'ಕುರುಡು ಅಂಗಕ್ಕೆ ಹೊರತು ಆತ್ಮವಿಶ್ವಾಸಕ್ಕಲ್ಲ' ಅಂಧನ ಸಾಧನೆ
ಬೆಂಗಳೂರು, ಫೆಬ್ರವರಿ 06: ಇಂದಿನ ದಿನಗಳಲ್ಲಿ ಮನುಷ್ಯನಿಗೆ ಎಲ್ಲಾ ಅಂಗಾಂಗಗಳು ಚೆನ್ನಾಗಿದ್ದರೂ ಸಹ ಉದ್ಯೋಗ ಮಾಡದೆ ಸೋಮಾರಿತನ ತೋರಿಸುತ್ತಿರುತ್ತಾರೆ. ವಿದ್ಯಾವಂತರೂ ಸಹ ಉದ್ಯೋಗ ಸಿಗುತ್ತಿಲ್ಲ ಎಂದು ಕೈಕಟ್ಟಿ ಕುಳಿತಿದ್ದಾರೆ.
ಆದರೆ ಇಲ್ಲೊಬ್ಬ ವ್ಯಕ್ತಿಯಿದ್ದಾರೆ ಹುಟ್ಟು ಕುರುಡುತನ ಇವರನ್ನು ಕತ್ತಲೆಗೆ ತಳ್ಳಿದೆ. ಆದರೂ ದೃತಿಗೆಡದ ಇವರು ಸಮಗ್ರ ಬೇಸಾಯದಿಂದ ಸಾಧನೆಯತ್ತ ಹೆಜ್ಜೆಯಿಡುತ್ತಿದ್ದಾರೆ. ತಮ್ಮ ಬಾಳು ಕತ್ತಲಿಯಲ್ಲಿ ಮುಳುಗಿದರೂ ಎದೆಗುಂದದೆ ಇನ್ನು ಹಲವರ ಬಾಳಲ್ಲಿ ಬೆಳಕಾಗಿದ್ದಾರೆ. ತಮ್ಮ ಗ್ರಾಮದ ಹಲವು ಮಂದಿಗೆ ತಮ್ಮದೇ ಫಾರ್ಮ್ ನಲ್ಲಿ ಉದ್ಯೋಗ ನೀಡಿ ಅವರ ಬಾಳಿನಲ್ಲಿ ಭರವಸೆಯ ಬೆಳಕಾಗಿದ್ದಾರೆ.
ಈಗ ತೋಟದಲ್ಲಿ ಕೆಲಸಗಾರರೊಂದಿಗೆ ಸೇರಿ ಕೆಲಸ ಮಾಡುತ್ತಿರುವ ಈತನ ಹೆಸರು ಯಲ್ಲಪ್ಪ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ನಿವಾಸಿ. ಈತನು ತಾನು ಹುಟ್ಟಿದಾಗಲೇ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಆದರೂ ಎದೆಗುಂದದ ಯಲ್ಲಪ್ಪ ತಮ್ಮ ಗ್ರಾಮದವರನ್ನು ಆಶ್ಚರ್ಯಪಡಿಸುವಂತೆ ಬೇಸಾಯ ಮಾಡುತ್ತಿದ್ದಾನೆ. ಪಾಲಿ ಹೌಸ್ ನಿರ್ಮಿಸಿ ಗ್ರಾಮದ ಹಲವು ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತಿದ್ದಾನೆ. ಕಣ್ಣು ಕಾಣದಿದ್ದರೂ ಈತನು ಬೇಸಾಯ ಮಾಡಿ ಬೆಳೆ ಪಡೆಯುವ ಪರಿ ನೋಡಿ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ

