ಜಮೀನಿನಲ್ಲೇ ವಿಷಸೇವಿಸಿ ಮೃತನಾದ ಚಿಕ್ಕಮಗಳೂರಿನ ರೈತ
ಸಾಲದ ಬಾಧೆ ಮತ್ತು ಕೈಕೊಟ್ಟ ಬೆಳೆಯಿಂದಾಗಿ ಕಂಗಾಲಾದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನ ಯಗಟಿಯಲ್ಲಿ ಇಂದು ನಡೆದಿದೆ.
ಚಿಕ್ಕಮಗಳೂರು, ಏಪ್ರಿಲ್ 25: ಸಾಲದ ಬಾಧೆ ಮತ್ತು ಕೈಕೊಟ್ಟ ಬೆಳೆಯಿಂದಾಗಿ ಕಂಗಾಲಾದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನ ಯಗಟಿಯಲ್ಲಿ ಇಂದು ನಡೆದಿದೆ.
6 ಲಕ್ಷಕ್ಕೂ ಹೆಚ್ಚು ಸಾಲ ಹೊಂದಿದ್ದ ಚಂದ್ರಪ್ಪ ನಾಯಕ (55) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ಗುರುತಿಸಲಾಗಿದೆ. ಬೆಳೆಗೆಂದು ತೋಡಿದ್ದ ಬೋರ್ ವೆಲ್ ವಿಫಲವಾಗಿದ್ದರಿಂದ ಇವರು ಬೆಳೆದಿದ್ದ ತೆಂಗು ಮತ್ತು ಅಡಿಕೆ ಬೆಳೆಗಳು ನಾಶವಾಗಿದ್ದವು. ಇದರಿಂದ ಕಂಗಾಲಾದ ಚಂದ್ರಪ್ಪ ನಾಯಕ ತಮ್ಮ ಜಮೀನಿನಲ್ಲೇ ವಿಷ ಸೇವಿಸಿ ಸಾವನ್ನಪ್ಪಿದ್ದಾರೆ.[ಲೆಕ್ಕಕ್ಕೇ ಸಿಗದ ರೈತರ ಆತ್ಮಹತ್ಯೆ ಸರಣಿಗೆ ಮೈಸೂರಿನ ಮೂವರು ಸೇರ್ಪಡೆ]

ಯಗಟಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications