Agricultural Machinery Fair: ಫೆ.10ರಿಂದ 'ಬೃಹತ್ ಕೃಷಿ ಯಂತ್ರೋಪಕರಣ ಮೇಳ', ಎಲ್ಲಿ?, ವಿಶೇಷತೆ ತಿಳಿಯಿರಿ
ರಾಜ್ಯದ ವಿವಿಧ ಯಂತ್ರೋಕರಣ ಕಂಪನಿಗಳು ರೈತರಿಗೆ ಅಗತ್ಯವಾದ ಕೃಷಿ ಸಂಬಂಧಿ ಯಂತ್ರೋಪಕರಣಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಇದೇ ತಿಂಗಳು ಮೂರು ದಿನ 'ಐದನೇ ಬೃಹತ್ ಕೃಷಿ ಯಂತ್ರೋಪಕರಣ ಮೇಳ' ಹಮ್ಮಿಕೊಂಡಿದೆ.
ದಕ್ಷಿಣ ಕನ್ನಡ, ಫೆಬ್ರುವರಿ 02: ರಾಜ್ಯದ ವಿವಿಧ ಯಂತ್ರೋಕರಣ ಕಂಪನಿಗಳು ರೈತರಿಗೆ ಅಗತ್ಯವಾದ ಕೃಷಿ ಸಂಬಂಧಿ ಯಂತ್ರೋಪಕರಣಗಳನ್ನು ಪರಿಚಿಸುವ ನಿಟ್ಟಿನಲ್ಲಿ ಇದೇ ತಿಂಗಳು ಮೂರು ದಿನ 'ಐದನೇ ಬೃಹತ್ ಕೃಷಿ ಯಂತ್ರೋಪಕರಣ ಮೇಳ' ಹಮ್ಮಿಕೊಂಡಿದೆ.
ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಆವರಣದಲ್ಲಿ ಇದೇ ಫೆಬ್ರುವರಿ 10 ರಿಂದ 12ರವರೆಗೆ ಮೂರು ದಿನ 'ಕೃಷಿ ಯಂತ್ರೋಪಕರಣ ಮೇಳ' ಆಯೋಜಿಸಲಾಗಿದೆ. ಈ ಮೇಳವು ಕ್ಯಾಂಪ್ಕೊ ನಿಯಮಿ, ಮಂಗಳೂರು, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ARDF) ಮತ್ತು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ಪುತ್ತೂರು ಇವರ ಸಹಯೋಗದಲ್ಲಿ ಮೇಳ ನಡೆಯಲಿದೆ.
ಪ್ರತಿ ನಿತ್ಯ ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆ ತನಕ ಮೇಳಕ್ಕೆ ರೈತರು ಭೇಟಿ ನೀಡಬಹುದು. ದೇಶದ ಬಹುತೇಕ ಜನರ ಅವಲಂಬಿತ ಕ್ಷೇತ್ರವಾದ ಕೃಷಿಯಲ್ಲಿ ದಿನದಿಂದ ದಿನಕ್ಕೆ ಕೃಷಿ ಯಂತ್ರೋಪಕರಣ ಬಳಕೆ ಹೆಚ್ಚಾಗುತ್ತಿದೆ. ಅದರ ಲಭ್ಯತೆಯು ಹೆಚ್ಚಾಗಬೇಕು. ಎಲ್ಲ ಭಾಗದ ರೈತರಿಗೂ ಕೃಷಿ ಯಂತ್ರಗಳು ಸಿಗುವಂತಾಗಲು ಈ ಮೇಳ ಹಮ್ಮಿಕೊಳ್ಳಲಾಗಿದೆ.

ವಿಚಾರ ಗೋಷ್ಠಿಗಳು
ಮೇಳದಲ್ಲಿ ಕನಸಿನ ಮನೆ ಕುರಿತಾದ ಮಾದರಿ ಪ್ರದರ್ಶನ. ಕಟ್ಟಡ ನಿರ್ಮಾಣ ಹಂತದ ತಾಂತ್ರಿಕತೆಯನ್ನು ಜನರಿಗೆ ತಲುಪಿಸಲಾಗುವುದು. ಕಟ್ಟಡ ನಿರ್ಮಾಣದಲ್ಲಿನ ಹೊಸ ತಂತ್ರಜ್ಞಾನ ಮತ್ತು ಸವಲತ್ತುಗಳ ಬಗ್ಗೆ ಅರಿವು ಮೂಡಿಸಲಾಗುವುದು. ಅಲ್ಲದೇ ಅಡಿಕೆ ಹಾಗೂ ಇನ್ನಿತರ ತೋಟಗಾರಿಕೆ ಬೆಳೆಗಳು, ಅಂತರ ಬೆಳೆಯಾಗಿ ಔಷಧಿ ಸಸ್ಯಗಳು, ಅಡಿಕೆ ಬೆಳೆ ನಿರ್ವಹಣೆ, ರೋಗಗಳ ನಿಯಂತ್ರಣಕ್ಕೆ ಯಂತ್ರಗಳ ಆವಿಷ್ಕಾರ ಮುಖ್ಯವಾಗಿ ಸುಸ್ಥಿರ ಕೃಷಿಗೆ ಪರಿಹಾರ ಕುರಿತು ವಿಚಾರ ಗೋಷ್ಠಿಗಳು ನಡೆಯಲಿವೆ.
ಮೇಳದ ವಿಶೇಷತೆಗಳು
- ಅಡಿಕೆ ಕೊಯ್ಲು ಮತ್ತು ಔಷಧಿ ಸಿಂಪಡಣೆ ಯೋಗ್ಯ ಕಾರ್ಬನ್ ಪೈಬರ್ ದೋಟಿಯ ಪ್ರಾತ್ಯಕ್ಷಿಕೆ
- ಬ್ಯಾಟರಿ ಚಾಲಿತ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ
- ಡ್ರೋನ್ ತಂತ್ರಜ್ಞಾನ ಔಷಧಿ ಸಿಂಪಡೆಯ ಪ್ರಾತ್ಯಕ್ಷಿಕೆ

- ಜಲಕೃಷಿ ವಿಧಾನ ಸಮಗ್ರ ಪರಿಚಯ
- ಕೃಷಿಯಲ್ಲಿ ಸಾವಯವ ಗೊಬ್ಬರ ಬಳಕೆ ಕುರಿತು ಮಾಹಿತಿ ನೀಡುವುದು.
- ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಹೇಗೆ ಎಂಬ ಪೂರ್ಣ ವಿವರ ನೀಡುವುದು.
- ಸಾವಯವ ಕೃಷಿ ಉತ್ಪನ್ನಗಳ ಮಳಿಗೆಗಳು.
- ಹೊಸದಾಗಿ ಆವಿಷ್ಕಾರಗೊಂಡ ಹೈನುಗಾರಿಕೆ ತಂತ್ರಜ್ಞಾನ ಮತ್ತು ಪರಿಕರಗಳ ಪ್ರದರ್ಶನ ಇರಲಿದೆ.












Click it and Unblock the Notifications