ಅಂದಹಾಗೆ ಹುಟ್ಟು ಕುರುಡನಾಗಿ ಯಲ್ಲಪ್ಪ ಕಡು ಬಡತನದ ಕುಟುಂಬದಲ್ಲಿ ಜನಿಸಿದ್ದು, ಆರಂಭದಲ್ಲಿ ನಿತ್ಯದ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ತಂದೆ, ತಾಯಿ ಸೇರಿ ಎಲ್ಲರೂ ಕೂಲಿ ಮಾಡಿಕೊಂಡು ಬದುಕಿನ ಬಂಡಿ ಸಾಗಿಸುತ್ತಿದ್ದರು. ಇದರಿಂದ ಯಲ್ಲಪ್ಪ ವಿದ್ಯಾಭ್ಯಾಸ ಸಹ ಮಾಡಲು ಸಾಧ್ಯವಾಗಲಿಲ್ಲ . ಆದರೂ ಹಿಂದೇಟು ಹಾಕದ ಯಲ್ಲಪ್ಪ ತಮಗಿದ್ದ2 ಎಕರೆ ಬಂಜರು ಭೂಮಿಯಲ್ಲಿ ಬೇಸಾಯ ಮಾಡಲು ಆರಂಭಿಸಿದ. ಇದೇ ಸಂದರ್ಭದಲ್ಲಿ ಈತನಿಗೆ ಮದುವೆ ಸಹ ಮಾಡಲಾಯಿತು.

ಆದರೆ ಯಲ್ಲಪ್ಪನನ್ನು ಅರ್ಥ ಮಾಡಿಕೊಳ್ಳದ ಹೆಂಡತಿ ಮದುವೆಯಾದ ಕೆಲ ತಿಂಗಳ ನಂತರ ಈತನನ್ನು ತೊರೆದುಬಿಟ್ಟಳು. ಇದರಿಂದ ಯಲ್ಲಪ್ಪ ಸಾಕಷ್ಟು ಮನನೊಂದು ದುಖಃತಪ್ತನಾದ. ಒಂದೆಡೆ ಕಣ್ಣುಗಳೆರಡು ಕಾಣುವುದಿಲ್ಲ ಇನ್ನು ಕಣ್ಣಾಗಬೇಕಿದ್ದ ಹೆಂಡತಿ ಸಹ ಕೈ ಕೊಟ್ಟಿ ಹೋದಳು ಎಂದು ಯಲ್ಲಪ್ಪ ಸುಮ್ಮನಾಗಲಿಲ್ಲ.

ತನ್ನ ಜಮೀನಿನಲ್ಲಿ ಭರಪೂರ ಬೇಸಾಯ ಮಾಡಲು ಆರಂಭಿಸಿದ. ಬಂಜರು ಭೂಮಿಯನ್ನು ಫಲವತ್ತಾದ ಭೂಮಿಯನ್ನಾಗಿಸಿದ. ಕಣ್ಣು ಕಾಣುವವರನ್ನು ನಾಚಿಸುವಂತೆ ಬೆಳೆ ಬೆಳೆದ. ಮಾತ್ರವಲ್ಲ ಕೃಷಿ ಇಲಾಖೆ ನೀಡಿದ ಅನುದಾನ ಉಪಯೋಗಿಸಿಕೊಂಡು ಫಾಲಿ ಹೌಸ್ ನಿರ್ಮಾಣ ಮಾಡಿ ತನ್ನ ಫಾಲಿ ಹೌಸ್ನಲ್ಲಿ ಹತ್ತಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದ್ದಾನೆ.

ಒಟ್ಟಾರೆ ಇಂದಿನ ಸಮಾಜದಲ್ಲಿ ಹಲವು ಮಂದಿ ಕಣ್ಣಿದ್ರು ಕುರುಡರಮನತೆ ವರ್ತಿಸುತ್ತಿದ್ದಾರೆ. ಯಾವ ಅಂಗ ವೈಕಲ್ಯವಿಲ್ಲದಿದ್ದರೂ ಬಿಕ್ಷುಕರಂತೆ ಬದುಕು ನಡೆಸುತ್ತಿದ್ದಾರೆ. ಇಂತಹವರ ಮುಂದೆ ಎಲ್ಲಪ್ಪ ಸಾರ್ಥಕ ಜೀವನ ನಡೆಸುತ್ತಿದ್ದಾನೆ. ಇಡೀ ಸಮಾಜ ಗೌರವಿಸುವಂತೆ ಬೇಸಾಯ ಮಾಡುತ್ತ, ಇತರರಿಗೂ ಕೆಲಸ ನೀಡಿ ಎಲ್ಲರಿಗೂ ಮಾದರಿಯಾಗಿ ನಿಂತಿದ್ದಾರೆ.
-
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ.












Click it and Unblock the Notifications