ಕೆಐಎಡಿಬಿ ವಿರುದ್ಧ ಸಿಡಿದೆದ್ದ ಹೊಸಪೇಟೆ ರೈತರು

Hospet Famers Protest
ಬಳ್ಳಾರಿ, ಜೂ. 15: ಜಿಲ್ಲೆಯಲ್ಲಿ ಬೃಹತ್ ಉಕ್ಕಿನ ಕಾರ್ಖಾನೆಗಳಿಗಾಗಿ ಹೊಸಪೇಟೆ ತಾಲೂಕಿನ ಹಲವಾರು ಗ್ರಾಮಗಳ ಕೃಷಿಭೂಮಿ ವಶಪಡಿಸಿಕೊಳ್ಳಲು ಕೆಐಎಡಿಬಿ(KIADB) ಭೂಸ್ವಾಧೀನಕ್ಕಾಗಿ ನೋಟೀಸ್ ಜಾರಿ ಮಾಡಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಂಟಿಯಾಗಿ ಸೋಮವಾರ ಪ್ರತಿಭಟನಾ ಮೆರವಣಿಗೆ ಮಾಡಿ ರಸ್ತೆತಡೆ ನಡೆಸಿದವು..

ಹೊಸಪೇಟೆಯ ಟೌನ್ ರೀಡಿಂಗ್ ರೂಮ್ ಆವರಣದಿಂದ ಹೊರಟ ಮೆರವಣಿಗೆಯು ರೋಟರಿ ವೃತ್ತದಲ್ಲಿ ಸ್ವಲ್ಪಕಾಲ ರಸ್ತೆ ತಡೆ ನಡೆಸಿ, ಸರ್ಕಾರ ರತ್ನಗಂಬಳಿ ಹಾಸಿ, ಉದ್ಯಮಿಗಳನ್ನು ಅಹ್ವಾನಿಸಿರುವುದು ಬೌದ್ಧಿಕ - ಸಾಂಸ್ಕೃತಿಕ ದಿವಾಳಿತನವನ್ನು ತೋರುತ್ತಿದೆ. ಸರ್ಕಾರವನ್ನು ಜನಸಾಮಾನ್ಯರು, ಬುದ್ಧಿಜೀವಿಗಳು, ಪರಿಸರ ಪ್ರೇಮಿಗಳು ಎಚ್ಚರಿಸಿ ಕೈಗಾರಿಕೀಕರಣದ ನೆಪದಲ್ಲಿ ಬೆಳೆಯುತ್ತಿರುವ ಬಂಡವಾಳಶಾಹಿತ್ವವನ್ನು ತಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕೆ. ಜಹಿರುದ್ದೀನ್ ಅವರು ಮಾತನಾಡಿ, ತುಂಗಾಭದ್ರಾ ಜಲಾಶಯದ ನೀರು ಕೊನೆಯ ಹಂತದ ರೈತರಿಗೆ ದೊರೆಯುತ್ತಿಲ್ಲ. ಇಂತಹಾ ಸಂದರ್ಭದಲ್ಲಿ ಉದ್ಯಮಿಗಳಿಗೆ ಯಥೇಚ್ಛ ನೀರು ಕೊಡುವ ಮೂಲಕ ಸರ್ಕಾರ ರೈತ ವಿರೋಧಿ ನಿಲುವು ತೋರುತ್ತಿದೆ. ರೈತರನ್ನು ಕೃಷಿಯೋಗ್ಯ ಫಲವತ್ತಾದ ಭೂಮಿಗಳಿಂದ ಒಕ್ಕಲೆಬ್ಬಿಸುತ್ತಿದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು.

ನೂರಾರು ರೈತರು ಹಸಿರು ಟವೆಲ್ ಧರಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹೊಸಪೇಟೆಯ ರೋಟರಿ ವೃತ್ತದಲ್ಲಿ ರಸ್ತೆತಡೆ ನಡೆಸುವಾಗ ಮಳೆ ಸುರಿಯಿತು. ತಹಶೀಲ್ದಾರ್ ಪಿ.ಎಸ್.ಮಂಜುನಾಥ ಸ್ಥಳಕ್ಕೆ ಆಗಮಿಸಿ ಮಳೆಯಲ್ಲೇ ಮನವಿ ಸ್ವೀಕರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+