Get Updates
Get notified of breaking news, exclusive insights, and must-see stories!

ಶಿವಮೊಗ್ಗ-ಬೆಂಗಳೂರು ಶತಾಬ್ದಿ ರೈಲು ಸಮಯ ಪರಿಷ್ಕರಣೆ

ಶಿವಮೊಗ್ಗ, ಅಕ್ಟೋಬರ್ 13 : ಬೆಂಗಳೂರು-ಶಿವಮೊಗ್ಗ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ. ಇನ್ನು ಮುಂದೆ 4ಗಂಟೆ 20 ನಿಮಿಷದಲ್ಲಿ ರೈಲು ಬೆಂಗಳೂರು ತಲುಪಲಿದ್ದು, ವಾರದಲ್ಲಿ 6 ದಿನ ಸಂಚಾರ ನಡೆಸಲಿದೆ.

ನೈಋತ್ಯ ರೈಲ್ವೆ ಶನಿವಾರ ಆದೇಶ ಈ ಕುರಿತು ಆದೇಶವನ್ನು ಹೊರಡಿಸಿದೆ. ಅಕ್ಟೋಬರ್ 14ರ ಸೋಮವಾರದಿಂದ ಪರಿಷ್ಕರಣೆ ಮಾಡಿದ ಸಮಯದಲ್ಲಿ ರೈಲು ಶಿವಮೊಗ್ಗ-ಬೆಂಗಳೂರು ನಡುವೆ ವಾರದ 6 ದಿನ ರೈಲು ಸಂಚಾರ ನಡೆಸಲಿದೆ.

ಇಷ್ಟು ದಿನ ಜನಶತಾಬ್ದಿ ರೈಲು ವಾರದಲ್ಲಿ 4 ದಿನಗಳು ಮಾತ್ರ ಸಂಚಾರ ನಡೆಸುತ್ತಿತ್ತು. ಸೋಮವಾರಿಂದ 6 ದಿನ ಸಂಚಾರ ನಡೆಸಲಿದ್ದು, ಬೆಂಗಳೂರು-ಶಿವಮೊಗ್ಗ ನಡುವೆ ಸಂಚಾರ ನಡೆಸುವ ಜನರಿಗೆ ಸಹಾಯಕವಾಗಲಿದೆ.

Bengaluru Shivamogga Jan Shatabdi Train Time Changed

ರೈಲಿನ ವೇಳಾಪಟ್ಟಿ : ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಪ್ರತಿದಿನ ಬೆಳಗ್ಗೆ 5.30ಕ್ಕೆ ಶಿವಮೊಗ್ಗದಿಂದ ಹೊರಡಲಿದೆ. 9.50ಕ್ಕೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣವನ್ನು ತಲುಪಲಿದೆ. ಸಂಜೆ 5.30ಕ್ಕೆ ಯಶವಂತಪುರ ರೈಲು ನಿಲ್ದಾಣದಿಂದ ಹೊರಡಲಿದ್ದು, ರಾತ್ರಿ 9.50ಕ್ಕೆ ಶಿವಮೊಗ್ಗವನ್ನು ತಲುಪಲಿದೆ.

ಬೆಂಗಳೂರು-ಶಿವಮೊಗ್ಗ ನಡುವಿನ ಸಂಚಾರಕ್ಕೆ ರೈಲು 4 ಗಂಟೆ 50 ನಿಮಿಷ ತೆಗೆದುಕೊಳ್ಳುತ್ತಿತ್ತು. ಇನ್ನು ಮುಂದೆ 4 ಗಂಟೆ 20 ನಿಮಿಷದಲ್ಲಿ ರೈಲು ಸಂಚಾರ ನಡೆಸಲಿದೆ. ವಾರದ ಆರು ದಿನ (ಮಂಗಳವಾರ ಬಿಟ್ಟು) ಈ ರೈಲು ಸೇವೆ ಲಭ್ಯವಿದೆ.

ರೈಲಿನ ಸಮಯ ಪರಿಷ್ಕರಣೆ ಮಾಡಿರುವುದರಿಂದ ಸಾರ್ವಜನಿಕರು ಬೆಂಗಳೂರಿನ ಕಚೇರಿಗಳಿಗೆ, ವಾಣಿಜ್ಯ ಉದ್ದೇಶಕ್ಕಾಗಿ ತೆರಳಿ ಅದೇ ದಿನ ವಾಪಸ್ಸು ಬರಲು ಸಹಾಯಕವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+