ ಮಾಡುವುದು ಸರಿಯಲ್ಲ. ಜೀವ ಬಿಟ್ಟೆವು, ಭೂಮಿಯನ್ನು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Byadagi farmers protest against industrial corridor

ಕಾರಿಡಾರ್‌ ನಿರ್ಮಾಣಕ್ಕೆ ಭಾರಿ ವಿರೋಧ

1,017 ಹೆಕ್ಟೇರ್ ಫಲವತ್ತಾದ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾದ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣಕ್ಕೆ ನಮ್ಮ ಒಮ್ಮತ ಇದೆ. ಆದರೆ ಉತ್ತಮ ಬೆಳೆ ಬೆಳೆಯುವ ಭೂಮಿಯನ್ನು ಬಿಟ್ಟು ಬೇರೆ ಕಡೆ ಕಾರಿಡಾರ್ ನಿರ್ಮಾಣ ಮಾಡಲಿ ನಮ್ಮ ಅಡ್ಡಿ ಏನೂ ಇಲ್ಲ. ಬಡ ರೈತರ ಹೊಟ್ಟೆ ಮೇಲೆ ಹೊಡೆಯಲು ನಾವು ಬಿಡುವುದಿಲ್ಲ. ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡುವವರೆಗೂ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹಾಗೂ ತಹಶೀಲ್ದಾರರ ಕಚೇರಿ ಬಂದ್ ಮಾಡಿದ್ದು, ನಮ್ಮ ಪ್ರತಿಭಟನೆಗೆ ಸರ್ಕಾರ ಮನ್ನಣೆ ನೀಡಬೇಕು ಎಂದರು. ಮೋಟೆಬೆನ್ನೂರಿನಿಂದ ಬ್ಯಾಡಗಿವರೆಗೂ ಎತ್ತಿನ ಗಾಡಿ ಮೂಲಕ ತಹಶೀಲ್ದಾರರ ಕಚೇರಿವರೆಗೂ ಪಾದಯಾತ್ರೆ ನಡೆಸಿದ ರೈತರು, ಕಚೇರಿ ಆವರಣದಲ್ಲಿ ಎತ್ತಿನಗಾಡಿ ಸಮೇತ ಧರಣಿ ನಡೆಸಿದ್ದಾರೆ. ಕಾರಿಡಾರ್‌ಗೆ ರೈತರ ಫಲವತ್ತಾದ ಜಮೀನು ಹೋರತುಪಡಿಸಿ ಬಂಜರು ಭೂಮಿ ನೋಡಿಕೊಳ್ಳಲಿ ಎಂದು ಪಟ್ಟುಹಿಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+