ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಹೀರಾತಲ್ಲಿ ಪದ ಕೈ ಬಿಟ್ಟು ವಿವಾದಕ್ಕೆ ಸಿಲುಕಿದ ಕೇಂದ್ರ

|
Google Oneindia Kannada News

ನವದೆಹಲಿ, ಜ, 29: ಗಣರಾಜ್ಯೋತ್ಸವ ಜಾಹೀರಾತು ನೀಡಿಕೆ ವೇಳೆ ಕೆಲವೊಂದು ಪದಗಳು ಬಿಟ್ಟು ಹೋಗಿರುವುದು ಕೇಂದ್ರ ಸರ್ಕಾರ ವಿವಾದಕ್ಕೆ ಸಿಲುಕುವಂತೆ ಮಾಡಿದೆ. ಸಂವಿಧಾನದ ಪೀಠೀಕೆಯನ್ನು ಬಳಸಿಕೊಂಡು ವಿವಿಧ ಪತ್ರಿಕೆಗಳಿಗೆ ನೀಡಿದ್ದ ಜಾಹೀರಾತಿನಲ್ಲಿ ಸಮಾಜವಾದಿ ಮತ್ತು ಜಾತ್ಯತೀತ ಪದಗಳು ಬಿಟ್ಟು ಹೋಗಿರುವುದು ಗೊಂದಲಕ್ಕೆ ದಾರಿ ಮಾಡಿದೆ.

ವಿವಿಧ ವೇಷ ಧರಿಸಿದ ಪುರುಷ- ಮಹಿಳೆಯರ ಹಿಂಬದಿಯಲ್ಲಿ ಸಂವಿಧಾನದ ಪೀಠಿಕೆ ಇರುವಂತೆ ಜಾಹೀರಾತು ವಿನ್ಯಾಸಗೊಳಿಸಿ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ನೀಡಿತ್ತು. 'ನಾವು, ಭಾರತದ ಜನರು, ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಭಾರತವನ್ನು ರಚಿಸಲು ವಿಧಿವತ್ತಾಗಿ ನಿರ್ಣಯ ಕೈಗೊಂಡಿದ್ದೇವೆ' ಎಂಬ ಸಾಲುಗಳು ಪೀಠಿಕೆಯಲ್ಲಿದ್ದವು.[ಏನಿದು ಕಣಿವೆ ರಾಜ್ಯವನ್ನು ಕಾಡುತ್ತಿರುವ 370ನೇ ವಿಧಿ?]

india

1976ರಲ್ಲಿ ಸಂವಿಧಾನಕ್ಕೆ ತಿದ್ದುಪಡಿತಂದ ನಂತರ, 'ನಾವು, ಭಾರತದ ಜನರು, ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣತಂತ್ರ ರಚನೆಗೆ ವಿಧಿವತ್ತಾಗಿ ನಿರ್ಣಯ ಕೈಗೊಂಡಿದ್ದೇವೆ' ಎಂಬ ಸಾಲುಗಳನ್ನು ಅಳವಡಿಸಲಾಗಿದೆ. ಜಾಹೀರಾತಿನಲ್ಲಿ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಕೈ ಬಿಡಲಾಗಿದೆ.

ಕೇಂದ್ರ ಸರ್ಕಾರ ಈ ಬಗ್ಗೆ ವಿವರಣೆ ನೀಡಬೇಕು. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ನಾಯಕ ಮನೀಶ್‌ ತಿವಾರಿ ಆಗ್ರಹಿಸಿದ್ದಾರೆ. ಹೋರಾಟಗಾರ್ತಿ ಕವಿತಾ ಕೃಷ್ಣನ್‌ ಅವರು ಸರ್ಕಾರದ ತಪ್ಪಿನ ವಿರುದ್ಧ ಸಹಿ ಸಂಗ್ರಹ ಚಳವಳಿ ಆರಂಭಿಸಿದ್ದಾರೆ.[ಅಸಂಬದ್ಧ ಕಾನೂನುಗಳಿಗೆ ಮಾಡಲೇಬೇಕಿದೆ ತಿದ್ದುಪಡಿ]

ಆದರೆ ಜಾಹೀರಾತನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದ್ದು ಮೂಲ ಪೀಠಿಕೆಗೆ ಜಾಹೀರಾತಿನ ಮೂಲಕ ಗೌರವ ಸೂಚಿಸಲಾಗಿದೆ ಎಂದು ತಿಳಿಸಿದೆ. ಒಟ್ಟಿನಲ್ಲಿ ಜಾಹೀರಾತು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ.

English summary
A furore has been created by media and political parties over the advertisement issued by the Information and Broadcasting Ministry on the Republic Day. Suddenly we see a controversy being created where none exists in the first place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X