ಮಹಾರಾಷ್ಟ್ರದಲ್ಲಿ ದೇವೇಂದ್ರನ ರಾಜ್ಯಭಾರ ಆರಂಭ
ಮುಂಬೈ, ಅ.31: ವಾಂಖೆಡೆ ಸ್ಟೇಡಿಯಂನಲ್ಲಿ ಕೇಸರಿ ರಂಗು ಚೆಲ್ಲಿದ್ದು, ಎಲ್ಲೆಡೆ ನರೇಂದ್ರ ದೇವೇಂದ್ರ ಜಯಘೋಷಗಳು ಮೊಳಗಿವೆ.ಭಾರತೀಯ ಜನತಾ ಪಕ್ಷ ಮಹಾರಾಷ್ಟ್ರದ ದಿಗ್ವಿಜಯವನ್ನು ಇಂದು ಭರ್ಜರಿಯಾಗಿ ಆಚರಿಸಿಕೊಂಡಿದೆ. ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಿ ಶುಕ್ರವಾರ ಸಂಜೆ ಸುಮಾರು 40 ಸಾವಿರಕ್ಕೂ ಅಧಿಕ ಗಣ್ಯರ ಉಪಸ್ಥಿತಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನಾಗಪುರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ದೇವೇಂದ್ರ ಗಂಗಾಧರರಾವ್ ಫಡ್ನವೀಸ್ ಅವರು ಮಹಾರಾಷ್ಟ್ರದ 27ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಿಎಂ ಸ್ಥಾನ ಪಡೆದ 18ನೇ ವ್ಯಕ್ತಿ ಹಾಗೂ ವಿದರ್ಭ ಪ್ರಾಂತ್ಯದ ನಾಲ್ಕನೇ ರಾಜಕಾರಣಿಯಾಗಿದ್ದಾರೆ. 44 ವರ್ಷ ವಯಸ್ಸಿನ ದೇವೇಂದ್ರ ಅವರು ಮಹಾರಾಷ್ಟ್ರದ ಎರಡನೇ ಅತ್ಯಂತ ಕಿರಿಯ ಸಿಎಂ ಎನಿಸಿದ್ದಾರೆ. [ದೇವೇಂದ್ರ ಫಡ್ನವೀಸ್ ವ್ಯಕ್ತಿ ಚಿತ್ರ ಓದಿ]
Mumbai: Devendra Fadnavis takes oath as the Chief Minister of Maharashtra pic.twitter.com/FKyA1uPv3X
— ANI (@ANI_news) October 31, 2014 ಬಾಲಿವುಡ್ ನ ಖ್ಯಾತ ವಿನ್ಯಾಸಗಾರ ನಿತಿನ್ ದೇಸಾಯಿ ಹಾಗೂ ರವಿ ಸಾವ್ಲ ಅವರ ವಿನ್ಯಾಸದ ಸುಂದರ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಗಣ್ಯಾತಿಗಣ್ಯ ನಾಯಕರು, ಬಾಲಿವುಡ್ ತಾರೆಯರು, ಉದ್ಯಮಿಗಳು ಪಾಲ್ಗೊಂಡಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ ಅವರು ಸಮಾರಂಭಕ್ಕೆ ಆಗಮಿಸಿ ದೇವೇಂದ್ರ ಅವರಿಗೆ ಶುಭ ಕೋರಿದರು. ಸಮಾರಂಭಕ್ಕೆ ಯಾರೆಲ್ಲ ಬಂದಿದ್ದರು? ಯಾರೆಲ್ಲ ಕ್ಯಾಬಿನೆಟ್ ಸೇರಿದರು ಎಂಬ ವಿವರ ಮುಂದಿದೆ...

ನಾಗಾಪುರ ಮೂಲದ ದೇವೇಂದ್ರ ಫಡ್ನವೀಸ್
ಮಧ್ಯಮ ವರ್ಗದ ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ(1970, ಜುಲೈ 22) ದೇವೇಂದ್ರ ಗಂಗಾಧರ ರಾವ್ ಫಡ್ನವೀಸ್ ಅವರು ಸತಾರಾ ಮೂಲದವರು. ಪೇಶ್ವೆಗಳ ಆಳ್ವಿಕೆ ಕಾಲದಲ್ಲಿ ಇವರ ಕುಟುಂಬಕ್ಕೆ ಗ್ರಾಮವೊಂದರ ಉಸ್ತುವಾರಿಕೆ ಲಭಿಸಿತ್ತು. ಈಗ ದೇವೇಂದ್ರ ಅವರಿಗೆ ರಾಜ್ಯವನ್ನು ಮುನ್ನಡೆಸುವ ಜವಾಬ್ದಾರಿ ಸಿಕ್ಕಿದೆ. ಛತ್ರಪತಿ ಶಿವಾಜಿ, ಬಿ.ಆರ್ ಅಂಬೇಡ್ಕರ್ ಅವರ ಸಿದ್ಧಾಂತದಂತೆ ರಾಜ್ಯಭಾರ ಮಾಡುವುದಾಗಿ ದೇವೇಂದ್ರ ಹೇಳಿದ್ದಾರೆ

