ತನುವಿನ ಅಣುಅಣುವೂ ಕುಣಿದಾಡಿದ ಆಕ್ಷಣ!

98ರ ಹರೆಯದ ಗುಬ್ಬಚ್ಚಿ ದೇಹದ ನಿಘಂಟುತಜ್ಞ, ಸಮ್ಮೇಳನಾಧ್ಯಕ್ಷರಾದ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರನ್ನು ಮೆರವಣಿಗೆಯಲ್ಲಿ ಮೆರೆದಾಡಿಸಿದ ಆ ಹೊತ್ತು ಹರುಷದ ಹೊನಲು ಹರಿದಿತ್ತು. ಸುಮಾರು 70 ಸಾವಿರಕ್ಕೂ ಹೆಚ್ಚು ಕನ್ನಡಿಗರು ಮೆರವಣಿಗೆಯ ಬೀದಿಯಲ್ಲಿ ನೆರೆದು ಅಭೂತಪೂರ್ವ ಮೆರವಣಿಗೆಯಲ್ಲಿ ಪಾಲ್ಗೊಂಡರು.
ನಗರಾಡಳಿತ ಕಚೇರಿಯ ಮುಂದಿನ ಬೀದಿ ವಾಹನಗಳಿಂದ ಮಾತ್ರವಲ್ಲ ಸಾವಿರಾರು ಕನ್ನಡದ ಮನಸುಗಳಿಂದ ತುಂಬಿತ್ತು. ಎಲ್ಲೆಲ್ಲಿಂದಲೋ ಬಂದವರು ಇಲ್ಲಿ ನಿಂದು ನಲಿದಾಡಿದರು. ಹುಬ್ಬಳ್ಳಿ, ಬೆಳಗಾವಿ, ರಾಯಭಾಗ, ಮಂಗಳೂರು ಮೊದಲಾದ ಭಾಗಗಳಿಂದ ಬಂದ ಕಲಾವಿದರು ಕಲಾವೈಭೋಗವನ್ನು ಮೆರೆದರು. ದಕ್ಷಿಣ ಕನ್ನಡದ ಭೂತಕೋಲ, ಹುಲಿವೇಷ, ಹುಬ್ಬಳ್ಳಿಯ ಹೈದರ ಜಗ್ಗಲಿಗೆ, ವೀರಗಾಸೆ, ಯಕ್ಷಗಾನ ಕಲಾವಿದರು ಮೆರವಣಿಗೆಯುದ್ದಕ್ಕೂ ಕಲಾಪ್ರದರ್ಶನ ಮಾಡಿದರು. ಮಂಗಳಮುಖಿಯರು ಕೂಡ ಬಣ್ಣಹಚ್ಚಿ ಕಲಾಪ್ರೌಢಿಮೆ ಮೆರೆದರು.
ಅರ್ಧ ಕಿ.ಮೀ. ಉದ್ದಕ್ಕೂ ನೆರೆದ ಮೆರವಣಿಗೆ, ನಾಡಪ್ರಭು ಕೆಂಪೆಗೌಡರ ಮೂರ್ತಿಗೆ ಹೂಮಾಲೆ ಹಾಕಿದ ನಂತರ ಸರಿಯಾಗಿ 10 ಗಂಟೆಗೆ ಆರಂಭವಾಯಿತು. ಪ್ರೊ. ಜಿ. ವೆಂಕಟಸುಬ್ಬಯ್ಯ ಅವರನ್ನು ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡು ಸಾಲಂಕೃತವಾದ ವಾಹನದಲ್ಲಿ ಕುಳ್ಳಿರಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರ ಪ್ರಸಾದ್ ಜಿವಿಯವರಿಗೆ ಜೊತೆಯಾಗಿದ್ದರು. ಡಿಎಚ್ ಕರ್ಕಿ ಅವರು ಬರೆದ ಹಚ್ಚೇವು ಕನ್ನಡದ ದೀಪ ಹಾಡನ್ನು ಸಾಂಗವಾಗಿ ಹಾಡಿದ ನಂತರ ವೆಂಕಟಸುಬ್ಬಯ್ಯ ಅವರೇರಿದ್ದ ರಥದ ಗಾಲಿ ಹರಿಯಲು ಪ್ರಾರಂಭಿಸಿತು. [ಚಿತ್ರಪಟ ನೋಡಿರಿ]
ವಿಪರೀತ ಜಂಗುಳಿಯ ನಡುವೆ ತೂರಿಕೊಂಡು ಕಂಡದ್ದನೆಲ್ಲ ಕ್ಯಾಮೆರಾ ಕಣ್ಣಲ್ಲಿ ತುಂಬಿಕೊಳ್ಳುವವರೆ. ಅಷ್ಟೊಂದು ಜನಸಂದಣಿಯಿದ್ದರೂ ಮೆರವಣಿಗೆ ಸರಾಗವಾಗಿ ಸಾಗುತ್ತಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಾನವ ಸರಪಳಿ ಮಾಡಿ ಸಮ್ಮೇಳನಾಧ್ಯಕ್ಷರನ್ನು ಸುರಕ್ಷಿತವಾಗಿ ಮುನ್ನಡೆಸುತ್ತಿದ್ದರು. ನಾಗರಿಕರು ಕೂಡ ಅಷ್ಟೇ ವ್ಯವಧಾನದಿಂದ ಕನ್ನಡದ ಸಂಭ್ರಮವನ್ನು ಕಣ್ಮನಗಳಲ್ಲಿ ತುಂಬಿಕೊಳ್ಳುತ್ತಿದ್ದರಿಂದ ಪೊಲೀಸರಿಗೆ ಕೂಡ ವಾಹನ ನಿಯಂತ್ರಣ ಹೊರತುಪಡಿಸಿ ಹೆಚ್ಚು ಕೆಲಸವಿರಲಿಲ್ಲ.
