ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಕಾಯ್ದೆ ಪರ ಜಾಹೀರಾತಿಗೆ ಪ್ರತಿಭಟನಾನಿರತ ರೈತನ ಫೋಟೊ; ಸರ್ಕಾರದ ವಿರುದ್ಧ ಆಕ್ಷೇಪ

|
Google Oneindia Kannada News

ಪಂಜಾಬ್, ಡಿಸೆಂಬರ್ 23: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ರೈತವಿರೋಧಿಯಾಗಿರುವ ಈ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ 26ರಿಂದಲೂ ಲಕ್ಷಾಂತರ ರೈತರು ಗಡಿ ಪ್ರದೇಶಗಳಲ್ಲಿ ಹೋರಾಟ ಕೈಗೊಂಡಿದ್ದಾರೆ. ಈ ನಡುವೆ ಪ್ರತಿಭಟನಾನಿರತ ರೈತನ ಐದು ವರ್ಷದ ಹಿಂದಿನ ಪೋಟೊವನ್ನು ತನ್ನ ಜಾಹೀರಾತಿಗೆ ಬಳಸಿಕೊಂಡು ರೈತರ ವಿರೋಧಕ್ಕೆ ಗುರಿಯಾಗಿದೆ ಪಂಜಾಬ್ ಸರ್ಕಾರ.

ಸದ್ಯಕ್ಕೆ ಪ್ರತಿಭಟನೆಯಲ್ಲಿ ಇರುವ ಪಂಜಾಬ್ ನ ಹರಪ್ರೀತ್ ಸಿಂಗ್ ಫೋಟೊವನ್ನು ಪಂಜಾಬ್ ಸರ್ಕಾರ್ ಕನಿಷ್ಠ ಬೆಂಬಲ ಬೆಲೆ ಜಾಹೀರಾತಿಗೆ, ಕೃಷಿ ಕಾಯ್ದೆಯನ್ನು ಸಮರ್ಥಿಸಿಕೊಳ್ಳುವಂತೆ ಬಳಸಿಕೊಂಡಿರುವುದು ವಿರೋಧವನ್ನು ಹುಟ್ಟುಹಾಕಿದೆ. ಮುಂದೆ ಓದಿ...

"ಸರ್ಕಾರದ ಪತ್ರ ರೈತರನ್ನು ಮೋಸಗೊಳಿಸುವ ಒಂದು ತಂತ್ರವಷ್ಟೆ"

 ಕಾಯ್ದೆ ಪರ ಜಾಹೀರಾತಿಗೆ ರೈತನ ಹಳೆಯ ಫೋಟೊ ಬಳಕೆ

ಕಾಯ್ದೆ ಪರ ಜಾಹೀರಾತಿಗೆ ರೈತನ ಹಳೆಯ ಫೋಟೊ ಬಳಕೆ

36 ವರ್ಷದ ಹರಪ್ರೀತ್ ಸಿಂಗ್ ಫೋಟೊವನ್ನು ಪಂಜಾಬ್ ಸರ್ಕಾರ ತನ್ನ ಕೃಷಿ ಕಾಯ್ದೆ ಪರ ಜಾಹೀರಾತಿಗೆ ಬಳಸಿಕೊಂಡಿದೆ. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಪೋಸ್ಟ್ ಅನ್ನು ತೆಗೆದುಹಾಕಲಾಗಿದೆ. ಇದೀಗ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಸಿಂಘು ಗಡಿಯಲ್ಲಿ ರೈತರೊಂದಿಗೆ ಪ್ರತಿಭಟನೆಗೆ ಕೈಜೋಡಿಸಿರುವ ಹರಪ್ರೀತ್ ಸಿಂಗ್ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.

 ಹಾರ್ಪ್ ಫಾರ್ಮರ್

ಹಾರ್ಪ್ ಫಾರ್ಮರ್" ಎಂದೇ ಖ್ಯಾತಿ

ಪಂಜಾಬ್ ನ ಹೋಷಿಯಾರ್ ಪುರ ಮೂಲದ ಹರಪ್ರೀತ್ ಸಿಂಗ್, "ಹಾರ್ಪ್ ಫಾರ್ಮರ್" ಎಂದೇ ಟ್ವಿಟ್ಟರ್ ನಲ್ಲಿ ಖ್ಯಾತಿ ಪಡೆದಿದ್ದಾರೆ. ಈ ಜಾಹೀರಾತಿಗೆ ಸರ್ಕಾರ ತನ್ನ ಅನುಮತಿಯಿಲ್ಲದೇ ನನ್ನ ಫೋಟೊ ಬಳಸಿಕೊಂಡಿದೆ ಎಂದು ದೂರಿದ್ದಾರೆ. ಕೃಷಿ ಕಾಯ್ದೆ ಬೆಂಬಲಿಸುವಂತೆ ಇರುವ ಸರ್ಕಾರದ ಜಾಹೀರಾತಿನಲ್ಲಿ ನನ್ನ ಫೋಟೊ ಬಳಸಿಕೊಂಡಿರುವುದಾಗಿ ನನ್ನ ಸ್ನೇಹಿತ ಹೇಳಿದ. ನನ್ನ ಸಾಮಾಜಿಕ ಜಾಲತಾಣದ ಪ್ರೊಫೈಲ್ ನಿಂದ ಆ ಫೋಟೊವನ್ನು ತೆಗೆದುಕೊಳ್ಳಲಾಗಿದೆ" ಎಂದು ಹೇಳಿದ್ದಾರೆ.

