ಕೃಷಿ ಮೂಲಸೌಕರ್ಯಕ್ಕಾಗಿ ಎಐಎಫ್‌ನಿಂದ ₹ 30,000 ಕೋಟಿ ಕ್ರೂಢೀಕರಣ
ನವದೆಹಲಿ, ಜನವರಿ 23: ಕೃಷಿ ಮೂಲಸೌಕರ್ಯ ನಿಧಿ (AIF)ಯು ಆರಂಭವಾಗಿ ಎರಡೂವರೆ ವರ್ಷದಲ್ಲಿ ಕೃಷಿ ಮೂಲಸೌಕರ್ಯ ವಲಯದಲ್ಲಿನ ಯೋಜನೆಗಳ ಬಳಕೆಗೆಂದು ಸರಿಸುಮಾರು ರೂ.30,000 ಕೋಟಿಗೂ ಹೆಚ್ಚು ಹಣವನ್ನು ಸಂಗ್ರಹಿಸಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ತಿಳಿಸಿದೆ.
ಕೃಷಿಯಲ್ಲಿ ಸುಗ್ಗಿಯ ನಂತರ ನಿರ್ವಹಣಾ ಸೌಲಭ್ಯಗಳ ರಚನೆಗಾಗಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸುಲಭವಾಗಲೆಂದು ಈ ಅತ್ಯಂತ ಕಡಿಮೆ ಅವಧಿಯಲ್ಲಿ ಕೃಷಿ ಮೂಲಸೌಕರ್ಯ ನಿಧಿ (AIF)ಯನ್ನು 2020ರಲ್ಲಿ ಸ್ಥಾಪನೆ ಮಾಡಲಾಗಿದೆ. ಅಲ್ಲಿಂದ ಈ ವರೆಗೆ ಒಟ್ಟು 30,000 ಕೋಟಿ ರೂ. ಅಧಿಕ ಮೊತ್ತವನ್ನು ಕ್ರೋಢೀಕರಿಸಿದೆ. ಒಟ್ಟು ಈವರೆಗೆ ಈ ಯೋಜನೆಯಡಿ 15,000 ಕೋಟಿ ರೂಪಾಯಿ ಹಣ ನಿರ್ವಹಣೆಗೆಂದು ಮಂಜೂರಾಗಿದೆ ಎಂದು ಮಂಜೂರು ಮಾಡಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಈ ಎಐಎಫ್ ರೈತ ಉತ್ಪಾದಕ ಸಂಸ್ಥೆಗಳು, ರೈತರು, ಕೃಷಿ ಉದ್ಯಮಿಗಳು, ಸ್ವಸಹಾಯ ಗುಂಪುಗಳು ಮತ್ತು ಜಂಟಿ ಹೊಣೆಗಾರಿಕೆ ಸೇರಿದಂತೆ ಇನ್ನಿತರ ರೈತ ಗುಂಪುಗಳಿಗೆ ಸುಗ್ಗಿ ಕೊಯ್ಲಿನ ನಂತರದ ಅಗತ್ಯವಾದ ನಿರ್ವಹಣೆಯ ಮೂಲಸೌಕರ್ಯ ಒದಗಿಸುತ್ತದೆ. ಸಮುದಾಯ ಕೃಷಿ ಆಸ್ತಿ ನಿರ್ವಹಣೆಗೆ ಆರ್ಥಿಕ ನೆರವು ಒದಗಿಸುತ್ತದೆ. ಇದರಿಂದ ದೇಶದಲ್ಲಿ ಕೃಷಿ ವಲಯ ನಂಬಿರುವವರಿಗೆ ಸಾಕಷ್ಟು ಅನುಕೂಲವಾಗಲಿದೆ.

ಕೃಷಿಕರಿಗೆ ಹೆಚ್ಚು ಉಪಯುಕ್ತವಾಗಿರುವ ಕೃಷಿ ಮೂಲಸೌಕರ್ಯ ನಿಧಿ (AIF) ಕುರಿತು ಜಾಗೃತಿ ಮೂಡಿಸಲು ಕೇಂದ್ರ ಕೃಷಿ ಸಚಿವಾಲಯ ವಿವಿಧ ಸ್ಟೇಕ್‌ಹೋಲ್ಡರ್ ಜೊತೆಗೆ ಸೇರಿ ಅನೇಕ ಸಭೆ, ಸಮಾರಂಭ ಹಾಗೂ ಕಾರ್ಯಾಗಾರ ನಡೆಸುತ್ತಿದೆ.
ಶೇಕಡಾ 3ರಷ್ಟು ಬಡ್ಡಿ ಸಬ್ವೆನ್ಷನ್ ಮತ್ತು ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಫಾರ್ ಮೈಕ್ರೋ ಮತ್ತು ಸ್ಮಾಲ್ ಎಂಟರ್‌ಪ್ರೈಸಸ್ (CGTMSE) ನಡಿ 2 ಕೋಟಿ ರೂಪಾಯಿ ವರೆಗಿನ ಸಾಲ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ಇತರ ಯೋಜನೆಗಳ ಜೊತೆಗೆ ವಿವಿಧ ಸೌಲಭ್ಯಗಳ ಒದಗಿಸಲು ಈ ನಿಧಿ ಹಣಕಾಸಿನ ಬೆಂಬಲ ನೀಡಲಿದೆ.

ಸಚಿವಾಲಯದ ನೀಡಿದ ಅಂಕಿ ಅಂಶಗಳ ಪ್ರಕಾರ, ಈ ನಿಧಿ ಯೋಜನೆಯಡಿ 20,000 ಕ್ಕೂ ಹೆಚ್ಚು ಫಲಾನುಭವಿಗಳು ಇದರ ಲಾಭ ಪಡೆಯಲಿದ್ದಾರೆ ಎನ್ನಲಾಗಿದೆ.












Click it and Unblock the Notifications