Arecanut And Copra Price: ಮತ್ತೆ 50 ಸಾವಿರ ಗಡಿ ದಾಟಿದ ಅಡಿಕೆ: ಕೊಬ್ಬರ ದರ ಎಷ್ಟಿದೆ ನೋಡಿ
ಕುಸಿತ ಕಾಣುವ ಮೂಲಕ ರೈತರಲ್ಲಿ ಆತಂಕ ಮೂಡಿಸಿದ್ದ ಅಡಿಕೆ ಧಾರಣೆ ಮತ್ತೆ ಏರಿಕೆಯ ಹಾದಿಯಲ್ಲಿದ್ದು ಅಡಿಕೆ ಬೆಳೆಗಾರರು, ಮಾರಾಟಗಾರರಲ್ಲಿ ಸಂತಸ ಮೂಡಿಸಿದೆ. ಶುಕ್ರವಾರ ಯಲ್ಲಾಪುರ, ಶಿರಸಿ, ಚನ್ನಗಿರಿ, ಶಿವಮೊಗ್ಗ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆ ಗರಿಷ್ಠ ದರ 50 ಸಾವಿರದ ಗಡಿ ದಾಟಿದೆ. ಉಳಿದ ಬಹುತೇಕ ಮಾರುಕಟ್ಟೆಗಳಲ್ಲಿ ಕೂಡ ರಾಶಿ ಅಡಿಕೆ ಧಾರಣೆ 50 ಸಾವಿರ ರೂಪಾಯಿ ಸಮೀಪದಲ್ಲಿದೆ.
ಗುರುವಾರ ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಕನಿಷ್ಠ 33000 ರೂಪಾಯಿ ಆಗಿದ್ದರೆ ಗರಿಷ್ಠ ಮಾರಾಟ ದರ 50,431 ರೂಪಾಯಿಗಳಾಗಿತ್ತು. ಶಿರಸಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ 44,508 ರೂಪಾಯಿ ಆಗಿದ್ದರೆ, ಗರಿಷ್ಠ ಧಾರಣೆ 50169 ರೂಪಾಯಿ ಆಗಿತ್ತು.

ಯಲ್ಲಾಪುರ ಮಾರುಕಟ್ಟೆಯಲ್ಲಿ ಶುಕ್ರವಾರ ರಾಶಿ ಅಡಿಕೆ ಧಾರಣೆ ಕನಿಷ್ಠ47689 ರೂಪಾಯಿ ಇದ್ದರೆ ಗರಿಷ್ಠ 54,089 ರೂಪಾಯಿ ಆಗಿತ್ತು. ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಟ 47000 ರೂಪಾಯಿ ಇದ್ದರೆ ಗರಿಷ್ಠ 48800 ರೂಪಾಯಿ ಆಗಿತ್ತು. ತುಮಕೂರು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕ್ವಿಂಟಾಲ್‌ಗೆ ಕನಿಷ್ಠ46,000 ರೂಪಾಯಿ ಗರಿಷ್ಠ 49500 ರೂಪಾಯಿ ಆಗಿತ್ತು.
