Get Updates
Get notified of breaking news, exclusive insights, and must-see stories!

WPL 2026: ಆರ್‌ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್‌, ಬೌಲಿಂಗ್‌ ಲೈನ್‌ ಅಪ್‌ ಹೇಗಿದೆ ತಿಳಿಯಿರಿ

WPL 2026 RCB Playing 11: ಡಬ್ಲ್ಯೂಪಿಎಲ್‌ 2026ರ 15ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಇಂದು (ಜನವರಿ 24) ಕಾದಾಡಲಿವೆ. ಹಾಗಾದ್ರೆ, ಪ್ಲೇಯಿಂಗ್‌ 11ನಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ವಡೋದರಾದ ಕೋಟಂಬಿಯ ಬಿಸಿಎ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಎದುರಿಸಲು ಸಜ್ಜಾಗಿದೆ. ಈ ಮೂಲಕ ಇಂದಿನ ಪಂದ್ಯದಲ್ಲಿ ಗೆದ್ದು ಫೈನಲ್‌ಗೇರಲು ಭರ್ಜರಿ ಸಿದ್ಧತೆ ನಡೆಸಿದೆ. ಹಾಗಾದ್ರೆ ಬೆಂಗಳೂರು ತಂಡದ ಪ್ಲೇಯಿಂಗ್‌ 11 ಹೇಗಿರಲಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

WPL 2026 Royal Challengers Bengaluru vs DC Playing XI Match Preview and Team Analysis

ಮತ್ತೊಂದೆಡೆ, ಇದುವರೆಗೂ ಆಡಿದ ಐದರಲ್ಲಿ ಎರಡು ಪಂದ್ಯಗಳಲ್ಲಿ ಗೆದ್ದು ಕ್ಯಾಪಿಟಲ್ಸ್ ತಂಡವು ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕು ಅಂಕಗಳನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಇನ್ನೂ ಇಂದು ಆರ್‌ಸಿಬಿ ವಿರುದ್ಧ ಗೆದ್ದು ಆರು ಅಂಕಗಳನ್ನು ಪಡೆದು ಪ್ಲೇಆಫ್ ಸ್ಥಾನ ಉಳಿಸಿಕೊಳ್ಳಲು ಸಕಲ ಸಿದ್ಧತೆ ನಡೆಸಿದೆ.

ಡೆಲ್ಲಿ ತಂಡ ಅವಲಂಬನೆ ಆಗಿರುವುದು ಯಾರ ಮೇಲೆ?: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ನಂತರ, ಡೆಲ್ಲಿ ತಂಡವು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದೆ. ಇದೀಗ ಆರ್‌ಸಿಬಿಯ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಮುಂದಾಗಿದೆ. ಡೆಲ್ಲಿ ತಂಡದ ಬ್ಯಾಟಿಂಗ್ ಬಹುಪಾಲು ಲಿಜೆಲ್ ಲೀ ಅವರ ಮೇಲೆ ಅವಲಂಬಿತವಾಗಿದೆ. ಅವರು ತಂಡದ ಪರ ಉತ್ತಮ ರನ್‌ಗಳನ್ನು ಕಲೆಹಾಕಿರುವ ಬ್ಯಾಟರ್ ಆಗಿದ್ದಾರೆ. ಇನ್ನು ಶಫಾಲಿ ವರ್ಮಾ ಹಾಗೂ ಲಾರಾ ವೋಲ್ವಾರ್ಟ್ ಸಹ ಅದ್ಭತ ಪ್ರದರ್ಶನ ನೀಡಿದ್ದಾರೆ.

ಕಳೆದ ಪಂದ್ಯದಲ್ಲಿ ಜೆಮಿಮಾ ರೋಡ್ರಿಗ್ಸ್ ಅವರು ಅರ್ಧಶತಕದೊಂದಿಗೆ ಫಾರ್ಮ್‌ಗೆ ಮರಳಿರುವುದು ತಂಡದ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ. ಹಾಗೆಯೇ ಇಂದು ಆರ್‌ಸಿಬಿ ವಿರುದ್ಧ ಕೂಡ ಉತ್ತಮ ಆಟ ಆಡಲಿದ್ದಾರೆ ಎಂದು ನಿರೀಕ್ಷೆ ಇಡಲಾಗಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಬೌಲಿಂಗ್‌ ವಿಭಾಗದ್ದೇ ಚಿಂತೆಯಾಗಿದೆ.

