ಬಿಜೆಪಿಯ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಎಚ್ಚರಿಕೆ ನೀಡಿದ ಯಡಿಯೂರಪ್ಪ

Recommended Video

      ಬಿಜೆಪಿಯ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಎಚ್ಚರಿಕೆ ನೀಡಿದ ಯಡಿಯೂರಪ್ಪ..! | Oneindia Kannada

      ಬೆಂಗಳೂರು, ನವೆಂಬರ್ 20: ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಕರೆ ನೀಡಿರುವ ಯಡಿಯೂರಪ್ಪ ಅವರು, ಕಬ್ಬು ಬೆಳೆಗಾರರ ಬಾಕಿ ಉಳಿಸಿಕೊಂಡಿರುವ ಬಿಜೆಪಿ ಮುಖಂಡರಿಗೂ ಎಚ್ಚರಿಕೆ ನೀಡಿದ್ದಾರೆ.

      ಸಕ್ಕರೆ ಕಾರ್ಖಾನೆ ಹೊಂದಿರುವ ಬಿಜೆಪಿ ಶಾಸಕರು ಮತ್ತು ಮುಖಂಡರು ಒಂದು ವಾರದ ಒಳಗೆ ಬೆಳೆಗಾರರ ಬಾಕಿ ಪಾವತಿಸಬೇಕು ಎಂದು ಅವರು ಹೇಳಿದ್ದಾರೆ.

      ಬಿಜೆಪಿಯವರೇ ರೈತರ ಬಾಕಿ ಪಾವತಿಸಲಿಲ್ಲವೆಂದರೆ ತಾವು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅನ್ನು ಪ್ರಶ್ನೆ ಮಾಡುವ ನೈತಿಕತೆ ಉಳಿಸಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಯಡಿಯೂರಪ್ಪ ಅವರು ಈ ಆದೇಶ ಹೊರಡಿಸಿದ್ದಾರೆ.

      BJP leaders who owns Sugar factory should pay money to farmers: BSY

      ಕಬ್ಬು ಬೆಳಗಾರರ ಬಾಕಿ ಪಾವತಿ ಮಾಡದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮೇಲೆ ಕೈಗೊಳ್ಳಿ ಅವರು ಕಾಂಗ್ರೆಸ್‌ ನವರಾದರೂ ಸರಿ, ಬಿಜೆಪಿಯವರಾದರೂ ಸರಿ ಎಂದು ಯಡಿಯೂರಪ್ಪ ಅವರು ಖಡಕ್ ಆಗಿ ಹೇಳಿದ್ದಾರೆ.

      ಉತ್ತರ ಕರ್ನಾಟಕ ಭಾಗದಲ್ಲಿನ ಹಲವು ಸಕ್ಕರೆ ಕಾರ್ಖಾನೆಗಳು ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು, ಮುಖಂಡರ ಸಕ್ಕರೆ ಕಾರ್ಖಾನೆಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಬಿಜೆಪಿಯು ಕಬ್ಬು ಬೆಳೆಗಾರರ ವಿಷಯವನ್ನು ಬೆಳಗಾವಿ ಅಧಿವೇಶನದಲ್ಲಿ ಅಸ್ತ್ರವಾಗಿ ಬಳಸಲು ಯೋಜಿಸಿದ್ದು, ತಮ್ಮ ಪಕ್ಷದವರೇ ರೈತರಿಗೆ ಬಾಕಿ ಉಳಿಸಿಕೊಂಡಿದ್ದರೆ ಹಿನ್ನಡೆ ಆಗುತ್ತದೆ ಎನ್ನುವುದು ಯಡಿಯೂರಪ್ಪ ಅವರ ಆಲೋಚನೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+