ಎರಡು ತಿಂಗಳ ಸಂಬಳವನ್ನು ಸರ್ಕಾರಕ್ಕೆ ನೀಡಲು ಮೇಯರ್‌ ನಿರ್ಧಾರ

ಬೆಂಗಳೂರು, ಜು.6: ರಾಜ್ಯದ ಪ್ರತಿ ರೈತರ ಕುಟುಂಬಗಳಿಗೆ ಎರಡು ಲಕ್ಷದವರೆಗಿನ ಸಾಲಮನ್ನಾ ಮಾಡುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಬೀಳುತ್ತದೆ. ಹಾಗಾಗಿ ಬಿಬಿಎಂಪಿ ಮೇಯರ್‌ ಸಂಪತ್‌ ರಾಜ್ ತನ್ನ ಎರಡು ತಿಂಗಳ ಸಂಭಾವನೆಯನ್ನು ಸರ್ಕಾರಕ್ಕೆ ನೀಡಲು ನಿರ್ಧರಿಸಿದ್ದಾರೆ.

ಹಾಗೆಯೇ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ವಯಕ್ತಿಕವಾಗಿ ಒಂದು ಲಕ್ಷ ರೂ. ಹಣವನ್ನು ಸರ್ಕಾರಕ್ಕೆ ನೀಡಲು ನಿರ್ಧರಿಸಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಬಜೆಟ್‌ ಗುರುವಾರ ಮಂಡನೆಯಾಗಿದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಜೆಟ್‌ ಘೋಷಿಸಿದ್ದಾರೆ.

ಅದರಲ್ಲಿ ಪ್ರತಿ ರೈತರ ಕುಟುಂಬಕ್ಕೆ 2 ಲಕ್ಷದವರೆಗೆ ಸಾಲಮನ್ನಾ ಮಾಡುವುದಾಗಿ ಗೋಷಿಸಿದ್ದಾರೆ.ಆದರೆ ಈ ಸಾಲಮನ್ನಾದಿಂದ ಸರ್ಕಾರಕ್ಕೆ ಹೊರೆಯಾಗಲಿದೆ. ಸಾಲ ಮನ್ನಾಕ್ಕೆ ರಾಜ್ಯ ಬಜೆಟ್‌ನಲ್ಲಿ 34 ಸಾವಿರ ಕೋಟಿ ಮೀಸಲಿಡಲಾಗಿದೆ, ಕುಮಾರಸ್ವಾಮಿ 2,13,734 ಲಕ್ಷ ಕೋಟಿ ಗಾತ್ರದ ಬಜೆಟ್‌ನ್ನು ಮಂಡನೆ ಮಾಡಿದ್ದಾರೆ. ಆದಾಯ ತೆರಿಗೆ ಪಾವತಿ ಮಾಡುವ ರೈತರಿಗೆ ಸಾಲ ಮನ್ನಾ ಇಲ್ಲ ಎಂದು ತಿಳಿಸಿದ್ದಾರೆ.

BBMP mayor likely to give his two month salary to govt

2017ರ ಡಿಸೆಂಬರ್‌ 31ವರೆಗಿನ ಎಲ್ಲಾ ರೈತರ ಸುಸ್ತಿ ಸಾಲ ಮನ್ನಾ ಅದರೊಂದಿಗೆ ಸಾಲ ಮರುಪಾವತಿಸಿದ ರೈತರ ಸಾಲ ಕೂಡ ಮನ್ನವಾಗಲಿದೆ. ಇದರಿಂದ ಸರ್ಕಾರಕ್ಕೆ ಸಾಕಷ್ಟು ಆರ್ಥಿಕ ಹೊರೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+