ಸಂಸದ ಅನಂತಕುಮಾರ್, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಆರ್ ಅಶೋಕ, ಕರವೇ ಅಧ್ಯಕ್ಷ ನಾರಾಯಣ ಗೌಡ, ಕೆಎಫ್ ಸಿಸಿ ಅಧ್ಯಕ್ಷ ಬಸಂತಕುಮಾರ ಪಾಟೀಲ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟರಾದ ನವೀನ್ ಕೃಷ್ಣ, ವಾಸು ಮುಂತಾದವರು ಕಾಲ್ನಡಿಗೆಯಲ್ಲೇ ಮೆರವಣಿಗೆಯ ದಾರಿಯನ್ನು ಕ್ರಮಿಸಿದರು. ಬಿರುಬಿಸಿಲಲ್ಲಿ ಸಾಗುತ್ತಿದ್ದ ಕಲಾವಿದರಿಗೆ, ಕಾಲ್ನಡಿಗೆಯವರಿಗೆ ಮಜ್ಜಿಗೆಯ ಸಮಾರಾಧನೆ ಕೂಡ ಅಲ್ಲಲ್ಲಿ ಆಗುತ್ತಿತ್ತು.
'ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ' ಎಲ್ಲೆಲ್ಲೂ ಕನ್ನಡದ ಜೈಕಾರ, ಎಲ್ಲೆಲ್ಲೂ ಕನ್ನಡ ಸಂಘಟನೆಗಳನ್ನು ನಡೆಸುತ್ತಿರುವ ನಾಯಕ ಜೈಕಾರ, ಮಧ್ಯದಲ್ಲಿ ಜಿವಿಯವರು ರಥದಲ್ಲಿ ಕುಳಿತು ಎಲ್ಲೆರೆಡೆ ಕೈಬೀಸುತ್ತ ಸಾಗಿದ್ದರೆ, ಎಲ್ಲರಿಗಿಂತ ಮುಂದೆ ಗಾಂಧಿ ವೇಷಧಾರಿ ಏಕಾಂಗಿಯಾಗಿ ಸಾಗುತ್ತಿದ್ದರು. ಕರವೇ, ಜಯಕರ್ನಾಟಕ ವೇದಿಕೆ ಮುಂತಾದ ಕನ್ನಡ ಸಂಘಟನೆಗಳ ಕಾರ್ಯಕರ್ತರಿಂದ 'ನಾರಾಯಣ ಗೌಡರಿಗೆ ಜೈ', 'ಮುತ್ತಪ್ಪ ರೈ ಅವರಿಗೆ ಜೈ' ಮುಂತಾದ ಜಯಘೋಷಗಳು ಕಿವಿ ತುಂಬಿ ತುಳುಕುವಂತಿದ್ದವು.
ಆರಂಭದಲ್ಲಿ ವೆಂಕಟಸುಬ್ಬಯ್ಯನವರ ಸುತ್ತ ನೆರೆದಿದ್ದ ಜನಸಂದಣಿ ಮೆರವಣಿಗೆ ಸಾಗುತ್ತಿದ್ದಂತೆ ಕರಗುತ್ತ ಸಾಗಿತು. ಅವರ ರಥದ ಹಿಂದೆ ಬರುತ್ತಿದ್ದ ಕನ್ನಡದ ತಾರಾಮಣಿಗಳನ್ನು ತುಂಬಿಕೊಂಡಿದ್ದ ವಾಹನದತ್ತ ಅಭಿಮಾನದ ಹೊಳ ಹರಿದಿತ್ತು. ಉಪೇಂದ್ರ, ಪುನೀತ್ ರಾಜ್ ಕುಮಾರ್, ಪ್ರೇಮ್, ಬಿರಾದಾರ್, ಬುಲೆಟ್ ಪ್ರಕಾಶ್, ದುನಿಯಾ ವಿಜಯ್, ಡಿಂಗ್ರಿ ನಾಗರಾಜ್, ರಮೇಶ್ ಭಟ್, ಹೇಮಾಚೌಧರಿ, ರಂಗಾಯಣ ರಘು, ಗೆಜ್ಜೆಹೆಜ್ಜೆ ರಮಾಕಾಂತ್ ನೆರೆದಿದ್ದರು. ಹಗಲುಹೊತ್ತಿನಲ್ಲಿ ತಾರೆ ಹೊಳೆಯುವುದಿಲ್ಲವಾದ್ದರಿಂದ, ಹಲ ತಾರೆಗಳು ಕೆಲಹೊತ್ತು ಮಿಂಚಿ ಮಾಯವಾದವು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications