ರೈತರ ಬದುಕಿಗೆ ಮಾರಕವಾದ ಸೈನಿಕ ಹುಳುಗಳು

ಮೈಸೂರು, ನವೆಂಬರ್, 26 : ಮಳೆಯ ಕೊರತೆ, ಸಾಲಬಾಧೆ ಇನ್ನಿತರ ಕಾರಣಗಳಿಂದ ರೈತರು ಕೃಷಿ ಚಟುವಟಿಕೆಯತ್ತ ಆಸಕ್ತಿ ಕಳೆದುಕೊಳ್ಳುತ್ತಿರುವ ಬೆನ್ನಲ್ಲೇ ಕಷ್ಟಪಟ್ಟು ಬೆಳೆದ ಬೆಳೆಗೆ ಕೆಲವು ದಿನಗಳಿಂದ ಸೈನಿಕ ಹುಳುಗಳು ದಾಳಿ ಮಾಡುತ್ತಿದ್ದು, ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ರೈತರಿಗೆ ಎದುರಾಗಿದೆ.

ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯಲ್ಲಿ ರಾಗಿಯನ್ನು ಬೆಳೆಯಲಾಗುತ್ತಿದೆ. ಆದರೆ ಬೆಳೆ ಈ ಬಾರಿ ರೈತರ ಕೈಹಿಡಿಯುವ ಯಾವುದೇ ಲಕ್ಷಣ ಕಂಡು ಬರುತ್ತಿಲ್ಲ. ಕಾರಣ ರಾಗಿ ಬೆಳೆದ ಜಮೀನುಗಳಲ್ಲಿ ವಿಚಿತ್ರವಾದ ಕೀಟಗಳು ಕಾಣಿಸಿಕೊಂಡು ಬೆಳೆಗಳನ್ನು ತಿಂದು ನಾಶಪಡಿಸುತ್ತಿವೆ. ಇದರಿಂದ ರೈತರು ಸಂಪೂರ್ಣ ಕಂಗಾಲಾಗಿದ್ದಾರೆ.[ಪ್ರಾಣಿಗಳ ಮೂತ್ರ ವಾಸನೆ ಬಂದೆಡೆ ಆನೆಗಳು ಸುಳಿಯುವುದಿಲ್ಲವಂತೆ!]

Army worms attacked in finger millet land in Mysuru

ರಾಗಿ ಬೆಳೆಯ ಮೇಲೆ ದಾಳಿ ಮಾಡುವ ಈ ಸೈನಿಕ ಹುಳುಗಳು ರಾಗಿ ಬೆಳೆಯನ್ನೆಲ್ಲಾ ತಿಂದು ನಾಶಪಡಿಸುತ್ತಿವೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ರಾಗಿ ಹೊಲಗಳು ಒಣಗುತ್ತಿದ್ದು, ಯಾವುದೇ ಗೊಬ್ಬರಗಳಿಂದಲೂ ಹುಳುಗಳನ್ನು ನಾಶಪಡಿಸಲು ಸಾಧ್ಯವಾಗುತ್ತಿಲ್ಲ.

ರಾಗಿ ಹೊಲ ತಿನ್ನುತ್ತಿರುವ ಸೈನಿಕ ಹುಳ :

ಪಿರಿಯಾಪಟ್ಟಣ ತಾಲೂಕಿನ ಮುದ್ದನಹಳ್ಳಿ, ಪಂಚವಳ್ಳಿ, ಉತ್ತೇನಹಳ್ಳಿ, ಮಾಲಂಗಿ, ಲಕ್ಷ್ಮಿಪುರ, ಹಬಟೂರು, ಹುಣಸೇಕುಪ್ಪೆ, ಚೆನ್ನೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹುಳದ ಬಾಧೆ ಕಂಡು ಬಂದಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ.[ಮನುಕುಲಕ್ಕೆ ಮಾರಕ ಮಹಾಮಾರಿ 'ಕಿಸ್ಸಿಂಗ್ ಬಗ್']

Army worms attacked in finger millet land in Mysuru

ರಾಗಿ ಬೆಳೆಯನ್ನು ಬಾಧಿಸುತ್ತಿರುವ ಹುಳುಗಳು 1ಸೆಂ.ಮೀ. ನಿಂದ 3 ಸೆಂ.ಮೀ.ವರೆಗೂ ಉದ್ದವಿದ್ದು ಹಸಿರು, ಕಪ್ಪು ಹಾಗೂ ಹಳದಿ ಬಣ್ಣಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಚಿಗುರು ಪೈರುಗಳನ್ನು ತಿನ್ನುವ ಇವು ಒಂದು ದಿನದಲ್ಲಿ 3 ರಿಂದ 4 ಎಕರೆ ವಿಸ್ತೀರ್ಣವುಳ್ಳ ಹೊಲದಲ್ಲಿ ಬೆಳೆದಿರುವ ರಾಗಿ ಬೆಳೆಯನ್ನು ನಾಶ ಮಾಡುತ್ತವೆ. ಇದರಿಂದ ಬೆಳೆ ಮಾತ್ರವಲ್ಲ ಹುಲ್ಲಿಗೂ ತೊಂದರೆಯಾಗಲಿದೆ.[ಒಣಗುವ ಬೆಳೆಗಳಿಗೆ ಕಾಯಕಲ್ಪ ಕಲ್ಪಿಸಿದ ಕೃಷಿ ಭಾಗ್ಯ]

ಈ ವಿಚಿತ್ರ ಹುಳಗಳಿಗೆ ಕ್ಲೋರೊಫೆರಿಪಾಸ್ ಎಂಬ ಔಷಧಿಯನ್ನು ನೀರಿನಲ್ಲಿ ಮಿಶ್ರಣಮಾಡಿ ಸಿಂಪಡಿಸಿದರೆ ಹತೋಟಿಗೆ ತರಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+