ಯುವ ವೇಗದ ಬೌಲರ್ ನಂದಿನಿ ಶರ್ಮಾ ಅವರು ಉತ್ತಮ ಬೌಲಿಂಗ್ ದಾಳಿಯನ್ನು ಮಾಡಲಿದ್ದಾರೆ. ಆದರೆ, ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಹೊಂದಿರುವ ಆರ್‌ಸಿಬಿ ವಿರುದ್ಧ ಸ್ನೇಹ್ ರಾಣಾ, ಶ್ರೀ ಚರಣಿ ಹಾಗೂ ಮರಿಜಾನ್‌ ಕ್ಯಾಪ್ ಸೇರಿದಂತೆ ಉಳಿದ ಬೌಲರ್‌ಗಳಿಂದ ಮತ್ತಷ್ಟು ಅದ್ಭುತ ಪ್ರದರ್ಶನ ತೋರಬೇಕಿದೆ.

ಆರ್‌ಸಿಬಿ ಬ್ಯಾಟಿಂಗ್‌ ಲೈನ್‌ ಅಪ್‌: ಈಗಾಗಲೇ ಪ್ಲೇಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿರುವ ಆರ್‌ಸಿಬಿ ತಂಡದ ಬ್ಯಾಟಿಂಗ್, ಬೌಲಿಂಗ್‌ ಲೈನ್‌ ಅಪ್‌ ಉತ್ತಮವಾಗಿದೆ. ಸ್ಮೃತಿ ಮಂದಾನಾ ಮತ್ತು ಗ್ರೇಸ್ ಹ್ಯಾರಿಸ್ ಸ್ಫೋಟಕ ಆರಂಭ ನೀಡುತ್ತಿದ್ದರೆ, ರಿಚಾ ಘೋಷ್, ನಾಡಿನ್ ಡಿ ಕ್ಲರ್ಕ್ ಹಾಗೂ ಗೌತಮಿ ನಾಯಕ್ ಉತ್ತಮ ಬ್ಯಾಟಿಂಗ್‌ ಮಾಡುವ ಮೂಲಕ ತಂಡಕ್ಕೆ ನೆರವಾಗಿದ್ದಾರೆ.

ಆರ್‌ಸಿಬಿ ಬೌಲಿಂಗ್‌ ಲೈನ್ ಅಪ್: ಆರ್‌ಸಿನಿಯಲ್ಲಿ ಸ್ಪಿನ್‌ ವಿಭಾಗದಲ್ಲಿ ಶ್ರೇಯಾಂಕ ಪಾಟೀಲ್, ರಾಧಾ ಯಾದವ್ ಇದ್ದರೆ, ವೇಗಿಗಳಾಗಿ ಲಾರೆನ್ಸ್‌ ಬೆಲ್‌, ನಾಡಿನ್ ಡಿ ಕ್ಲರ್ಕ್‌, ಅರುಂಧತಿ ರೆಡ್ಡಿ, ಸಯಾಲಿ ಸತ್ಘರೆ ಇದ್ದಾರೆ. ಒಟ್ಟಿನಲ್ಲಿ ಆರ್‌ಸಿಬಿಯಲ್ಲಿ ಬಹುತೇಕ ಆಟಗಾರ್ತಿಯರು ಆಲ್‌ರೌಡರ್‌ಗಳ ಬಳಗವೇ ಇದ್ದು, ಬ್ಯಾಟಿಂಗ್‌, ಬೌಲಿಂಗ್‌ ಲೈನ್‌ ಅಪ್‌ ಉತ್ತಮವಾಗಿದೆ.

ಆರ್‌ಸಿಬಿ ಪ್ಲೇಯಿಂಗ್ 11: ಗ್ರೇಸ್ ಹ್ಯಾರಿಸ್, ಸ್ಮೃತಿ ಮಂಧಾನ (ನಾಯಕಿ), ಜಾರ್ಜಿಯಾ ವೋಲ್, ಗೌತಮಿ ನಾಯಕ್, ರಿಚಾ ಘೋಷ್ (ವಿಕೆಟ್ ಕೀಪರ್), ನಾಡಿನ್ ಡಿ ಕ್ಲರ್ಕ್, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಅರುಂಧತಿ ರೆಡ್ಡಿ, ಸಯಾಲಿ ಸತ್ಘರೆ, ಲಾರೆನ್ಸ್ ಬೆಲ್‌.

ಡೆಲ್ಲಿ ಕ್ಯಾಲಿಟಲ್ಸ್‌ ಪ್ಲೇಯಿಂಗ್‌ 11: ಲಿಜೆಲ್ ಲೀ, ಶಫಾಲಿ ವರ್ಮಾ, ಲಾರಾ ವೊಲ್ವಾರ್ಡ್ಟ್, ಜೆಮಿಮಾ ರಾಡ್ರಿಗಸ್ (ನಾಯಕಿ), ಮರಿಜಾನ್ನೆ ಕಪ್, ನಿಕಿ ಪ್ರಸಾದ್, ಚಿನೆಲ್ಲೆ ಹೆನ್ರಿ, ಸ್ನೇಹ ರಾಣಾ, ಮಿನ್ನು ಮಣಿ, ನಂದಿನಿ ಶರ್ಮಾ, ಶ್ರೀ ಚರಣಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+