ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು-ಹುಬ್ಬಳ್ಳಿ ರೈಲು ಸಂಚಾರಕ್ಕೆ ಮೇ 23ಕ್ಕೆ ಚಾಲನೆ

ಹುಬ್ಬಳ್ಳಿ-ಮೈಸೂರು ರೈಲು ಸಂಚಾರಕ್ಕೆ ರೈಲ್ವೆ ಸಚಿವ ಸುರೇಶ್ ಪ್ರಭು ಮಂಗಳವಾರ ಚಾಲನೆ ನೀಡಲಿದ್ದಾರೆ. ಈ ಮಾರ್ಗದ ರೈಲಿನ ಬಗ್ಗೆ ಮತ್ತಷ್ಟು ಮಾಹಿತಿ ವರದಿಯಲ್ಲಿದೆ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 23: ಮೈಸೂರು ಹಾಗೂ ಹುಬ್ಬಳ್ಳಿ (ಬೆಂಗಳೂರು ಮಾರ್ಗವಾಗಿ) ಹೊಸ ರೈಲು ಸೇವೆಗೆ ರೈಲ್ವೆ ಸಚಿವ ಸುರೇಶ್ ಪ್ರಭು ಮಂಗಳವಾರ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ನವದೆಹಲಿಯಲ್ಲಿ ವಿಡಿಯೋ ಲಿಂಕ್ ಮೂಲಕ ಅವರು ಹಸಿರು ನಿಶಾನೆ ತೋರುತ್ತಾರೆ.

ಹುಬ್ಬಳ್ಳಿ ಮೈಸೂರು-ಹುಬ್ಬಳ್ಳಿ ಡೈಲಿ ಎಕ್ಸ್ ಪ್ರೆಸ್ (17325) ರೈಲು ಮೇ 24ರಂದು ಬೆಳಗ್ಗೆ 8ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತದೆ. ಬೆಂಗಳೂರಿಗೆ ಸಂಜೆ 5.40ಕ್ಕೆ ತಲುಪುತ್ತದೆ. ಇಲ್ಲಿಂದ 5.45ಕ್ಕೆ ಹೊರಡುವ ರೈಲು ರಾತ್ರಿ 8.40ಕ್ಕೆ ಮೈಸೂರು ಸೇರುತ್ತದೆ.[ಹುಬ್ಬಳ್ಳಿ- ವಾರಣಾಸಿ ಮಧ್ಯೆ ಮೇ 28ರಿಂದ ರೈಲು ಸಂಚಾರ]

Mysuru-Hubballi train service starts from May 23rd

ಇನ್ನು ಮೈಸೂರಿನಿಂದ ಹೊರಡುವ ರೈಲು (17326) ಬೆಳಗ್ಗೆ 6.15ಕ್ಕೆ ಹೊರಟು 9.10ಕ್ಕೆ ಬೆಂಗಳೂರು ತಲುಪುತ್ತದೆ. ಇಲ್ಲಿಂದ ಬೆಳಗ್ಗೆ 9.15ಕ್ಕೆ ಬಿಟ್ಟು ರಾತ್ರಿ 7.05ಕ್ಕೆ ಹುಬ್ಬಳ್ಳಿಯನ್ನು ತಲುಪುತ್ತದೆ. ಅಂದಹಾಗೆ ಈ ರೈಲು ಶ್ರೀರಂಗಪಟ್ಟಣ, ಪಾಂಡವಪುರ , ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ, ಕೆಂಗೇರಿ, ಬೆಂಗಳೂರು,[ಮೈಸೂರು-ಹುಬ್ಬಳ್ಳಿ ರೈಲಿಗೊಂದು ಹೆಸರು ಹೇಳ್ರೀ....]

ಯಶವಂತಪುರ, ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ಅಜ್ಜಂಪುರ, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಬ್ಯಾಡಗಿ, ಹಾವೇರಿ ಮತ್ತು ಯಲವಾಗಿ ಮಾರ್ಗವಾಗಿ ಸಂಚಾರ ನಡೆಸುತ್ತದೆ.

English summary
Mysuru-Hubballi train service to be inaugurate on Tuesday (May 23) 3 PM by railway minister Suresh Prabhu from Delhi, through video link.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X