ಕುರಿಗಾಹಿಗೆ ವರದಾನವಾದ ಉಣ್ಣೆ ಕಟಾವು ಯಂತ್ರ: ಉಣ್ಣೆ ಉತ್ಪಾದಕರ ಸಹಕಾರ ಸಂಘದಿಂದ ಯಂತ್ರ ಬಾಡಿಗೆ
ರಾಯಚೂರು ಜೂನ್ 28: ಆಧುನಿಕ ಜಗತ್ತಿನ ಎಲ್ಲ ಕ್ಷೇತ್ರಗಳಲ್ಲೂ ಯಂತ್ರಗಳ ಬಳಕೆ ಹೆಚ್ಚಾಗಿದೆ. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮೂಲಕ ಐದು ವರ್ಷಗಳ ಹಿಂದೆ ಸರ್ಕಾರ ಪರಿಚಯಿಸಿದ್ದ ಉಣ್ಣೆ ಕಟಾವು ಯಂತ್ರ ಈಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ.
ಅಂದಾಜು 2.5 ಲಕ್ಷ ಬೆಲೆ ಬಾಳುವ ಯಂತ್ರವನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಿಗೆ ಉಚಿತವಾಗಿ ನೀಡಲಾಗುತ್ತದೆ.

ಪ್ರತಿ ಕುರಿಯ ಉಣ್ಣೆ ತೆಗೆಯಲು 5 ರೂಪಾಯಿ ನಿಗದಿ ಮಾಡಿದ್ದು ಅದರಲ್ಲಿ ನಿಗಮಕ್ಕೆ 2 ರೂಪಾಯಿ, ಸಹಕಾರ ಸಂಘಕ್ಕೆ 1 ರೂಪಾಯಿ ಮತ್ತು ಯಂತ್ರದ ಆಪರೇಟರ್‌ಗೆ 2 ರೂಪಾಯಿ ಪಡೆಯಲು ನಿಗಮ ನಿರ್ದೇಶಿಸಿದೆ. ಕುರಿಗಾಹಿಗಳಿಂದ ಪಡೆಯುವ ಎರಡು ರೂಪಾಯಿ ಯಲ್ಲಿ ಬೇಡ್ ಬದಲಾವಣೆ ಸೇರಿ ಯಂತ್ರದ ನಿರ್ವಹಣೆ ಮಾಡಬೇಕು.
ಕತ್ತರಿ ಬಳಸಿ ತೆಗೆಯುತ್ತಿದ್ದ ಉಣ್ಣೆ ಅರೆಬರೆ ಬರುತ್ತಿದ್ದ ಕಾರಣ ಅದನ್ನು ಬಿಸಾಡುತ್ತಿದ್ದರು. ಸದ್ಯ ಈ ಯಂತ್ರ ಬಳಿಸಿ ಉಣ್ಣೆ ಕಟಾವು ಮಾಡಿದಾಗ ಸಂಪೂರ್ಣ ಉಣ್ಣೆ ಬರುತ್ತದೆ. ಸಮಯದ ಉಳಿತಾಯದ ಜತೆಗೆ ಉಣ್ಣೆ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಲಾಭ ಪಡೆಯಬಹುದು ಎನ್ನುವುದು ಸಹಕಾರ ಸಂಘಗಳ ಅನಿಸಿಕೆ.

