ಮಿತ್ತಲ್ ಕಂಪೆನಿಗೆ ಭೂಮಿ ನೀಡಿಕೆಗೆ ವಿರೋಧ
ಬಳ್ಳಾರಿ,
ಆ. 15 : ಲಕ್ಷ್ಮೀ ಮಿತ್ತಲ್ ಕೈಗಾರಿಕೆ ಸ್ಥಾಪನೆಗಾಗಿ ರಾಜ್ಯ ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿರುವ ಭೂಮಿಗೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ ಕುಡತಿನಿ-ಹರಗಿನಡೋಣಿ ಭೂ ಸಂತ್ರಸ್ತ ರೈತರು ಆಗಸ್ಟ್ 16 ರ ಸೋಮವಾರ ಪ್ರತಿಭಟನೆ ನಡೆಸಲಿದ್ದಾರೆ. id="toptextpromo">ಕರ್ನಾಟಕ
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗಳ ಜಂಟಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಲಿದ್ದು, ಪ್ರತೀ ಎಕರೆಗೆ ಕನಿಷ್ಠ 77ಲಕ್ಷ ರು.ಗಳನ್ನು ಪರಿಹಾರವಾಗಿ ನೀಡಬೇಕು. ಅಲ್ಲದೇ, ನೌಕರಿ, ನಿವೇಶನಗಳನ್ನು ಕೂಡ ನೀಡಬೇಕು ಎಂದು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>ಬಳ್ಳಾರಿ
ನಗರದ ಅಧಿದೇವತೆ ಶ್ರೀ ಕನಕದುರ್ಗಮ್ಮ ದೇವಸ್ಥಾನದಿಂದ ಪ್ರತಿಭಟನೆ ಆಗಸ್ಟ್ 16 ರ ಸೋಮವಾರ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಪ್ರಾರಂಭ ಆಗಲಿದೆ. 300ಕ್ಕೂ ಹೆಚ್ಚಿನ ಸಂಖ್ಯೆಯ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.











Click it and Unblock the Notifications