ಸೆಪ್ಟೆಂಬರ್ 15ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಬಂಟ್ವಾಳ | ಹೊಸ ವೆರೈಟಿ | ₹28,000 | ₹45,000 | ₹42,500 |
| 2 | ಬಂಟ್ವಾಳ | ಹಳೆವೆರೈಟಿ | ₹46,000 | ₹48,500 | ₹47,500 |
| 3 | ಹೊಸನಗರ | ರಾಶಿ | ₹46,699 | ₹49,699 | ₹48,899 |
| 4 | ಕಾರ್ಕಳ | ಹೊಸ ವೆರೈಟಿ | ₹30,000 | ₹45,000 | ₹40,000 |
| 5 | ಕಾರ್ಕಳ | ಹಳೆವೆರೈಟಿ | ₹40,000 | ₹48,500 | ₹45,000 |
| 6 | ಕುಮಟಾ | ಕೋಕಾ | ₹20,169 | ₹33,019 | ₹32,449 |
| 7 | ಕುಮಟಾ | ಫ್ಯಾಕ್ಟರಿ | ₹13,019 | ₹35,699 | ₹23,869 |
| 8 | ಕುಮಟಾ | ಹಳೆಚಾಲಿ | 40,009 | ₹40,829 | ₹40,519 |
| 9 | ಸಿದ್ದಾಪುರ | ಕೆಂಪುಗೋಟು | ₹31,689 | ₹34,189 | ₹33,899 |
| 10 | ಸಿದ್ದಾಪುರ | ಚಾಲಿ | ₹37,609 | ₹40,899 | ₹39,699 |
| 11 | ಸಿದ್ದಾಪುರ | ರಾಶಿ | ₹43,209 | ₹49,009 | ₹48,509 |
| 12 | ಸಿದ್ದಾಪುರ | ಕೋಕಾ | ₹29,019 | ₹35,049 | ₹33,389 |
| 13 | ಶಿರಸಿ | ಕೆಂಪುಗೋಟು | ₹21,679 | ₹35,521 | ₹30,953 |
| 14 | ಶಿರಸಿ | ರಾಶಿ | ₹45,508 | ₹50,169 | ₹48,093 |
| 15 | ತೀರ್ಥಹಳ್ಳಿ | ರಾಶಿ | ₹47,000 | ₹48,800 | ₹48,799 |
| 16 | ತೀರ್ಥಹಳ್ಳಿ | ಸರಕು | ₹64,000 | ₹72,500 | ₹64,879 |
| 17 | ತುಮಕೂರು | ಸರಕು | ₹46,000 | ₹49,500 | ₹48,100 |
| 18 | ಶಿವಮೊಗ್ಗ | ರಾಶಿ | ₹33,000 | ₹50,431 | ₹49,269 |
| 19 | ಯಲ್ಲಾಪುರ | ರಾಶಿ | ₹47,689 | ₹54,089 | ₹50,699 |
| 20 | ಯಲ್ಲಾಪುರ | ತಟ್ಟಿಬೆಟ್ಟೆ | ₹38,109 | ₹45,009 | ₹43,899 |
| 21 | ಯಲ್ಲಾಪುರ | ಕೆಂಪುಗೋಟು | ₹28,011 | ₹34,627 | ₹32,700 |
ಅಲ್ಪ ಕುಸಿತ ಕಂಡ ಕೊಬ್ಬರಿ ಧಾರಣೆ
ಶುಕ್ರವಾರ ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ ಸ್ವಲ್ಪ ಕುಸಿತ ಕಂಡಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿ ಗುರುವಾರ ಕೊಬ್ಬರಿ ಧಾರಣೆ ಕನಿಷ್ಠ 7000 ರೂಪಾಯಿ ಇದ್ದರೆ ಗರಿಷ್ಠ 8000 ರೂಪಾಯಿಗೆ ಮಾರಾಟವಾಗಿದೆ.
ಅರಸೀಕೆರೆ ಮಾರುಕಟ್ಟೆಯಲ್ಲಿ ಶುಕ್ರವಾರ ಕೊಬ್ಬರಿ ಬೆಲೆ ಕನಿಷ್ಠ 7800 ರೂಪಾಯಿ ಇದ್ದರೆ, ಗರಿಷ್ಠ ದರ 8360 ರೂಪಾಯಿ ಆಗಿತ್ತು. ಕೆಆರ್ ಪೇಟೆ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆ 8000 ರೂಪಾಯಿ ಆಗಿತ್ತು.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಅರಸೀಕೆರೆ | ಕೊಬ್ಬರಿ | ₹7,800 | ₹8,360 | ₹8,050 |
| 2 | ಸಿ.ಆರ್. ಪಟ್ಟಣ | ಇತರೆ | ₹3,500 | ₹3,500 | ₹3,500 |
| 3 | ಕೆಆರ್ ಪೇಟೆ | ಇತರೆ | ₹8,000 | ₹8,000 | ₹8,000 |
| 4 | ತಿಪಟೂರು | ಕೊಬ್ಬರಿ | ₹7,000 | ₹8,500 | ₹8,000 |
| 5 | ಕೆಆರ್ ಪೇಟೆ | ಇತರೆ | ₹7,992 | ₹7,992 | ₹7,992 |
| 6 | ಹೊಸನಗರ | ಕೊಬ್ಬರಿ | ₹8,200 | ₹8,400 | ₹8,200 |












Click it and Unblock the Notifications