ಒಂದು ಗಂಟೆ ಅವಧಿಯಲ್ಲಿ ಅಂದಾಜು 30 ರಿಂದ 40 ಕುರಿಗಳ ಉಣ್ಣೆ ತೆಗೆಯಬಹುದು. ಚರ್ಮಕ್ಕೆ ಗಾಯವಾಗುವುದಿಲ್ಲ. ಯಂತ್ರ ಬಳಕೆಯಿಂದ ಉದ್ದನೆಯ ಉಣ್ಣೆ ಬರುತ್ತದೆ ಅದನ್ನು ಪ್ರತಿ ಕೆ ಜಿಗೆ 70 ರೂಪಾಯಿ ರಂತೆ ಸಂಘವೇ ಖರೀದಿಸುವ್ಯದರಿಂದ ಕುರಿಗಾಹಿಗಳಿಗೆ ಈ ಯಂತ್ರ ವರದಾನವಾಗಲಿದೆ ಎಂದು ಮಲ್ಲದಗುಡ್ಡದ ಅಮೋಘ ಸಿದ್ಧೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಲ್ಲಯ್ಯ ಗೋರ್ಕಲ್ ಹೇಳಿದರು.
ಕಂಬಳಿ ತಯಾರಿಕೆ ಜತೆಗೆ ಉಣ್ಣೆಯನ್ನು ತುಂಬಿದ ಗಾ ದೆ ರೂಪದ ಹಾಸಿಗೆ ಬಳಸಿ ಆಸ್ಪತ್ರೆಗಳಲ್ಲಿ ಆಕ್ಯೂಪಂಕ್ಚರ್ ಚಿಕಿತ್ಸೆ ನೀಡಲಾಗುತ್ತಿರುವ್ಯದರಿಂದ ಕುರಿ ಉಣ್ಣೆಗೆ ಬೇಡಿಕೆ ಹೆಚ್ಚಿದೆ. ಯಂತ್ರದಿಂದ ಉಣ್ಣೆ ತೆಗೆದು ಮಾರಾಟ ಮಾಡಿದರೆ ಗ್ರಾಮೀಣ ಭಾಗದ ಕುರಿಗಾಹಿಗಳು ಆರ್ಥಿಕವಾಗಿ ಸದೃಢರಾಗಬಹುದು ಎಂದು ಮಲ್ಲಯ್ಯ ಅಭಿಪ್ರಾಯಪಟ್ಟರು.

ಯಂತ್ರ ಬಳಕೆಯಿಂದ ಸಲೀಸಾಗಿ ಉಣ್ಣೆ ತೆಗೆಯಲು ಸಾಧ್ಯವಾಯಿತು. ವಿದ್ಯುತ್ ಚಾಲಿತ ಯಂತ್ರವಾಗಿದ್ದರಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕೈ ಕೊಟ್ಟರೆ ಸಮಸ್ಯೆಯಾಗುತ್ತದೆ. ಬ್ಯಾಟರಿ ಅಥವಾ ಸೋಲಾರ್ ವ್ಯವಸ್ಥೆಯಡಿ ಯಂತ್ರ ಬಳಸುವಚಿತಾದರೆ ಹೆಚ್ಚು ಉಪಯುಕ್ತವಾಗುತ್ತದೆ ಎಂದು ಕುರಿಗಾಹಿ ದೇವಣ್ಣ ಹೇಳಿದರು.
ಈ ಭಾಗದ ಕುರಿಗಳಲ್ಲಿ ಉಣ್ಣೆ ಉತ್ಪಾದನೆ ಕಡಿಮೆ. ಹೀಗಾಗಿ ಕುರಿಗಳಿಗೆ ಉಣ್ಣೆ ತೆಗೆದು ಕೀಟ ಬೀಳದಂತೆ ತಡೆಯಲು ಮಾತ್ರ ಯಂತ್ರ ಬಳಕೆಯಾಗುತ್ತಿದೆ. ಜಿ ಲ್ಲೆಯಲ್ಲಿ 13 ಸಂಘಗಳಿಗೆ ಯಂತ್ರ ವಿತರಣೆ ಮಾಡಲಾಗಿದೆ ಎಂದು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ರಾಯಚೂರು ಇಲಾಖೆಯ ಸಹಾಯಕ ನಿರ್ದೇಶಕ ಯಮನಪ್ಪ ವಾಲ್ಮೀಕಿ ಹೇಳಿದರು.












Click it and Unblock the Notifications