ಜೈಪುರ, ಸೂರತ್‌ಗೆ ಕೆಎಸ್ಆರ್‌ಟಿಸಿ ಸ್ಲೀಪರ್ ಬಸ್ ಸೇವೆ

Posted By: Gururaj
Subscribe to Oneindia Kannada

ಬೆಂಗಳೂರು, ಆ.09 : ಜೈಪುರ ಮತ್ತು ಸೂರತ್‌ಗೆ ಕೆಎಸ್ಆರ್‌ಟಿಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಲು ಉದ್ದೇಶಿಸಿದೆ. ರಾಜಸ್ಥಾನ ಮತ್ತು ಗುಜರಾತ್ ಸರ್ಕಾರಗಳ ಜೊತೆ ಈ ಕುರಿತು ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ.

ಕರ್ನಾಟಕ-ಕೇರಳ ಮಧ್ಯೆ 5 ನೂತನ ಮಾರ್ಗಗಳಲ್ಲಿ ಬಸ್ ಸಂಚಾರ

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಲವು ದಿನಗಳ ಹಿಂದೆ ಪತ್ರ ಬರೆದಿದ್ದರು. ಜೈಪುರಕ್ಕೆ ಕೆಎಸ್ಆರ್‌ಟಿಸಿ ಸ್ಲೀಪರ್ ಬಸ್ ಸೇವೆ ಆರಂಭಿಸಿದರೆ ಸಹಾಯಕವಾಗಲಿದೆ ಎಂದು ಮನವಿ ಮಾಡಿದ್ದರು.

KSRTC to starts bus services to Jaipur, Surat soon

'ಬೆಂಗಳೂರಿನಲ್ಲಿ ರಾಜಸ್ಥಾನಿಯರು ಇದ್ದಾರೆ. ರಾಜಸ್ಥಾನಿ ಕರ್ನಾಟಕ ಸಂಘದ ಪದಾಧಿಕಾರಿಗಳು ಬಸ್ ಸೇವೆ ಆರಂಭಿಸಿದರೆ ಅನುಕೂಲವಾಗಲಿದೆ' ಎಂದು ಹೇಳಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದರು. ಈ ಪತ್ರಕ್ಕೆ ಉತ್ತರ ಬರೆದಿರುವ ಸಿದ್ದರಾಮಯ್ಯ ಬಸ್ ಸೇವೆ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ವೈರಲ್ ಆಯ್ತು ಮೈಸೂರಿನಲ್ಲಿ ನಡೆದ ಆ ಅಪಘಾತದ ದೃಶ್ಯ

ಜೈಪುರ ಮತ್ತು ಗುಜರಾತ್ ರಾಜ್ಯದ ಸೂರತ್ ಗೆ ಬಸ್ಸುಗಳು ಮಹಾರಾಷ್ಟ್ರ ಮೂಲಕ ಸಾಗಬೇಕಿದೆ. 2008ರಲ್ಲಿ ನಡೆದಿರುವ ಒಪ್ಪಂದದಂತೆ ಮಹಾರಾಷ್ಟ್ರ 59 ಬಸ್ಸುಗಳ ಸಂಚಾರಕ್ಕೆ ಅನುಮತಿ ಕೊಟ್ಟಿತ್ತು. ಸದ್ಯ, ಅಲ್ಲಿನ ಸಾರಿಗೆ ಇಲಾಖೆ ಜೊತೆ ಸತತ ಸಭೆ ನಡೆಸಿ ಹೊಸ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.

ಕೆಎಸ್ ಆರ್ ಟಿಸಿಗೆ ಮತ್ತೆ ಅಂತಾರಾಷ್ಟ್ರೀಯ ಪ್ರಶಸ್ತಿಯ ಗರಿ

ಈ ಒಪ್ಪಂದದ ಪ್ರಕಾರ ಹೆಚ್ಚಿನ ಬಸ್ಸುಗಳ ಸಂಚಾರಕ್ಕೆ ಅವಕಾಶ ಸಿಗಲಿದೆ. ಇದರಿಂದ, ಕೆಎಸ್ಆರ್‌ಟಿಸಿ ಜೈಪುರ ಮತ್ತು ಸೂರತ್‌ಗೆ ಸ್ಲೀಪರ್ ಬಸ್ ಸೇವೆ ಆರಂಭಿಸಲು ಹಾದಿ ಸುಗಮವಾಗಿದೆ. ಕೆಲವೇ ದಿನಗಳಲ್ಲಿ ಬಸ್ ಸೇವೆ ಆರಂಭವಾಗುವ ನಿರೀಕ್ಷೆ ಇದೆ.

ಸದ್ಯ ಕೆಎಸ್ಆರ್‌ಟಿಸಿಯ 437 ಬಸ್ಸುಗಳು ತಮಿಳುನಾಡಿಗೆ, 337 ಬಸ್ಸುಗಳು ಆಂಧ್ರಪ್ರದೇಶಕ್ಕೆ, 173 ಬಸ್ಸುಗಳು ಕೇರಳಕ್ಕೆ, 29 ಬಸ್ಸುಗಳು ಗೋವಾಕ್ಕೆ ಸೇರಿದಂತೆ ವಿವಿಧ ರಾಜ್ಯಗಳಿಗೆ ಸಂಚಾರ ನಡೆಸುತ್ತಿವೆ.

KSRTC Has Increased Its Service By Providing More Buses | Oneindia Kannada

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka State Road Transport Corporation will start sleeper bus service to Jaipur, Surat city soon.
Please Wait while comments are loading...