Arecanut Price: ಏರಿಕೆಯತ್ತ ಅಡಿಕೆ ಧಾರಣೆ; ಕೊಬ್ಬರಿ ಬೆಲೆ ಎಷ್ಟಿದೆ?
2024ರಲ್ಲಿ ಸಾಕಷ್ಟು ಏಳು ಬೀಳು ಕಂಡಿದ್ದ ಅಡಿಕೆ ಬೆಲೆ ಈಗ ಚೇತರಿಸಿಕೊಳ್ಳುತ್ತಿದ್ದು ನಿಧಾನವಾಗಿಯಾದರೂ ಏರಿಕೆಯಾಗುತ್ತಿದೆ. ವಿವಿಧ ರೋಗಬಾಧೆಗಳು ಅಡಿಕೆಯನ್ನು ಬಾಧಿಸುತ್ತಿದ್ದು ಇಳುವರಿ ಮೇಲೆ ಭಾರಿ ಪರಿಣಾಮ ಬೀರಿದೆ. ಇದರ ನಡುವೆ ಬೆಲೆ ಕುಸಿತ ರೈತರನ್ನು ನಷ್ಟದ ಭೀತಿಗೆ ಸಿಲುಕಿಸಿತ್ತು, ಈಗ ಅಡಿಕೆ ಧಾರಣೆ ಚೇತರಿಕೆ ಕಾಣುತ್ತಿದ್ದು ಬೆಳೆಗಾರರು ನಿರಾಳವಾಗಿದ್ದಾರೆ.
ರಾಶಿ ಅಡಿಕೆ ಧಾರಣೆ ಮತ್ತೆ 50 ಸಾವಿರ ರೂಪಾಯಿ ಗಡಿ ದಾಟಿದ್ದು ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಗುರುವಾರ ಕೊಪ್ಪ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕ್ವಿಂಟಾಲ್‌ಗೆ 50 ಸಾವಿರ ರೂಪಾಯಿಗಿಂತ ಹೆಚ್ಚಿನ ಬೆಲೆಗೆ ಹರಾಜಾಗಿದೆ.

ಶಿವಮೊಗ್ಗದಲ್ಲಿ ಕೂಡ ರಾಶಿ ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಕನಿಷ್ಠ 30,369 ರೂಪಾಯಿ ಇದ್ದರೆ ಗರಿಷ್ಠ 52,259 ರೂಪಾಯಿ ಆಗಿತ್ತು. ಸರಕು ಅಡಿಕೆ ಬೆಲೆ ಕ್ವಿಂಟಾಲ್‌ಗೆ ಕನಿಷ್ಠ 45,029 ರೂಪಾಯಿ ಇದ್ದರೆ ಗರಿಷ್ಠ 86,630 ರೂಪಾಯಿ ಆಗಿತ್ತು. ಅಡಿಕೆ ಬೆಲೆ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಣೆಯಾಗುವ ವಿಶ್ವಾಸವಿದೆ.
ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದ್ದು, ಅಡಿಕೆ ರೋಗಗಳ ಬಗ್ಗೆ ಅಧ್ಯಯನ ಮಾಡಲು ಅನುದಾನ ನೀಡುತ್ತದೆ ಎಂದು ಕಾಯುತ್ತಿದ್ದಾರೆ.
ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ಸಿದ್ದಾಪುರ | ಕೋಕಾ | ₹14,239 | ₹22,309 | ₹15,489 |
| 2 | ಸಿದ್ದಾಪುರ | ಕೆಂಪು ಗೋಟು | ₹19,109 | ₹24,909 | ₹21,819 |
| 3 | ಸಿದ್ದಾಪುರ | ಬಿಳೆ ಗೊಟು | ₹22,489 | ₹24,199 | ₹23,199 |
| 4 | ಕೊಪ್ಪ | ರಾಶಿ | ₹50,200 | ₹50,800 | ₹50,700 |
| 5 | ಚನ್ನಗಿರಿ | ರಾಶಿ | ₹45,000 | ₹52,100 | ₹49,347 |
| 6 | ಕುಮಟಾ | ಚಿಪ್ಪು | ₹12,111 | ₹27,669 | ₹24,899 |
| 7 | ಶಿರಸಿ | ಬಿಳೆ ಗೊಟು | ₹15,199 | ₹30,519 | ₹21,858 |
| 8 | ಶಿರಸಿ | ಚಾಲಿ | ₹36,099 | ₹40,309 | ₹38,016 |
| 9 | ಶಿರಸಿ | ರಾಶಿ | ₹42,609 | ₹46,618 | ₹44,021 |
| 10 | ಬಂಟ್ವಾಳ | ಹೊಸ ವೆರೈಟಿ | ₹30,000 | ₹36,000 | ₹35,000 |
| 11 | ಬಂಟ್ವಾಳ | ಕೋಕಾ | ₹20,000 | ₹27,500 | ₹26,000 |
| 12 | ದಾವಣಗೆರೆ | ಗೊರಬಲು | ₹19,600 | ₹19,600 | ₹19,600 |
| 13 | ಶಿವಮೊಗ್ಗ | ಬೆಟ್ಟೆ | ₹45,109 | ₹55,700 | ₹54,099 |
| 14 | ಶಿವಮೊಗ್ಗ | ರಾಶಿ | ₹30,369 | ₹52,259 | ₹49,589 |
| 15 | ಶಿವಮೊಗ್ಗ | ಸರಕು | ₹45,029 | ₹86,630 | ₹64,040 |
| 16 | ಕಾರ್ಕಳ | ಹೊಸ ವೆರೈಟಿ | ₹25,000 | ₹36,500 | ₹30,000 |
| 17 | ಕೆ ಆರ್ ಪೇಟೆ | ಸಿಪ್ಪೆಗೋಟು | ₹10,000 | ₹11,500 | ₹10,422 |
| 18 | ಸಾಗರ | ಸಿಪ್ಪೆಗೋಟು | ₹10,599 | ₹17,199 | ₹16,865 |
| 19 | ಸಾಗರ | ಬಿಳೆ ಗೊಟು | ₹7,099 | ₹25,899 | ₹22,169 |
| 20 | ಯಲ್ಲಾಪುರ | ಕೆಂಪು ಗೋಟು | ₹12,009 | ₹28,661 | ₹22,969 |
| 21 | ಯಲ್ಲಾಪುರ | ತಟ್ಟಿ ಬೆಟ್ಟೆ | ₹29,090 | ₹38,799 | ₹35,299 |
ಕೊಬ್ಬರಿ ಧಾರಣೆ ಹೇಗಿದೆ?
2024ರಲ್ಲಿ ದಾಖಲೆಯ ಬೆಲೆಗೆ ಮಾರಾಟವಾಗಿದ್ದ ಕೊಬ್ಬರಿ ಬಳಿಕ ಅಲ್ಪ ಕುಸಿತ ಕಂಡಿತ್ತು. ಈಗ 12,000 ದಿಂದ 14,000 ರೂಪಾಯಿವರೆಗೆ ಮಾರಾಟವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ತೆಂಗು ಬೆಳೆಗಾರರು.
ಗುರುವಾರ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ ಕನಿಷ್ಠ 13,600 ರೂಪಾಯಿ ಇದ್ದರೆ ಗರಿಷ್ಠ 14,300 ರೂಪಾಯಿ ಆಗಿತ್ತು. ಅರಸೀಕೆರೆ ಮಾರುಕಟ್ಟೆಯಲ್ಲಿ ಗರಿಷ್ಠ 13,800 ರೂಪಾಯಿಗೆ ಮಾರಾಟವಾಗಿದೆ.
ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ (ಕ್ವಿಂಟಾಲ್‌ಗೆ)
| ಕ್ರಮ ಸಂಖ್ಯೆ | ಮಾರುಕಟ್ಟೆ | ವಿಧ | ಕನಿಷ್ಠ ಬೆಲೆ | ಗರಿಷ್ಠ ಬೆಲೆ | ಸರಾಸರಿ ಬೆಲೆ |
| 1 | ತಿಪಟೂರು | ಕೊಬ್ಬರಿ | ₹13,600 | ₹14,300 | ₹14,000 |
| 2 | ಅರಸೀಕೆರೆ | ಕೊಬ್ಬರಿ | ₹13,800 | ₹13,800 | ₹13,800 |
| 3 | ತುರುವೇಕೆರೆ | ಬೇರೆ | ₹11,000 | ₹13,000 | ₹11,500 |
-
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Arecanut Price: ಶಿವಮೊಗ್ಗ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ?: ಇಲ್ಲಿದೆ ಮಾರ್ಚ್ 13ರ ದರಪಟ್ಟಿ -
ರಾಜ್ಯದಲ್ಲಿ 4,824 ಕೋಟಿ ರೂ. ಕೈಗಾರಿಕಾ ಹೂಡಿಕೆಗೆ ಸರ್ಕಾರ ಅಸ್ತು; 14,525 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ -
ಮಾರ್ಚ್ 13ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ












Click it and Unblock the Notifications