ಸೇತುವೆ ಮೇಲಿಂದ ನದಿಗೆ ಬಿದ್ದ ಟ್ರ್ಯಾಕ್ಟರ್; ಏಳು ರೈತರ ಸಾವು

ಬೆಳಗಾವಿ, ಫೆಬ್ರವರಿ 8: ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ನದಿಗೆ ಟ್ರ್ಯಾಕ್ಟರ್ ಬಿದ್ದು 7 ರೈತರು ದುರ್ಮರಣ ಹೊಂದಿರುವ ಘಟನೆ ಖಾನಾಪುರ ತಾಲೂಕಿನ ಇಟಗಿ ಬಳಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.

ಇಟಗಿ- ಬೋಗೂರ ಗ್ರಾಮದ ಮಧ್ಯದ ಸೇತುವೆ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸುವಾಗ ಮೂವರು ರೈತರು ಮೃತಪಟ್ಟಿದ್ದಾರೆ.

ಬೋಗೂರು ಗ್ರಾಮದ ಶೇಖಪ್ಪ ಕೇದಾರಿ(38), ಗುಲಾಬಿ ಹುಣಸಿಕಟ್ಟಿ(35) ಶಾಂತವ್ವಾ ಅಳಗೋಡಿ(65), ಶಾಂತವ್ವಾ(63) ಮೃತ ದುರ್ದೈವಿಗಳು. ಇನ್ನೂ ಮೂವರು ಮೃತರ ಹೆಸರು ತಿಳಿದುಬಂದಿಲ್ಲ. 7 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳನ್ನು ಖಾನಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

Accident Near Belagavi District Khanapur ; 7 Farmers Dead

ಮೃತರೆಲ್ಲರೂ ಬೋಗೂರು ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಬೋಗೂರ ಗ್ರಾಮದಿಂದ ಇಟಗಿ ಗ್ರಾಮದ ಕಬ್ಬಿನ ಹೊಲಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+