ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷಿ ಇಲಾಖೆಗೆ ಕೃಷಿ ವಿಶ್ವವಿದ್ಯಾಲಯ ತಾಯಿ ಇದ್ದಂತೆ: ಬಿಸಿ ಪಾಟೀಲ್

|
Google Oneindia Kannada News

ಬೆಂಗಳೂರು, ಮೇ 14: ಕೃಷಿ ವಿಶ್ವ ವಿದ್ಯಾಲಯಗಳು ಕೃಷಿ ಇಲಾಖೆಗೆ ತಾಯಿ ಇದ್ದಂತೆ ಎಂದು ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಸಚಿವರಾದ ಬಳಿಕ ಮೊದಲ ಕೃಷಿ ವಿಶ್ವವಿದ್ಯಾಲಯಗಳ ಸಮನ್ವಯ ಸಮಿತಿ ಸಭೆ ನಡೆಸಿ ಅವರು ಮಾತನಾಡಿದರು.

ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ ಬಹಳ ಹತ್ತಿರವಾಗಬೇಕು. ಕೃಷಿ ಇಲಾಖೆಗೆ ವಿಶ್ವವಿದ್ಯಾಲಯಗಳು ಮಾರ್ಗದರ್ಶಿಯಾಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಇನ್ನುಮುಂದೆ ಪ್ರತಿತಿಂಗಳಿಗೊಮ್ಮೆ ಸಮನ್ವಯ ಸಮಿತಿ ಸಭೆ ನಡೆಸಲಾಗುವುದು. ಮೇಲಿಂದ ಮೇಲೆ ಸಭೆಗಳನ್ನು ನಡೆಸುವುದರಿಂದ ವಿಷಯಗಳ ಮಾಹಿತಿಯ ವಿನಿಮಯ ಕೆಲಸದ ಪ್ರಗತಿ ಬಗ್ಗೆ ಅರಿಯಲು ಹಾಗೂ ರೈತರಿಗಾಗಿ ಇನ್ನಷ್ಟು ದುಡಿಯಲು ಸಾಧ್ಯವಾಗುತ್ತದೆ ಎಂದರು.

ಕೋಲಾರಕ್ಕೂ ಬಂದ ಮಿಡತೆ ಸೈನ್ಯ: ರೈತರಲ್ಲಿ ಆತಂಕಕೋಲಾರಕ್ಕೂ ಬಂದ ಮಿಡತೆ ಸೈನ್ಯ: ರೈತರಲ್ಲಿ ಆತಂಕ

ಸಭೆಯಲ್ಲಿ ರಾಜ್ಯದ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ ಸೇರಿದಂತೆ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಭೆಯ ತೀರ್ಮಾನಗಳು ಕಾರ್ಯರೂಪಕ್ಕೆ ಬರಬೇಕು

ಸಭೆಯ ತೀರ್ಮಾನಗಳು ಕಾರ್ಯರೂಪಕ್ಕೆ ಬರಬೇಕು

ಸಭೆಗಳು ಹಾಗೂ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳು ಸೂಚನೆಗಳು ಬರೀ ಕಡತದಲ್ಲಿ ಕಿರುಪುಸ್ತಕದಲ್ಲಷ್ಟೇ ಉಳಿಯದೇ ಕಾರ್ಯರೂಪಕ್ಕೆ ಬರಬೇಕು. ಟಿಎ ಡಿಎ ಸಮಯವ್ಯರ್ಥಕ್ಕಾಗಿ ಸಭೆಗಳನ್ನು ಮಾಡದೇ ರೈತರಿಗೆ ಅನುಕೂಲ ಕಲ್ಪಿಸಲು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಕೃಷಿಯತ್ತ ಹೊಸ ಕಲಿಕೆಗೆ ಅವಕಾಶ ಮಾಡಿಕೊಡುವಲ್ಲಿ ಉಪಯೋಗವಾಗಬೇಕು.

ಹೊಸ ಸಂಶೋಧನೆಗಳು ಹೊರಬರಬೇಕು

ಹೊಸ ಸಂಶೋಧನೆಗಳು ಹೊರಬರಬೇಕು

ವಿಶ್ವವಿದ್ಯಾಲಯಗಳಲ್ಲಿ ಹೊಸತನ್ನು ಕಲಿಯಲು ಮತ್ತು ಕಲಿಸಲು ರೈತರಿಗೆ ಎಲ್ಲಾ ರೀತಿಯಲ್ಲಿ ಅನುಕೂಲ ಕಲ್ಪಿಸುವಂತಹ ಹೊಸಸಂಶೋಧನೆಗಳು, ತಳಿಗಳನ್ನು ಕಂಡುಹಿಡಿಯಬೇಕು ಎಂದು ಸಭೆಯಲ್ಲಿ ಸಚಿವರು ನಿರ್ದೇಶಿಸಿದರು.

ಯಾವ ಕಾಯಿಲೆಗಳಿಗೆ ಯಾವ ಮದ್ದು

ಯಾವ ಕಾಯಿಲೆಗಳಿಗೆ ಯಾವ ಮದ್ದು

"ಯಾವ ಕಾಯಿಲೆಗೆ ಯಾವ ಮದ್ದು" ಎನ್ನುವುದು ವೈದ್ಯರಿಗೆ ಹೇಗೆ ತಿಳಿದಿರುತ್ತದೆಯೋ ಅದೇ ರೀತಿ ರೈತರ ಬೆಳೆಯ ಸಮಸ್ಯೆ ಗಳಿಗೆ ಕೃಷಿವಿಶ್ವವಿದ್ಯಾಲಯಗಳು ಪರಿಹಾರ ಸೂಚಿಸಬೇಕು. ಪ್ರತಿಯೊಬ್ಬ ಪ್ರೊಫೇಸರ್ ನ್ನು ಫೀಲ್ಡ್ ಗೆ ಕಳುಹಿಸಬೇಕು. ಹಿಂದಿನ ಕಾಲದ ಬೇಸಾಯದ ಪದ್ಧತಿಗೂ ಈಗಿನ ಪದ್ಧತಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಕಾಲಕ್ಕೆ ತಕ್ಕ ಬೆಳೆ ತಂತ್ರಜ್ಞಾನದ ಬಳಕೆ ಸಂಶೋಧನೆ ಬಗ್ಗೆ ವಿದ್ಯಾರ್ಥಿಗಳಿಗೆ ರೈತರಿಗೆ ನೇರವಾಗಿ ಮಾಹಿತಿ ಹೋಗುವಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳನ್ನು ಪ್ರೊಫೆಸರ್ ಗಳನ್ನು ಹೊಸಹೊಸ ಸಂಶೋಧನೆ ತಳಿಗಳು ವಿಶ್ವವಿದ್ಯಾಲಯದ ಸಾಧನೆಗಳನ್ನು ಪ್ರಚುರಪಡಿಸಲು ಸಹಕರಿಸುವಂತೆ ನೋಡಿಕೊಳ್ಳಬೇಕು ಎಂದು ಕೃಷಿ ಸಚಿವರು ಸಭೆಯಲ್ಲಿ ತಿಳಿಸಿದರು

ಹೊಸ ತಳಿಗಳ ಸಂಶೋಧನೆ ನಡೆಯಬೇಕು

ಹೊಸ ತಳಿಗಳ ಸಂಶೋಧನೆ ನಡೆಯಬೇಕು

ವಿಶ್ವವಿದ್ಯಾಲಯಗಳಲ್ಲಿ ಹೊಸಹೊಸ ತಳಿಗಳ ಸಂಶೋಧನೆ ಹೆಚ್ಚೆಚ್ಚು ನಡೆಯಬೇಕು. ವಿಶ್ವವಿದ್ಯಾಲಯಗಳ ಸಾಧನೆ ಸಂಶೋಧನೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚುರಪಡಿಸಬೇಕು. ಸಭೆಗೆ ಯಾವುದೇ ಅಧಿಕಾರಿಗಳಾಗಲೀ ಕುಲಪತಿ ನಿರ್ದೇಶಕರಾಗಲೀ ಯಾರೇ ಆಗಲೀ ಪೂರ್ವಮಾಹಿತಿ ದಾಖಲೆಯಿಲ್ಲದೇ ಬರಬಾರದು. ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ಇಲಾಖೆ ನಡುವೆ ಎಂದಿಗೂ ಸಮನ್ವಯದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ರೈತರ ಜೊತೆ ಸಂವಾದ ಮಾಡುವ ಮೂಲಕ ರೈತರ ಸಮಸ್ಯೆಗಳನ್ನು ಹತ್ತಿರದಿಂದ ಅರಿತು ಅವುಗಳ ಪರಿಹಾರಕ್ಕೆ ಕ್ರಮವಹಿಸಬೇಕು ಎಂದು ಬಿ.ಸಿ.ಪಾಟೀಲ್ ಸೂಚಿಸಿದರು.

English summary
Minister BC Patil said that Krishi Vidyalayas(Agricultural Universities) are like a mother to the Department of Agriculture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X