ಚನ್ನಪಟ್ಟಣ ತಹಶೀಲ್ದಾರ್ ನಡೆಗೆ ಬೇಸತ್ತು ವಿಷ ಕುಡಿದು ರೈತ ಆತ್ಮಹತ್ಯೆ ಯತ್ನ
ರಾಮನಗರ, ಮಾರ್ಚ್ 11: ಬಲವಂತವಾಗಿ ಕೃಷಿ ಜಮೀನಿನಲ್ಲಿ ಇಟ್ಟಿಗೆ ಕಾರ್ಖಾನೆಗೆ ರಸ್ತೆ ಮಾಡಲು ಮುಂದಾದ ಕಂದಾಯ ಇಲಾಖೆ ಅಧಿಕಾರಿಗಳ ದೌರ್ಜನ್ಯಕ್ಕೆ ಬೇಸತ್ತ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಘಟನೆ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಅಪ್ಪಾಜಿಗೌಡರ ಮಗ ಅನಿಲ್‌ಕುಮಾರ್(30) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಯುವ ರೈತನಾಗಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೇ, ರೈತನ ಜಮೀನಿನಲ್ಲಿ ಟ್ರಂಚ್ ತೆಗೆದಿದ್ದು, ಇದನ್ನು ಪ್ರಶ್ನಿಸಿದ ವೇಳೆ ತಹಶೀಲ್ದಾರ್ ಸುದರ್ಶನ್ ಮತ್ತು ಗ್ರಾಮಲೆಕ್ಕಾಧಿಕಾರಿ ಆನಂದ್ ಅವರು ಅನಿಲ್‌ಕುಮಾರ್ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದರಿಂದ ಮನನೊಂದ ಯುವರೈತ ಅನಿಲ್‌ಕುಮಾರ್, ಅಧಿಕಾರಿಗಳ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅನಿಲ್‌ಕುಮಾರ್ ಸ್ಥಿತಿ ಗಂಭೀರವಾಗಿದ್ದು, ಮಂಡ್ಯದ ಜಿ.ಮಾದೇಗೌಡ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇಗ್ಗಲೂರು ಗ್ರಾಮದ ಅನಿಲ್‌ಕುಮಾರ್ ತಮಗೆ ಸೇರಿದ ೨.೩೦ ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದು, ಈತನ ಜಮೀನಿನ ಹಿಂಬದಿಯಲ್ಲಿನ ಇಟ್ಟಿಗೆ ಫ್ಯಾಕ್ಟರಿಗೆ ರಸ್ತೆ ನಿರ್ಮಿಸಿಕೊಡುವ ಉದ್ದೇಶದಿಂದ ಇಲ್ಲಿ ಸರ್ಕಾರಿ ನಕಾಶೆ ರಸ್ತೆ ಇದೆ ಎಂದು ತಹಶೀಲ್ದಾರ್ ಸುದರ್ಶನ್ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಆನಂದ್ ಬಲವಂತವಾಗಿ ಟ್ರಂಚ್ ತೆಗೆಯಲು ಮುಂದಾಗಿದ್ದು, ಅಲ್ಲದೇ ನನ್ನ ನಿರ್ಧಾರ ಸರಿಯಿದೆ ಎಂದು ರೈತ ಅನಿಲ್ ಗೆ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.
ಇನ್ನು ಅನಿಲ್‌ಕುಮಾರ್ ಅಧಿಕಾರಿಗಳ ನಡೆಯಿಂದ ಮನನೊಂದು, ಪಕ್ಕದ ಮಿಷನ್ ಮನೆಯಲ್ಲೆ ಇದ್ದ ಕ್ರಿಮಿನಾಶಕ ಔಷಧಿಯನ್ನು ತಂದು ನೀವು ನನಗೆ ಕಿರುಕುಳ ನೀಡುತ್ತಿದ್ದು, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಹಸೀಲ್ದಾರ್ ಅವರ ಎದುರೆ ವಿಷಸೇವನೆ ಮಾಡಿದ್ದಾರೆ. ಈ ವೇಳೆ ವಿಷದ ಬಾಟಲಿಯನ್ನು ಕಿತ್ತುಕೊಳ್ಳಲು ಮುಂದಾದ ಗ್ರಾಮ ಲೆಕ್ಕಿಗ ಆನಂದ್ ನ ಬಟ್ಟೆಯ ಮೇಲೆ ಸಹ ಚೆಲ್ಲಿದ್ದು ಅತನು ಕೂಡ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರೈತರ ತೆಂಗು ಮತ್ತು ಅಡಕೆ ಮರ ಕತ್ತರಿಸಿ ದಬ್ಬಾಳಿಕೆ ಮಾಡಿ ಜನರಿಂದ ಛೀಮಾರಿಗೆ ಒಳಗಾಗಿರುವ ಗುಬ್ಬಿ ತಾಲ್ಲೂಕು ತಹಶೀಲ್ದಾರ್ ಮತ್ತು ಗ್ರಾಮಲೆಕ್ಕಿಗ ಪ್ರಕರಣ ಮಾಸುವ ಮುನ್ನವೇ ಅಧಿಕಾರಿಗಳ ದರ್ಪಕ್ಕೆ ರೈತ ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದಾನೆ.

ರೈತ ಅನಿಲ್ ನಡೆಯಿಂದ ಬೆದರಿದ ಗ್ರಾಮಲೆಕ್ಕಿಗ ಆನಂದ್ ರೈತನೇ ನನಗೆ ವಿಷ ಕುಡಿಸಲು ಬಂದ ಎಂದು ಆರೋಪಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ನಾಟಕವಾಡಿದ್ದಾರೆ ಎಂದು ಗ್ರಾಮದ ರೈತರು ಆರೋಪಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಹಶೀಲ್ದಾರ್ ಸುದರ್ಶನ್, ರೈತ ಅನಿಲ್ ಕೈಯಿಂದ ಗ್ರಾಮಲೆಕ್ಕಿಗ ಆನಂದ್ ವಿಷವನ್ನು ಕಿತ್ತುಕೊಳ್ಳುವ ವೇಳೆ ಆತನ ಮೇಲೆ ಚಲ್ಲಿತು ಎಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications