ಬೆಳಗಾವಿ ಅಧಿವೇಶನಕ್ಕೆ ಬಿಗಿ ಬಂದೋಬಸ್ತ್
ಬೆಳಗಾವಿ,ನವೆಂಬರ್ 21: ಸುವರ್ಣ ಸೌಧದಲ್ಲಿ ಅಧಿವೇಶನ ಪ್ರಾರಂಭವಾಗುವ ಮುನ್ನವೇ ರೈತರ ಆಕ್ರೋಶ ಭುಗಿಲೆದ್ದಿದೆ. ಅದರೆ ಭದ್ರತೆ ಒದಗಿಸಲು ಪೊಲೀಸರು ಸಜ್ಜಾಗಿದ್ದಾರೆ.
ಸರ್ಕಾರವೂ ಮೊದಲೇ ಸುವರ್ಣ ಸೌಧದ ಮುಂದೆ ಒಂದು ಕಿಲೋ ಮೀಟರ್ ವ್ಯಾಸದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.

ಈಗಾಗಲೇ ಬೆಳಗಾವಿಯ ಅಥಣಿ ತಾಲ್ಲೂಕಿನ ಹುಲ್ಯಾಳ ಬಳಿ ಐವತ್ತು ವಾಹನಗಳಲ್ಲಿ ಬರುತ್ತಿದ್ದ ರೈತರನ್ನು ತಡೆಹಿಡಿದು ರೈತರನ್ನು ಬಂಧಿಸಿದ್ದು, ಪೊಲೀಸರು ರೈತರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಬಿಗಿ ಪೊಲೀಸ್ ವ್ಯವಸ್ಥೆಗೆ ಒಟ್ಟು 3625 ಪೇದೆಗಳನ್ನು ಸಜ್ಜುಗೊಳಿಸಲಾಗಿದೆ. ಅಲ್ಲದೆ ಸುವರ್ಣ ಸೌಧದ ಸುತ್ತ 150 ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ.
16 ಎಸ್ಪಿ ಮತ್ತು 30 ಡಿವೈಎಸ್ಪಿಗಳು ಕಾದು ಕುಳಿತಿದ್ದಾರೆ.
ರೈತರು ಏನೇ ಪ್ರತಿಭಟಿಸಿದರೂ ಅವರನ್ನು ಬಳಗೆ ಬಿಡಬಾರದು ಎಂಬುದು ಭದ್ರತೆಯ ಉದ್ದೇಶ. ಇನ್ನು ರೈತರು ತಮ್ಮ ಬೇಡಿಕೆ ಈಡೇರಿಕೆಯಾಗದೆ ಯಾವುದೇ ಕಾರಣಕ್ಕೂ ಅಧಿವೇಶನಕ್ಕೆ ಅವಕಾಶ ನೀಡಬಾರದು ಎಂಬುದು ರೈತರ ವಾದವಾಗಿದೆ.












Click it and Unblock the Notifications