ಸಿರಿಧಾನ್ಯ ಮಿಷನ್ ಆರಂಭಿಸಲು ಅಸ್ಸಾಂ ಸರ್ಕಾರ ತಯಾರಿ
ದಿಸ್ಪುರ್, ಜೂ. 9: ಮುಂಬರುವ ದಿನಗಳಲ್ಲಿ ಅಸ್ಸಾಂನಲ್ಲಿ ಸಿರಿಧಾನ್ಯ ಮಿಷನ್ ಆರಂಭಕ್ಕೆ ತಯಾರಿ ಮಾಡುವುದಾಗಿ ಕೃಷಿ ಸಚಿವ ಅತುಲ್ ಬೋರಾ ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಕೃಷಿ- ಆರ್ಥಿಕತೆಯನ್ನು ಬಲಪಡಿಸುವ ಗುರಿಯೊಂದಿಗೆ ಫಾರ್ಮಾರ್ಸ್ ಪ್ರಡ್ಯೂಸರ್ಸ್ ಕಂಪನಿಗಳ (ಎಫ್‌ಪಿಸಿ) ಮೊದಲ ರಾಜ್ಯ ಮಟ್ಟದ ಕಾನ್ಕ್ಲೇವ್ ಕಮ್ ಪ್ರದರ್ಶನವನ್ನು ಗುವಾಹಟಿಯಲ್ಲಿ ನಡೆಸಲಾಯಿತು. ಅಸ್ಸಾಂ ಅಗ್ರಿಬಿಸಿನೆಸ್ ಮತ್ತು ರೂರಲ್ ಟ್ರಾನ್ಸ್‌ಫರ್ಮೇಷನ್ ಪ್ರಾಜೆಕ್ಟ್ (ಎಪಿಎಆರ್‌ಟಿ) ಆಯೋಜಿಸಿರುವ ಈ ಸಮಾವೇಶವು ರಾಜ್ಯದ ನೋಂದಾಯಿತ ಎಫ್‌ಪಿಸಿಗಳಿಗೆ ವೇದಿಕೆಯನ್ನು ಕಲ್ಪಿಸುವ ಗುರಿಯನ್ನು ಹೊಂದಿದೆ.
ಈ ವೇಳೆ ಮುಂಬರುವ ದಿನಗಳಲ್ಲಿ ಸಿರಿಧಾನ್ಯ ಮಿಷನ್ ಆರಂಭಿಸಲು ಸರ್ಕಾರ ಯೋಜಿಸುತ್ತಿದೆ. ರೈತರು ಬೆಳೆಗಳ ವೈವಿಧ್ಯೀಕರಣದಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಇದು ಕೃಷಿ ಕ್ಷೇತ್ರಕ್ಕೆ ಹೆಚ್ಚುವರಿ ಉತ್ತೇಜನವಾಗಿದೆ. ಅಸ್ಸಾಂ ಸ್ಥಳೀಯ ಯುವಕರು ಮತ್ತು ರೈತರಿಗೆ ಸಹಾಯ ಮಾಡಲು ಅಸ್ಸಾಂ ಸರ್ಕಾರವು ಹಾಲು ಸಂಸ್ಕರಣಾ ಘಟಕಗಳು ಮತ್ತು ಹಂದಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಉದ್ದೇಶ ಹೊಂದಿದೆ ಎಂದು ಕೃಷಿ ಸಚಿವ ಅತುಲ್ ಬೋರಾ ತಿಳಿಸಿದರು..

ಅಸ್ಸಾಂ ಕೃಷಿ ನಿರ್ದೇಶಕ ಅನಂತ್ ಲಾಲ್ ಗಯಾನಿ ಎಫ್‌ಪಿಸಿ ಉಪಕ್ರಮಗಳ ಬಗ್ಗೆ ಪ್ರಸ್ತಾಪಿಸಿ ಇದು ರೈತ ಸಮುದಾಯಕ್ಕೆ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯದ ನಿರೀಕ್ಷೆಗಳನ್ನುಹೊಂದಿದೆ. ಎಫ್‌ಪಿಸಿ ಕಾರ್ಯಕ್ರಮವು ರೈತರಿಗೆ ದೊಡ್ಡ ಮಾರುಕಟ್ಟೆಗಳಿಗೆ ಪ್ರವೇಶವನ್ನುಒದಗಿಸಿ ರೈತರನ್ನೇ ಮಾಲೀಕರನ್ನಾಗಿಸಿ ವ್ಯಾಪಾರ ನಿರ್ವಹಿಸುವ ಖಾಸಗಿ ಕಂಪನಿಯಂತೆ ಸಿದ್ಧ ಮಾಡುವ ಗುರಿಯನ್ನು ಹೊಂದಿದೆ ಎಂದರು.

ಜಿಲ್ಲಾ ಮಟ್ಟದಲ್ಲಿ 125 ಎಫ್‌ಪಿಸಿಗಳನ್ನು ಬೆಂಬಲಿಸುವ ಗುರಿಯನ್ನು ಎಪಿಎಆರ್‌ಟಿ ಹೊಂದಿದೆ. ಪ್ರತಿ ಎಫ್‌ಪಿಸಿಯು ಸಾಮಾನ್ಯ ಸೇವಾ ಕೇಂದ್ರ ಹಾಗೂ ಕಸ್ಟಮ್ ನೇಮಕಾತಿ ಕೇಂದ್ರಗಳನ್ನು ಹೊಂದಿರಲಿದೆ. ಎಪಿಎಆರ್‌ಟಿಯು ತನ್ನ ಸದಸ್ಯರಿಗೆ ಸಾಮಾರ್ಥ್ಯ ನಿರ್ಮಾಣ ಕಾರ್ಯಕ್ರಮಗಳನ್ನು ನಡೆಸುತ್ತದೆ. ಎಫ್‌ಪಿಸಿ ನಿರ್ವಹಣೆ, ಲೆಕ್ಕಪತ್ರ ನಿರ್ವಹಣೆ, ಕೃಷಿ ಯಂತ್ರೋಪಕರಣಗಳ ಕಾರ್ಯಾಚರಣೆ ಮತ್ತು ನಿರ್ವಹಣೆ, ಸುಧಾರಿತ ಉತ್ಪಾದನಾ ತಂತ್ರಜ್ಞಾನ, ಇಳುವರಿ ನಂತರದ ನಿರ್ವಹಣೆಯ ಬಗ್ಗೆಯೂ ಮಾಹಿತಿ ನೀಡುತ್ತದೆ ಎಂದು ತಿಳಿಸಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications