ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆರಾಲ್ಡ್ : ಒಂದಿಷ್ಟು ತಮಾಷೆಯ, ಕೆಣಕುವ ಟ್ವೀಟುಗಳು

By Prasad
|
Google Oneindia Kannada News

ಬೆಂಗಳೂರು, ಡಿಸೆಂಬರ್ 19 : ಇಡೀ ದೇಶದ ಕಣ್ಣು ನವದೆಹಲಿಯಲ್ಲಿರುವ ಪಟಿಯಾಲಾ ಕೋರ್ಟ್ ಮೇಲೆ ನೆಟ್ಟಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹಣ ಗುಳುಂ ಮಾಡಿದ ಆರೋಪ ಹೊತ್ತಿರುವ ನಿಂತಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತಿತರರು ನ್ಯಾಯದೇವತೆಯ ಮುಂದೆ ಶನಿವಾರ ಮಧ್ಯಾಹ್ನ ಹಾಜರಾಗಲಿದ್ದಾರೆ. [ಮೂರೇ ನಿಮಿಷದಲ್ಲಿ ಜಾಮೀನು!]

1937ರ ನವೆಂಬರ್ 20ರಂದು ಜನ್ಮತಾಳಿದ ಅಸೋಸಿಯೇಟೆಡ್ ಜರ್ನಲ್ಸ್ ಲಿ. ಮಾಲಿಕತ್ವದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸೇರಿದ ಹಣವನ್ನು (1,600ರಿಂದ 5,000 ಕೋಟಿ ರು. ಮೌಲ್ಯ) ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ 2012ರ ನವೆಂಬರ್ 1ರಂದು ಖಾಸಗಿ ದೂರು ಸಲ್ಲಿಸಿದ್ದರು.

ಜವಾಹರಲಾಲ್ ನೆಹರೂ ಕನಸಿನ ಪತ್ರಿಕೆ ಸಾಲದ ಸುಳಿಗೆ ಸಿಲುಕಿದಾಗ, ಸೋನಿಯಾ ಮತ್ತು ರಾಹುಲ್ ಮಾಲಿಕತ್ವಕ್ಕೆ ಸೇರಿದ ಯಂಗ್ ಇಂಡಿಯನ್ ಕಂಪನಿ ಪತ್ರಿಕೆಗೆ ಸಾಲ ನೀಡಿದ್ದಲ್ಲದೆ, ಕೋಟ್ಯಂತರ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಮೊಕದ್ದಮೆ ಹೂಡಲಾಗಿದೆ. ಇದೇ ಪ್ರಕರಣದಲ್ಲಿ ಈಗ ಸೋನಿಯಾ ಮತ್ತಿತರರು ಕಟಕಟೆಯಲ್ಲಿ ನಿಲ್ಲಬೇಕಾಗಿದೆ. [ಸೋನಿಯಾ, ರಾಹುಲ್ ಗೆ ಜೈಲೋ.. ಜಾಮೀನೋ?]

ಇದು ಪ್ರಕರಣದ ಸಂಕ್ಷಿಪ್ತ ರೂಪವಾದರೆ, ಇದಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ನಲ್ಲಿ ಪರ-ವಿರೋಧ ಭಾರೀ ಚರ್ಚೆಗಳು ನಡೆಯುತ್ತಿವೆ. ಕೆಲವರು ಯಾರ್ಯಾರನ್ನೋ ಎಳೆತಂದು ತಮಾಷೆ ಮಾಡುತ್ತಿದ್ದಾರೆ. ಒಂದಿಷ್ಟು ತಮಾಷೆಯ, ಒಂದಿಷ್ಟು ಕೆಣಕುವ, ಒಂದಿಷ್ಟು ಕಿಡಿ ಹತ್ತಿಸುವ ಟ್ವೀಟುಗಳು ಇಲ್ಲಿವೆ. [ಕಾಂಗ್ರೆಸ್ ಬುಡ ಅಲ್ಲಾಡಿಸುತ್ತಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣ]

ನೋಡು ಮಮ್ಮೀ ಅಂಥಾದ್ದೇನೂ ಆಗಲ್ಲ

ನೋಡು ಮಮ್ಮೀ ಅಂಥಾದ್ದೇನೂ ಆಗಲ್ಲ

ನೋಡು ಮಮ್ಮೀ ಚಿಂತೆ ಮಾಡಬೇಡ ಅಂಥಾದ್ದೇನೂ ಆಗಲ್ಲ. ಇದೆಲ್ಲಕ್ಕೂ ನರೇಂದ್ರ ಮೋದಿಯವರೇ ಕಾರಣ... ಸುಬ್ರಮಣಿಯನ್ ಸ್ವಾಮಿ ಕೇವಲ ದಾಳ ಅಷ್ಟೇ.

ರಾಹುಲ್ ಪರಿಸ್ಥಿತಿ ಎದುರಿಸುವುದು ಒಂದೇ ರೀತಿ

ಕಾಂಗ್ರೆಸ್‌ಗೆ ಅಚ್ಛೇ ದಿನ ಬಂದಾಗ ರಾಹುಲ್‌ದು ಈ ಪೋಸು, ಕಾಂಗ್ರಸ್‌ಗೆ ಬುರೇ ದಿನ ಬಂದಾಗ ರಾಹುಲ್ ಅವರದು ಎರಡನೇ ಪೋಸು!

ಕೇಜ್ರಿವಾಲ್ ಕಿವಿಯಲ್ಲಿ ಸಿಸೋಡಿಯಾ

ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಸೋನಿಯಾ, ರಾಹುಲ್ ಹಾಜರಾಗಬೇಕೆಂದು ಕೋರ್ಟ್ ಹೇಳಿರುವುದನ್ನು ಸಿಸೋಡಿಯಾ ಹೇಳುತ್ತಿದ್ದಾಗ ಕೇಜ್ರಿವಾಲ್ ಅವರಿದ್ದ ಸ್ಥಿತಿ!

ಅಮ್ಮಾ ನೋಡಲ್ಲಿ ಯಾರು ಬರ್ತಿದ್ದಾರೆ

ಅಮ್ಮಾ ನೋಡಲ್ಲಿ ಸುಬ್ರಮಣಿಯನ್ ಸ್ವಾಮಿ ಅಂಕಲ್ ಬರ್ತಿದ್ದಾರೆ. ಅವರಿಗೆ ಈಗಲೇ ಸಾರಿ ಹೇಳಿಬಿಡೋಣ, ಏನಂತೀ?

ಪಟಿಯಾಲಾ ಕೋರ್ಟ್ ಮುಂದೆ

ಪಟಿಯಾಲಾ ಕೋರ್ಟ್ ಮುಂದೆ ಮಧ್ಯಾಹ್ನದ ನಂತರ ಈ ದೃಶ್ಯ ಕಂಡರೂ ಅಚ್ಚರಿಯಿಲ್ಲ ಅಂತಾರೆ ಟ್ವಿಟ್ಟಿಗರೊಬ್ಬರು.

ಕೋರ್ಟ್ ಇಂದಿರಾ ಆಸ್ತಿಯಲ್ಲ!

ಸೋನಿಯಾ ಗಾಂಧಿ : ನಾನು ಇಂದಿರಾ ಗಾಂಧಿ ಸೊಸೆ.

ಭಾರತೀಯ : ಕೋರ್ಟ್ ಇಂದಿರಾ ಗಾಂಧಿ ಆಸ್ತಿಯಲ್ಲ!

ಶ್ರೀಮಂತವಿದ್ದ ಭಾರತ ಇಂದು ಬಡ ಭಾರತ

ಶ್ರೀಮಂತ ರಾಷ್ಟ್ರವಿದ್ದ ಭಾರತ ಇಂದು ಕಾಂಗ್ರೆಸ್ಸಿನಿಂದಾಗಿ ಬಡ ಭಾರತವಾಗಿದೆ. ಇಂಥ ಪಕ್ಷಗಳನ್ನು ನಿಷೇಧಿಸಬೇಕು. ಈ ಪಕ್ಷ ಈಗಾಗಲೆ ಸಾಕಷ್ಟು ಅನಾಹುತ ಮಾಡಿದೆ.

ಒಂದೇ ಬದಿಯ ಸುದ್ದಿ ತೋರಿಸಬೇಡಿ

ಕೇವಲ ಒಂದು ಬದಿಯ ಸುದ್ದಿ ಮಾತ್ರ ತೋರಿಸಬೇಡಿ. ಅರುಣ್ ಜೇಟ್ಲಿ ಅವರ ಕುರಿತೂ ಸುದ್ದಿ ತೋರಿಸಿ... ಜೀ ನ್ಯೂಸ್... ನಾನು ಸೋನಿಯಾ, ರಾಹುಲ್ ಅವರನ್ನು ಬೆಂಬಲಿಸುತ್ತೇನೆ.

ಸೋನಿಯಾ ಬಗ್ಗೆ ಮಾತೇ ಇಲ್ಲ ಕೇಜ್ರಿವಾಲಾಜಿ

ಅರವಿಂದ್ ಕೇಜ್ರಿವಾಲಾ ಅವರೆ, ನ್ಯಾಷನಲ್ ಹೆರಾಲ್ಡ್ ಕೇಸು ದೆಹಲಿಯಲ್ಲಿಯೇ ನಡೆಯುತ್ತಿದೆ. ಆದರೂ ಸೋನಿಯಾ-ರಾಹುಲ್ ಭ್ರಷ್ಟಾಚಾರದ ಬಗ್ಗೆ ಏಕೆ ಒಂದೂ ಮಾತಾಡಿಲ್ಲ?

ವುಮನ್ ಎಂಪಾವರ್ಮೆಂಟ್ ಅಂತ ಮಾತಾಡಬೇಡ

ರಾಹುಲ್‌ಗೆ ಸೋನಿಯಾ : ನ್ಯಾಯಾಧೀಶರ ಮುಂದೆ ಹೋಗಿ ಮಹಿಳಾ ಸಬಲೀಕರಣ ಅಂತೆಲ್ಲ ಮಾತಾಡಬೇಡ, ದೊಡ್ಡವರು ಹೆಚ್ಚು ಮಾತಾಡಲಿ!

ನನ್ನ ಗುರಿ ಭ್ರಷ್ಟಾಚಾರ ಕಿತ್ತೊಗೆಯುವುದಲ್ಲ

ನನ್ನ ಗುರಿ ಬರೀ ಭ್ರಷ್ಟಾಚಾರ ಕಿತ್ತೊಗೆಯುವುದಲ್ಲ. ಸಾಮಾನ್ಯ ನಾಗರಿಕರಲ್ಲಿ ಧೈರ್ಯ ತುಂಬುವುದು ಮತ್ತು ಆ ಭಗವಂತನ ಬಗ್ಗೆ ಭಯ ತುಂಬುವುದು ಕೂಡ ನನ್ನ ಗುರಿ - ಸುಬ್ರಮಣಿಯನ್ ಸ್ವಾಮಿ.

ಸತೀಶ್ ಆಚಾರ್ಯ ಅವರ ವ್ಯಂಗ್ಯಚಿತ್ರ

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂದೆ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರು ರಚಿಸಿರುವ ವ್ಯಂಗ್ಯಚಿತ್ರ

English summary
National Herald case has caught the eyes of entire nation. Sonia Gandhi and Rahul Gandhi along with other accused will be appearing before trial court in the case filed by Subramanian Swamy in 2012. He has alleged that Gandhi family has misused the public fund through their company Young Indian. Here are some funny and thought provoking tweets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X