ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪವಾಸ, ಪಾರಾಯಣ, ಪಾರಣಿ : ರಂಗ್‌ರಂಗೀನ್ ರಂಜಾನ್

|
Google Oneindia Kannada News

ನವದೆಹಲಿ, ಜು. 16: ದೇಶಾದ್ಯಂತ ರಂಜಾನ್ ಸಂಭ್ರಮ ಮನೆ ಮಾಡಿದೆ. ಮುಸ್ಲಿಮರು ಪವಿತ್ರ ಉಪವಾಸದಲ್ಲಿ ನಿರತರಾಗಿದ್ದಾರೆ. ಸೂರ್ಯಾಸ್ತದ ನಂತರ ಇಫ್ತಾರ್ ಕೂಟಗಳನ್ನು ಆಯೋಜನೆ ಮಾಡಲಾಗುತ್ತಿದೆ.

ಮಸೀದಿಗಳಲ್ಲಿ ಧರ್ಮಗ್ರಂಥದ ಪಠಣ, ವಿಶೇಷ ಪ್ರಾರ್ಥನೆಗಳು ಸಲ್ಲಿಕೆಯಾಗುತ್ತಿದೆ. ಹಬ್ಬದ ಪ್ರಯುಕ್ತ ದಾನ ಧರ್ಮದ ಕಾರ್ಯಕ್ರಮಗಳು ಜೋರಾಗಿ ನಡೆದಿದೆ. ನವದೆಹಲಿ, ಹೈದ್ರಾಬಾದ್, ಮುಂಬೈ, ಬೆಂಗಳೂರು, ಕೋಲ್ಕತ್ತಾ ಸೇರಿದಂತೆ ಮಹಾನಗರಗಳಲ್ಲಿ ಮುಸ್ಲಿಮರು ಪ್ರತಿದಿನ ಪ್ರಾರ್ಥನೆ ಸಲ್ಲಿಕೆ ಮಾಡುತ್ತಿದ್ದಾರೆ.

ಒಂದು ತಿಂಗಳ ಕಾಲ ಉಪವಾಸ ನಡೆಸುವ ಮುಸ್ಲಿಮರು ರಂಜಾನ್ ದಿನ ಅದಕ್ಕೆ ಅಂತ್ಯ ಹಾಡುತ್ತಾರೆ. ಮನಸ್ಸು, ದೇಹ ಶುದ್ಧವಾಗಿ ಆರೋಗ್ಯ ವೃದ್ಧಿಯೊಂದಿಗೆ ಹೊಸ ಚೈತನ್ಯ ದೇಹಕ್ಕೆ ಸಿಗುವುದು ಎಂಬ ನಂಬಿಕೆ ರಂಜಾನ್ ಉಪವಾಸದ ಹಿಂದಿದೆ. ದೇಶಾದ್ಯಂತ ರಂಜಾನ್ ಹಿನ್ನೆಲೆಯಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ನೋಡಿಕೊಂಡು ಬರೋಣ.(ಪಿಟಿಐ ಚಿತ್ರಗಳು)

ಮಸೀದಿಗೆ ಅಲಂಕಾರ

ಮಸೀದಿಗೆ ಅಲಂಕಾರ

ರಂಜಾನ್ ಹಿನ್ನೆಲೆಯಲ್ಲಿ ಅಲಂಕೃತಗೊಂಡಿದ್ದ ಅಹಮದಾಬಾದ್ ನ ಸಿದ್ಧಿ ಸಯ್ಯದ್ ಮಸೀದಿಯ ಚಿತ್ರಣವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿರುವ ನಾಗರಿಕರು.

ಪ್ರಾರ್ಥನೆಗೆ ಸಿದ್ಧತೆ

ಪ್ರಾರ್ಥನೆಗೆ ಸಿದ್ಧತೆ

ಅಹಮದಾಬಾದ್ ನ ಮಸೀದಿಯೊಂದರಲ್ಲಿ ಪ್ರಾರ್ಥನೆಗೆ ಸಿದ್ಧತೆ ಮಾಡಿಕೊಂಡ ಮುಸ್ಲಿಮರು.

ಶ್ರೀನಗರದಲ್ಲಿ ಪ್ರಾರ್ಥನೆ

ಶ್ರೀನಗರದಲ್ಲಿ ಪ್ರಾರ್ಥನೆ

ಉಪವಾಸ ಕೈಗೊಂಡಿರುವ ಮುಸ್ಲಿಮರುಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಪ್ರಾರ್ಥನೆ ಸಲ್ಲಿಕೆ ಮಾಡಿದರು.

ಇಫ್ತಾರ್ ಕೂಟ

ಇಫ್ತಾರ್ ಕೂಟ

ಸಂಜೆ ಉಪವಾಸವನ್ನು ಕೈ ಬಿಟ್ಟ ಬಳಿಕ ಕೋಲ್ಕತ್ತಾದ ಮಸೀದಿಯೊಂದರ ಆವರಣದಲ್ಲಿ ಹಮ್ಮಿಕೊಂಡಿದ್ದ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದ ಮುಸ್ಲಿಮರು.

ಪ್ರಾರ್ಥನೆ ಸಲ್ಲಿಕೆ

ಪ್ರಾರ್ಥನೆ ಸಲ್ಲಿಕೆ

ರಂಜಾನ್ ಪ್ರಯುಕ್ತ ಮುಂಜಾನೆಯೇ ಮುಂಬೈನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಹಬ್ಬ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಧರ್ಮಗ್ರಂಥದ ಓದು

ಧರ್ಮಗ್ರಂಥದ ಓದು

ಜೋಧ್ ಪುರದ ಫಿರೋಜ್ ಖಾನ್ ಶಾಲೆ ವಿದ್ಯಾರ್ಥಿನಿಯರು ರಂಜಾನ್ ಪ್ರಯುಕ್ತ ಇಸ್ಲಾಮಿಕ್ ಪುಸ್ತಕಗಳನ್ನು ಓದಿದರು.

ಪವಿತ್ರ ಪ್ರಾರ್ಥನೆ

ಪವಿತ್ರ ಪ್ರಾರ್ಥನೆ

ಅಲಹಾಬಾದ್ ನ ಮಸೀದಿಯೊಂದರಲ್ಲಿ ಸಂಜೆ ಪ್ರಾರ್ಥನೆ ಸಲ್ಲಿಸಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾದಾಗ.

ಕುರಾನ್ ಪಠಣ

ಕುರಾನ್ ಪಠಣ

ಜಮ್ಮು ಕಾಶ್ಮೀರದ ಶ್ರೀನಗರಲ್ಲಿ ಕುಳಿತು ಭಕ್ತಿಯಿಂದ ಕುರಾನ್ ಗ್ರಂಥವನ್ನು ಪಠಿಸಲಾಯಿತು.

English summary
News in Pics: Indian Muslims celebrating holy Ramadan. For many Muslims around the world, Ramadan is a time to look inward, to weigh the heart's desires and separate out the things that really matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X