"ಸರ್ಕಾರದ ಪತ್ರ ರೈತರನ್ನು ಮೋಸಗೊಳಿಸುವ ಒಂದು ತಂತ್ರವಷ್ಟೆ"

 ಈ ಬಗ್ಗೆ ತಿಳಿದಿಲ್ಲ ಎಂದ ಉಸ್ತುವಾರಿ

ಈ ಬಗ್ಗೆ ತಿಳಿದಿಲ್ಲ ಎಂದ ಉಸ್ತುವಾರಿ

ಈ ಕುರಿತು ಪಂಜಾಬ್ ನ ಬಿಜೆಪಿ ಮೀಡಿಯಾ ಉಸ್ತುವಾರಿ ಜನಾರ್ದನ್ ಶರ್ಮ ಪ್ರತಿಕ್ರಿಯಿಸಿ, "ನನಗೆ ಅವರ ಫೋಟೊ ಇದರಲ್ಲಿ ಹೇಗೆ ಬಂತು ಎಂಬುದರ ಕುರಿತು ತಿಳಿದಿಲ್ಲ. ಈಗ ಆ ಪೋಸ್ಟ್ ಅನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.

 ಜಾಹೀರಾತಿನಲ್ಲಿ ಏನಿದೆ?

ಜಾಹೀರಾತಿನಲ್ಲಿ ಏನಿದೆ?

ಜಾಹೀರಾತಿನಲ್ಲಿ ರೈತರ ದಿರಿಸಿನಲ್ಲಿ ಹರಪ್ರೀತಿ ಸಿಂಗ್ ಇದ್ದು, ಖಾರಿಫ್ ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಬೆಳೆಗಳ ಖರೀದಿ ನಡೆಯುತ್ತಿದೆ ಎಂಬುದನ್ನು ಈ ಜಾಹೀರಾತು ತೋರಿಸುತ್ತದೆ. ಜಾಹೀರಾತಿನಲ್ಲಿ 412.91 ಎಲ್ ಎಂಟಿ ಬೆಳೆಯನ್ನು ನೋಡಲ್ ಏಜೆನ್ಸಿ ಖರೀದಿಸಿದ್ದು, ಇದರಿಂದ 48.56 ಲಕ್ಷ ರೈತರಿಗೆ ಅನುಕೂಲವಾಗಿರುವುದಾಗಿ ಹೇಳಿಕೊಂಡಿದೆ. ಬೇಳೆ, ಸೋಯಾಬೀನ್, ಉದ್ದಿನಬೇಳೆ, ಹತ್ತಿ ಬೆಳೆಗಳನ್ನು ಎಂಎಸ್ ಪಿಯಡಿ ಖರೀದಿ ಮಾಡುವುದಾಗಿ ತಿಳಿಸಿದೆ.

"ರೈತರ ಪರ ನನ್ನ ಹೋರಾಟ"

ಜಾಹೀರಾತನ್ನು ಬಿಜೆಪಿ ಆನ್ ಲೈನ್ ಗೆ ಹಾಕುತ್ತಿದ್ದಂತೆ, ಆನ್ ಲೈನ್ ನಲ್ಲೇ ಹರಪ್ರೀತ್ ಉತ್ತರಿಸಿದ್ದಾರೆ. "ನ.26ರಿಂದಲೂ ನಾನು ಸಿಂಘು ಗಡಿಯಲ್ಲಿದ್ದೇನೆ. ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇನೆ. ಆದರೆ ಈಗ ಬಿಜೆಪಿ ತನ್ನ ಕಾಯ್ದೆ ಪರವಾಗಿರುವ ಜಾಹೀರಾತಿನಲ್ಲಿ ನನ್ನ ಫೋಟೊ ಬಳಸಿಕೊಂಡಿದೆ. ಅದೂ ನನ್ನ ಸಮ್ಮತಿ ಇಲ್ಲದೇ. ಇದು ಅಸಭ್ಯತೆಯ ಪರಮಾವಧಿ. ನನ್ನ ಕುಟುಂಬ ಐದು ಎಕರೆಯಲ್ಲಿ ಗೋಧಿ, ಮೆಕ್ಕೆಜೋಳ ಬೆಳೆಯುತ್ತಿದೆ ನನ್ನದು ರೈತ ಕುಟುಂಬ. ಈ ಕಾಯ್ದೆಗಳ ವಿರುದ್ಧ ಹೋರಾಡುತ್ತೇನೆ ಎಂದಿದ್ದಾರೆ.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

English summary
The BJP social media of punjab featured a farmer photo supporting agriculture laws created opposition,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X