ಗೋಹತ್ಯೆ ನಿಷೇಧ ಏಕೆ? ಜ್ಞಾನಪೀಠಿಗಳ ಪ್ರಶ್ನೆ

ಜಾನುವಾರು ಹತ್ಯೆ ನಿಷೇಧ ಕಾಯಿದೆ ವಿರೋಧಿ ಜನಾಂದೋಲನ ಸಂಘಟನೆಯು ಆಯೋಜಿಸಿದ್ದ ವಿಚಾರಣ ಸಂಕಿರಣದಲ್ಲಿ ಮಾತನಾಡುತ್ತಿದ್ದ ಕಾರ್ನಾಡ್, ಪ್ರಜಾತಂತ್ರ ವ್ಯಸ್ಥೆಯಲ್ಲಿ ಇಂಥ ಆಹಾರವನ್ನೇ ಸೇವಿಸಬೇಕು ಇಂಥದ್ದನ್ನು ತಿನ್ನಬಾರದೆಂದು ಕಾನೂನು ರೂಪಿಸಲು ಸರಕಾರಕ್ಕೆ ಅಧಿಕಾರವಿಲ್ಲ, ಇದು ರೈತ ವಿರೋಧಿ ಧೋರಣೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಗೋಹತ್ಯೆ, ಸಾಗಾಣೆ ಮಾಡಿದರೆ ಅಪರಾಧ. ಮನೆಯಲ್ಲಿ ಗೋಮಾಂಸ ಇರುವುದೂ ಅಪರಾಧ. ಹೀಗೆ ಈ ಕಾಯಿದೆ ಜಾರಿಗೆ ಬಂದರೆ, ಊರು ತುಂಬಾ ಅಪರಾಧಿಗಳು ಸೃಷ್ಟಿ ಯಾಗುತ್ತಾರೆ.
ಒಟ್ಟಿನಲ್ಲಿ ಅಪರಾಧಿಗಳನ್ನು ಸೃಷ್ಟಿ ಮಾಡುವ ಕಾನೂನು ನಮಗೆ ಬೇಕೇ ಎಂದು ಗಿರೀಶ್ ಕಾರ್ನಾಡ್ ಸರಕಾರವನ್ನು ಪ್ರಶ್ನಿಸಿದ್ದಾರೆ. ಗೋಹತ್ಯೆ ಕಾಯಿದೆ ವಿರೋಧಿಸಿ ಶಿವಾಜಿನಗರದ ಮೈದಾನದಲ್ಲಿ ಜೂ.28 ರಂದು ಜನಾಂದೋಲನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಮತ್ತು ಸಾಹಿತಿ ಡಾ. ಯು ಆರ್ ಅನಂತಮೂರ್ತಿ ಈ ಸಮಾವೇಶವನ್ನು ಉದ್ಘಾಟಿಸಲಿದ್ದಾರೆಂದು ಸಂಘಟನೆಯ ಕಾರ್ಯದರ್ಶಿ ಹೇಳಿಕೆ ನೀಡಿದ್ದಾರೆ.












Click it and Unblock the Notifications