ರೈತರಿಗೆ 2023 ರ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರ ಬಿಡುಗಡೆ
ದಾವಣಗೆರೆ, ಮೇ. 10 : ಕಳೆದ ವರ್ಷ 2023 ರ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆಯಿಂದ ಬೆಳೆ ನಷ್ಟವಾದ 82,928 ರೈತರಿಗೆ ಮೊದಲ ಕಂತಿನಲ್ಲಿ ಗರಿಷ್ಠ ರೂ.2000 ವರೆಗೆ ಹಾಗೂ ಈಗ ಬಾಕಿ ಇದ್ದ ರೈತರಿಗೆ ಒಟ್ಟು 60,23,46,380 ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗೆ ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ ಎಂ.ವಿ ತಿಳಿಸಿದ್ದಾರೆ.
2023 ರ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 1,50,621.7 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ ಎಂದು ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಎಸ್‍ಡಿಆರ್ ಎಫ್ ಹಾಗೂ ಎನ್‍ಡಿಆರ್‍ಎಫ್ ಮಾರ್ಗಸೂಚಿನ್ವಯ ಅರ್ಹರ ರೈತರಿಗೆ ಗರಿಷ್ಠ ರೂ. 2000 ವರೆಗೆ 82,928 ರೈತರಿಗೆ ರೂ. 15,88,15,380 ಗಳನ್ನು ಮೊದಲ ಕಂತಾಗಿ ಪಾವತಿಸಲಾಗಿತ್ತು.

ಮೇ.2 ರ ಸರ್ಕಾರದ ಆದೇಶದಂತೆ ಮಾರ್ಗಸೂಚಿನ್ವಯ ಪರಿಹಾರ ನೀಡಲು ಬಾಕಿ ಇದ್ದ ಮೊತ್ತವನ್ನು ಈಗ ಜಿಲ್ಲೆಯ 69, 575 ರೈತರಿಗೆ ರೂ.44,35,31,000 ಗಳನ್ನು ನೇರವಾಗಿ ರೈತರ ಖಾತೆಗೆ ಪಾವತಿ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಇದುವರೆಗೆ 60,23,46,381 ರೂಪಾಯಿಗಳನ್ನು ಬೆಳೆ ಹಾನಿ ಪರಿಹಾರವಾಗಿ ನೀಡಲಾಗಿರುತ್ತದೆ.
ಮೊದಲ ಕಂತಿನ ಪರಿಹಾರ ವಿವರ
ಮೊದಲ ಕಂತಿನಲ್ಲಿ ಗರಿಷ್ಠ ರೂ.2000 ವರೆಗೆ ಮಾರ್ಗಸೂಚಿ ಅನ್ವಯ ಜಿಲ್ಲೆಯ 82928, ರೈತರಿಗೆ 15,88,15,380 ರೂಪಾಯಿಗಳನ್ನು ಪಾವತಿಸಲಾಗಿತ್ತು. ತಾಲೂಕುವಾರು ವಿವರ ನೋಡುವುದಾದರೆ, ಚನ್ನಗಿರಿ ತಾಲ್ಲೂಕಿನ 16,398 ರೈತರಿಗೆ ರೂ.3,07,12,576, ದಾವಣಗೆರೆ 17,015 ರೈತರಿಗೆ ರೂ.3,22,94,548, ಹೊನ್ನಾಳಿ 8,795 ರೈತರಿಗೆ ರೂ.1,66,55,292, ಜಗಳೂರು 27,263 ರೈತರಿಗೆ ರೂ.5,36,64,034, ನ್ಯಾಮತಿ 9,189 ರೈತರಿಗೆ ರೂ.1,74,61,001 ಹಾಗೂ ಹರಿಹರ ತಾಲ್ಲೂಕಿನ 4,268 ರೈತರಿಗೆ ರೂ.80,27,929 ಗಳನ್ನು ಮೊದಲ ಕಂತಾಗಿ ಪಾವತಿಸಲಾಗಿದೆ.
ಬಾಕಿ ಇದ್ದ ಬೆಳೆ ಪರಿಹಾರ ಪಾವತಿ
ಜಿಲ್ಲೆಯಲ್ಲಿ ಬೆಳೆ ನಷ್ಟವಾದ ರೈತರಿಗೆ ಮೊದಲ ಕಂತಿನಲ್ಲಿ ಈಗಾಗಲೇ ಗರಿಷ್ಠ ರೂ.2000 ವರೆಗೆ ಪಾವತಿಸಲಾಗಿದ್ದು, ಬಾಕಿ ಪಾವತಿಸಬೇಕಾದ 69575 ರೈತರಿಗೆ ರೂ.44,35,37,000 ಪರಿಹಾರವನ್ನು ನೇರವಾಗಿ ಅವರ ಖಾತೆಗೆ ಈಗ ಪಾವತಿಸಲಾಗಿದೆ. ತಾಲೂಕುವಾರು ವಿವರ ನೋಡುವುದಾದರೆ, ಚನ್ನಗಿರಿ 12,758 ರೈತರಿಗೆ ರೂ.6,50,30,311, ದಾವಣಗೆರೆ 13,914 ರೈತರಿಗೆ ರೂ.8,34,19,466, ಹೊನ್ನಾಳಿ 7,177 ರೈತರಿಗೆ ರೂ.3,87,43,550, ಜಗಳೂರು 24,493 ರೈತರಿಗೆ ರೂ. 19,29,18,592, ನ್ಯಾಮತಿಯ 8,025 ರೈತರಿಗೆ ರೂ.4,58,94,470 ಹಾಗೂ ಹರಿಹರ ತಾಲೂಕಿನ 3,208 ರೈತರಿಗೆ ರೂ.1,75,24,611 ಗಳನ್ನು ಪಾವತಿಸಲಾಗಿದೆ.

ಇನ್ನು, ಯಾವುದೇ ರೈತರಿಗೆ ಬೆಳೆ ಪರಿಹಾರ ಕುರಿತಂತೆ ಮಾಹಿತಿ ಮತ್ತು ಮಾರ್ಗಸೂಚಿ ಬಗ್ಗೆ ವಿವರ ನೀಡಲು ಎಲ್ಲಾ ತಾಲೂಕುಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. ಮಾಹಿತಿಗಾಗಿ ಬೆಳಗ್ಗೆ 10 ರಿಂದ ಸಂಜೆ 5.30ರ ವರೆಗೆ ಕರೆ ಮಾಡಬಹುದು. ಸಹಾಯವಾಣಿ ಸಂಖ್ಯೆಗಳು: ಚನ್ನಗಿರಿ.ತಾ. ಮೊ.ಸಂ:7892481962, ದಾವಣಗೆರೆ, ಮೊ.ಸಂ:9731254380, ಹೊನ್ನಾಳಿ.ತಾ. ಮೊ.ಸಂ:9686136015, ಜಗಳೂರ.ತಾ. ಮೊ.ಸಂ:8431977870, ನ್ಯಾಮತಿ.ತಾ. ಮೊ.ಸಂ:8073951245, ಹರಿಹರ ತಾ.ಮೊ.ಸಂ:8618868370 ಸಂಪರ್ಕಿಸಬಹುದು.
NDRF ಹಣ ಬಿಡುಗಡೆ ಆದ ಕೂಡಲೇ ರೈತರಿಗೆ ಅರ್ಹತೆ ಪ್ರಕಾರ ಪರಿಹಾರ ಪಾವತಿಸಲಾಗಿದೆ. ಇಲ್ಲಿಯವರೆಗೆ ಮೊದಲ ಹಂತದಲ್ಲಿ 2000 ರೂ. ಮತ್ತು ಎರಡನೇ ಕಂತಿನ ಪರಿಹಾರವೂ ಸೇರಿದಂತೆ ಒಟ್ಟು 32.12 ಲಕ್ಷ ರೈತರ ಖಾತೆಗೆ ಸಂಪೂರ್ಣ ಬೆಳೆ ಪರಿಹಾರ ಜಮೆ ಮಾಡಲಾಗಿದೆ. ಇನ್ನೂ ಸುಮಾರು 2 ಲಕ್ಷ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ದಾಖಲೆ ಪರಿಶೀಲನೆ ಹಂತದಲ್ಲಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಮಾಹಿತಿ ನೀಡಿದ್ದಾರೆ.












Click it and Unblock the Notifications