ರೈತರ ಖಾತೆಗೆ ಎರಡು ಸಾವಿರ: ಎರಡು ದಿನದಲ್ಲಿ ಯಡಿಯೂರಪ್ಪ ಆದೇಶ

Recommended Video

      ಎರಡು ದಿನದಲ್ಲಿ ಯಡಿಯೂರಪ್ಪ ಆದೇಶ/ B. S. Yeddyurappa | Oneindia Kannada

      ಬೆಂಗಳೂರು, ಆಗಸ್ಟ್ 02: ರೈತರ ಖಾತೆಗೆ ವರ್ಷಕ್ಕೆ ಆರು ಸಾವಿರ ಹಾಕುವ ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯ ಜೊತೆಗೆ ಯಡಿಯೂರಪ್ಪ ಅವರು ನಾಲ್ಕು ಸಾವಿರ ಹಣವನ್ನು ರಾಜ್ಯ ಸರ್ಕಾರವು ನೀಡುವ ಯೋಜನೆಯನ್ನು ಸಿಎಂ ಆದ ಮೊದಲ ದಿನದಂದೇ ಘೋಷಿಸಿದ್ದರು. ಸಆ ಘೋಷಣೆಗೆ ಇನ್ನೆರಡು ದಿನಗಳಲ್ಲಿ ಅಧಿಕೃತ ಒಪ್ಪಿಗೆ ದೊರೆಯಲಿದೆ.

      ಇಂದು ವಿಧಾನಸೌಧದದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಮೊದಲ ಕಂತಿನ 2 ಸಾವಿರ ರೂಪಾಯಿಗಳನ್ನು 15-20 ದಿನಗಳೊಳಗೆ ರೈತರಿಗೆ ಪಾವತಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

      ಸಿಎಂ ಅವರು ಕರೆದಿದ್ದ ಸಭೆಯಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಿದ್ದರು.

      2000 thousand to farmers account in few days: Yeddyurappa

      ಒಟ್ಟು ನಾಲ್ಕು ಸಾವಿರ ರೂಪಾಯಿ ಹಣವನ್ನು ರಾಜ್ಯ ಸರ್ಕಾರವು ರೈತರಿಗೆ ಎರಡು ಕಂತುಗಳಲ್ಲಿ ನೀಡುವುದಾಗಿ ಯಡಿಯೂರಪ್ಪ ಅವರು ಘೋಷಿಸಿದ್ದು, ಇನ್ನೆರಡು ದಿನಗಳಲ್ಲಿ ಇದಕ್ಕೆ ಅಧಿಕೃತ ಮೊಹರು ಬಿದ್ದು 15-20 ದಿನಗಳಲ್ಲಿ ಹಣ ಖಾತೆಗೆ ತಲುಪಲಿದೆ.

      ಕುಮಾರಸ್ವಾಮಿ ಅವರು ಪ್ರಾರಂಭಿಸಿದ್ದ ಅರ್ಧಕ್ಕೆ ನಿಂತಿರುವ ರೈತರ ಸಾಲ ಮನ್ನಾ ಬಗ್ಗೆ ಯಡಿಯೂರಪ್ಪ ಅವರು ಇನ್ನೂ ಯಾವ ನಿರ್ಣಯವನ್ನೂ ಪ್ರಕಟಿಸಿಲ್ಲ, ಕೆಲವು ದಿನಗಳ ನಂತರ ಸ್ಪಷ್ಟ ನಿರ್ಣಯ ತಳೆಯುವುದಾಗಿ ಅವರು ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+