ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತಕ್ಕಿಂತ ಹೆಚ್ಚು ಹಳೇ ನೋಟು ಇಟ್ಟುಕೊಂಡವರಿಗೆ ದಂಡ

ಹಳೇ ನೋಟುಗಳನ್ನಿಟ್ಟುಕೊಂಡವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಈಗಾಗಲೇ ಕೇಂದ್ರ ಸರ್ಕಾರ ಎಚ್ಚರಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ಕಾನೂನು ತರಲು ಮುನ್ನಡೆದಿದೆ.

|
Google Oneindia Kannada News

ನವದೆಹಲಿ, ಫೆಬ್ರವರಿ 4: ಕೆಲ ದಿನಗಳ ಹಿಂದಷ್ಟೇ ನಿಷೇಧಗೊಂಡಿರುವ 500 ಹಾಗೂ 1000 ರು.ಗಳನ್ನು ಇಟ್ಟುಕೊಂಡವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದ ಕೇಂದ್ರ ಸರ್ಕಾರದ ಆ ನಿಟ್ಟಿನಲ್ಲಿ ಕಾನೂನನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ.

ಅದರಂತೆ, ನಿಷೇಧಕ್ಕೊಳಗಾಗಿರುವ ನೋಟುಗಳನ್ನು ಹತ್ತಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಇಟ್ಟುಕೊಂಡವರು ಕಾನೂನು ಕ್ರಮ ವ್ಯಾಪ್ತಿಗೆ ಒಳಪಡಲಿದ್ದಾರೆಂದು ಕೇಂದ್ರ ಸರ್ಕಾರ ಹೇಳಿದೆ.

Rs. 10,000 fine to those who still holds banned notes

ಇದಕ್ಕಾಗಿ ಮಸೂದೆಯೊಂದನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಅದನ್ನು ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ. ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಮಸೂದೆಗೆ ಅಂಗೀಕಾರ ಸಿಕ್ಕಕೂಡಲೇ ಅದನ್ನು ಕಾನೂನಾತ್ಮಕವಾಗಿ ಜಾರಿಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ.

ಇದಲ್ಲದೆ, ಅಪನಗದೀಕರಣದ ನಂತರ, ನವೆಂಬರ್ 9ರಿಂದ ಡಿಸೆಂಬರ್ 30ರೊಳಗೆ ತಮ್ಮ ಹಣದ ಬಗ್ಗೆ ತಪ್ಪು ಘೋಷಣೆ ಮಾಡಿರುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿರುವ ಕೇಂದ್ರ ಅಂಥವರಿಗೆ 50,000 ರು. ದಂಡ ವಿಧಿಸುವ ಅಂಶವನ್ನೂ ಮಸೂದೆಯಲ್ಲಿ ಸೇರ್ಪಡೆಗೊಳಿಸಿದೆ.

English summary
In a bid to eliminate the possibility of running a parallel economy, the government has decided to punish those holding more than 10 demonetised notes. Holding of 10 or more demonetised Rs 500 and 1,000 notes will attract a penalty of Rs 10,000 according to a bill introduced in the Lok Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X