ಕ್ಯಾಬಿನೆಟ್ ಸೇರಿದ ಪಂಕಜಾ ಮುಂಡೆ
ಮಹಾರಾಷ್ಟ್ರ ಮುಖ್ಯಮಂತ್ರಿ ರೇಸ್‌ನಲ್ಲಿ ಪ್ರಮುಖವಾಗಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ದೇವೇಂದ್ರ ಫಡ್ನವೀಸ್(44) ಮತ್ತು ದಿ.ಗೋಪಿನಾಥ್ ಮುಂಡೆ ಅವರ ಮಗಳಾದ ಪಂಕಜಾ ಮುಂಡೆ ಅವರ ಹೆಸರುಗಳ ಬಲವಾಗಿ ಕೇಳಿ ಬಂದಿತ್ತು. ಇವರಷ್ಟೇ ಅಲ್ಲದೇ ಪಕ್ಷ ಹಿರಿಯ ಮುಖಂಡರಾದ ಏಕನಾಥ್ ಖಡ್ಸೆ ಮತ್ತು ವಿನೋದ್ ತಾವ್ಡೆ ಅವರ ಹೆಸರು ಕೂಡ ಸಿಎಂ ರೇಸ್‌ನಲ್ಲಿದ್ದರು

ಪ್ರಮಾಣ ವಚನ ಸ್ವೀಕರಿಸಿದವರು
* ಏಕನಾಥ್ ಖಾಡ್ಸೆ
* ಸುಧೀರ್ ಮುಂಗತಿವಾರ್
*ವಿನೋದ್ ತಾವ್ಡೆ (ಚಿತ್ರದಲ್ಲಿ)
* ಪಂಕಜಾ ಮುಂಡೆ
* ಪ್ರಕಾಶ್ ಮೆಹ್ತಾ
* ವಿಷ್ಣು ಸಾವ್ರಾ
* ಚಂದ್ರಕಾಂತ್ ಪಾಟೀಲ್
* ದಿಲೀಪ್ ಕಾಂಬ್ಳೆ (ರಾಜ್ಯ ಸಚಿವರು)
* ವಿದ್ಯಾ ಠಾಕೂರ್ (ರಾಜ್ಯ ಸಚಿವರು)
|
ಗುರು ಶಿಷ್ಯರ ಸಮಾಗಮಕ್ಕೆ ವೇದಿಕೆ
ದೇವೇಂದ್ರ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಗುರು ಶಿಷ್ಯರ ಸಮಾಗಮಕ್ಕೆ ವೇದಿಕೆಯಾಯಿತು. ಎಲ್ ಕೆ ಅಡ್ವಾಣಿ ಹಾಗೂ ನರೇಂದ್ರ ಮೋದಿ, ನಿತಿನ್ ಗಡ್ಕರಿ ಹಾಗೂ ದೇವೇಂದ್ರ ಫಡ್ನವೀಸ್ ಸಂತಸದ ಕ್ಷಣದಲ್ಲಿ ಭಾಗಿಯಾಗಿದ್ದರು.
|
ಉದ್ಧವ್ ಠಾಕ್ರೆ ಸಮಾರಂಭಕ್ಕೆ ಆಗಮನ
ದೇವೇಂದ್ರ ಫಡ್ನವೀಸ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬೆಳಗ್ಗೆಯಿನ್ನೂ ಶಿವಸೇನಾದ ಮುಖವಾಣಿಯಲ್ಲಿ ಬರೆದುಕೊಂಡಿದ್ದ ಉದ್ದವ್ ಠಾಕ್ರೆ ಅವರು ವೇದಿಕೆ ಏರಿ ಗುಮ್ಮನಂತೆ ಕುಳಿತ್ತಿದ್ದು ಎದ್ದು ಕಾಣುತ್ತಿತ್ತು.

ಸಿನಿಮಾ ಮಂದಿ ಯಾರು ಬಂದಿದ್ರು?
ಅಮಿತಾಬ್ ಬಚ್ಚನ್, ಸೋನಾಕ್ಷಿ ಸಿನ್ಹಾ, ಹೃತಿಕ್ ರೋಷನ್, ವಿವೇಕ್ ಒಬೆರಾಯ್, ಮಧುರ್ ಭಂಡರ್ಕಾರ್, ವಿವೇಕ್ ಒಬೆರಾಯ್ ಸೇರಿದಂತೆ ಹಲವಾರು ಬಾಲಿವುಡ್ ಹಾಗೂ ಕಿರುತೆರೆ ನಟ ನಟಿಯರು ಆಗಮಿಸಿದ್ದರು.
|
ಮುಖ್ಯಮಂತ್ರಿಗಳು, ಇತರೆ ರಾಜಕಾರಣಿಗಳು
ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ಗೋವಾದ ಮನೋಹರ್ ಪಾರಿಕ್ಕರ್, ಶಿವರಾಜ್ ಸಿಂಗ್ ಚೌಹಾಣ್, ಪ್ರಕಾಶ್ ಸಿಂಗ್ ಬದಾಲ್, ವಸುಂಧರಾ ರಾಜೇ
|
ಸಮಾರಂಭದಲ್ಲಿ ಉದ್ಯಮಿಗಳು, ಕ್ರಿಕೆಟರ್ಸ್
ಮಾಜಿ ಕ್ರಿಕೆಟರ್ಸ್ ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್ ಸರ್ಕಾರ್, ಹಾಕಿ ಪಟು ಧನರಾಜ್ ಪಿಳ್ಳೈ, ಉದ್ಯಮಿಗಳಾದ ಗೌತಮ್ ಅದಾನಿ, ಕುಮಾರ್ ಮಂಗಳಂ ಬಿರ್ಲಾ, ರಾಜಶ್ರೀ ಬಿರ್ಲಾ, ನಿರಂಜನ್ ಹಿರಾನಂದನಿ, ಬಿಕೆ ಗೋಯಿಂಕಾ
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications