GKVK ಕ್ಯಾಂಪಸ್ಸಿನಲ್ಲಿ ರಾಷ್ಟ್ರೀಯ ಕೃಷಿ ಯುವ ಉತ್ಸವ

ಐದು ದಿನಗಳ ಕಾಲ ನಡೆಯುವ ಈ ರಾಷ್ಟ್ರೀಯ ಅಂತರ ವಿವಿ ಯುವ ಉತ್ಸವ ಸಹಜವಾಗಿಯೇ ಕೃಷಿ ವಿಷಯವನ್ನು ಉತ್ಸವದ ಪ್ರಧಾನ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದೆ.
14ನೇ All India Inter-Agricultural Universities Youth Festival ಉತ್ಸವವನ್ನು ಬೆಂಗಳೂರು ಕೃಷಿ ವಿಜ್ಞಾನ ವಿದ್ಯಾಲಯವು ಭಾರತೀಯ ಕೃಷಿ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯಗಳ ಇತಿಹಾಸದಲ್ಲಿ ಇದು ಅತ್ಯಂತ ದೊಡ್ಡ ಉತ್ಸವವಾಗಲಿದೆ ಎಂದು UAS ವೈಸ್ ಚಾನ್ಸಲರ್ ಕೆ ನಾರಾಯಣ ಗೌಡ ಅವರು ತಿಳಿಸಿದ್ದಾರೆ.
ಈ ರಾಷ್ಟ್ರೀಯ ಕೃಷಿ ಯುವ ಉತ್ಸವದಲ್ಲಿ 18 ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. GKVK campus ನಲ್ಲಿ 5 ಸ್ಥಳಗಳಲ್ಲಿ ಉತ್ಸವವನ್ನು ಆಯೋಜಿಸಲಾಗಿದೆ. ಸುಮಾರು 2,000 ಯುವಕರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಉತ್ಸವದ ಸಂಘಟನಾ ಕಾರ್ಯದರ್ಶಿ ಕೆಆರ್ ಶ್ರೀರಾಮುಲು ತಿಳಿಸಿದ್ದಾರೆ.
UAS GKVK campus ನಲ್ಲಿ ನಡೆಯುವ 5 ದಿನಗಳ ಈ ರಾಷ್ಟ್ರೀಯ ಉತ್ಸವದಲ್ಲಿ ಸಾರ್ವಜನಿಕರು ಸಹ ಪಾಲ್ಗೊಳ್ಳಬಹುದು. ಪ್ರತಿ ದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 10.30ರವರೆಗೂ ವಿವಿಧ ಉತ್ಸವಗಳು ನಡೆಯಲಿವೆ.
ಫೆಬ್ರವರಿ 13ರಂದು ಸ್ಥಳೀಯ ಶಾಸಕ (ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ), ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಭಾಗವಹಿಸಲಿದ್ದಾರೆ. ಫೆಬ್ರವರಿ 17ರಂದು ಮುಕ್ತಾಯ ಸಮಾರಂಭದಲ್ಲಿ ಕ್ರೀಡಾ ಮತ್ತು ಯುವಜನ ಸೇವಾ ಸಚಿವ ಕೆ ಅಭಯಚಂದ್ರ ಮತ್ತು ನಟ ಜಗ್ಗೇಶ್ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications